Advertisement

ಗಣರಾಜ್ಯೋತ್ಸವ ಪರೇಡ್‌ಗೆ ರಫೇಲ್‌, ಅಪಾಚೆ, ಚಿನೂಕ್‌

10:13 AM Jan 15, 2020 | Team Udayavani |

ಹೊಸದಿಲ್ಲಿ: ಕಳೆದ ಅಕ್ಟೋಬರ್‌ನಲ್ಲಿ ಭಾರತೀಯ ವಾಯುಪಡೆಗೆ (ಐಎಎಫ್) ಅಧಿಕೃತವಾಗಿ ಸೇರ್ಪಡೆಗೊಂಡಿರುವ ರಫೇಲ್‌ ಯುದ್ಧ ವಿಮಾನ ಸೇರಿದಂತೆ ಇತ್ತೀಚೆಗೆ ಸೇರ್ಪಡೆಯಾದ ಅಪಾಚೆ, ಚಿನೂಕ್‌ ವಿಮಾನಗಳು ಸೇರಿ ಐಎಎಫ್ನ 144 ಯುದ್ಧ ಪರಿಕರಗಳ ತುಕಡಿಯೊಂದು ದಿಲ್ಲಿಯ ರಾಜಪಥ್‌ನಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಭಾಗವಹಿಸಲಿವೆ.

Advertisement

ಅವುಗಳ ಜತೆಗೆ, ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್‌, ಲಘು ಯುದ್ಧ ಹೆಲಿಕಾಪ್ಟರ್‌ಗಳು, ಭೂಮಿಯಿಂದ ಗಗನಕ್ಕೆ ಚಿಮ್ಮಬಲ್ಲ ಆಕಾಶ್‌, ಅಸ್ತ್ರ ಕ್ಷಿಪಣಿಗಳ ಪ್ರದರ್ಶ ನವೂ ನಡೆಯಲಿದೆ.

‘ಮಿಗ್‌-17 ವಿ5′ ಯುದ್ಧ ವಿಮಾನಗಳು, ಧ್ರುವ ಹೆಲಿಕಾಪ್ಟರ್‌ಗಳು ಇಂಗ್ಲೀಷ್‌ನ “Y’ ಅಕ್ಷರದ ಉಲ್ಟಾ ಮಾದರಿಯಲ್ಲಿ ಹಾರಾಡುವ ಮೂಲಕ “ವೈನ್‌ಗ್ಲಾಸ್‌ ಫಾರ್ಮೇಷನ್‌’ ಪ್ರದರ್ಶನ ನೀಡಲಿವೆ ಎಂದು ಐಎಎಫ್ ಹೇಳಿದೆ. ಐಎಎಫ್ ತುಕಡಿಯ ನೇತೃತ್ವವನ್ನು ಐಎಎಫ್ನ ಫ್ಲೈಟ್‌ ಲೆಫ್ಟನೆಂಟ್‌ ಶ್ರೀಕಾಂತ್‌ ಶರ್ಮಾ ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next