Advertisement
ಪ್ರಸಕ್ತ ಸಾಲಿನ ಗಣರಾಜ್ಯೋತ್ಸವದ ಪರೇಡ್ 95 ನಿಮಿಷಗಳ ಕಾಲ ನಡೆಯಲಿದೆ. ಪಥಸಂಚಲನದಲ್ಲಿ 23 ರಾಜ್ಯಗಳ ಸ್ತಬ್ಧ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಸ್ಕಿಲ್ ಇಂಡಿಯಾ, ಬೇಟಿ ಪಢಾವೋ; ಬೇಟಿ ಬಚಾವೋ ಸೇರಿದಂತೆ ಕೇಂದ್ರ ಸರಕಾರದ ಪ್ರಮುಖ ಇಲಾಖೆಗಳ ಟ್ಯಾಬ್ಲೋಗಳು ಪ್ರಮುಖ ಆಕರ್ಷಣೆಯಾಗಿರಲಿವೆ. ಯುಎಇ ರಾಜಕುಮಾರ ಶೇಕ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಶೌರ್ಯ ಪ್ರಶಸ್ತಿ ಪುರಸ್ಕತ 21 ಮಂದಿ ಮಕ್ಕಳನ್ನು ತೆರೆದ ಜೀಪ್‌ನಲ್ಲಿ ಕರೆದೊಯ್ಯಲಾಗುತ್ತದೆ.**
ಗಣರಾಜ್ಯೋತ್ಸವಕ್ಕೂ ಮುನ್ನ ದಾಳಿ: ಇಬ್ಬರು ಯೋಧರು ಹುತಾತ್ಮ
ಗುವಾಹಾಟಿ: ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಉಲ್ಫಾ ಉಗ್ರರು ರವಿವಾರ ಅಸ್ಸಾಂ-ಅರುಣಾಚಲ ಪ್ರದೇಶದ ಗಡಿಯಲ್ಲಿ ಅಟ್ಟಹಾಸ ಮೆರೆದಿದ್ದಾರೆ. ತಿನ್‌ಸುಕಿಯಾ ಜಿಲ್ಲೆಯಲ್ಲಿ ತೆರಳುತ್ತಿದ್ದ ರೈಫಲ್ ವಾಹನದ ಮೇಲೆ ಹಠಾತ್ ದಾಳಿ ನಡೆಸಿದ ಪರಿಣಾಮ ಇಬ್ಬರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ದಾಳಿ ನಡೆದ ಸ್ಥಳದಲ್ಲಿ ದಟ್ಟಾರಣ್ಯ ಇದ್ದು, ಇಲ್ಲಿ ಇನ್ನು ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದೆ.