Advertisement
ನಗರದ ಶರಣಬಸವ ವಿಶ್ವವಿದ್ಯಾಲಯ ಆವರಣದಲ್ಲಿ ಮಂಗಳವಾರ 72ನೇ ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕೊಡಗು ಹಾಗೂ ಉತ್ತರ ಕರ್ನಾಟಕ ವಿಪತ್ತಿಗೆ ಸಿಲುಕಿದಾಗ ರಾಜ್ಯದ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 1 ಕೋಟಿ, ಕೋವಿಡ್ ಸಂದರ್ಭದಲ್ಲಿ ಹಗಲಿರುಳುಸೇವೆ ಮಾಡಿದ್ದ ಆಶಾ ಕಾರ್ಯಕರ್ತರಿಗೆ 2 ಲಕ್ಷ ಸಹಾಯಧನ, ಭೀಮಾ ನದಿ ಪ್ರವಾಹಕ್ಕೆ ಸಿಕ್ಕು ತತ್ತರಿಸಿದ ಜನರ ಜೀವನ ಸುಧಾರಿಸಲು 20 ಲಕ್ಷ ಹಾಗೂ ಇಡೀ ದೇಶದ ಅಸ್ಮಿತೆಯಾಗಿರುವ ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ 25 ಲಕ್ಷ ರೂ. ಸಮರ್ಪಿಸಲಾಗಿದೆ. ಕೊವೀಡ್ ಸಂಕಷ್ಟದ ಕಾಲದಲ್ಲಿ ಮೊದಲಿನಿಂದಲೂ
ಮಾಡಿದ್ದ ಅನ್ನದಾಸೋಹವನ್ನು ಕೂಡ ಇನ್ನೂ ಮುಂದುವರೆಸಿದ್ದು, ನೀರು, ನೆರಳು ನೀಡಿ ಪಾಲಿಸಲಾಗುತ್ತಿದೆ ಎಂದರು.
ಅಧ್ಯಾಪಕರು ತಾವು ಸಹ ಅಧ್ಯಯನಶೀಲರು ಎಂದು ಸಾಬೀತುಪಡಿಸಿದ ಶಿಕ್ಷಕ ವರ್ಗಕ್ಕೆ ಡಾ| ಅಪ್ಪ ಅಭಿನಂದನೆ ಸಲ್ಲಿಸಿದರು. ಸಹೋದರಿ ಕೋಮಲ ಎಸ್ ಅಪ್ಪಾ ಮಾತನಾಡಿ, ದೇಶವಾಸಿಗಳಿಗೆ ಆರೋಗ್ಯ ಮತ್ತು ಸಮೃದ್ಧಿಯನ್ನು ಆಶೀರ್ವದಿಸಲಿ ಎಂದು ಶರಣಬಸವೇಶ್ವರರಲ್ಲಿ
ವಿನಮ್ರವಾಗಿ ಪ್ರಾರ್ಥಿಸಿದರಲ್ಲದೇ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸಹ ನಮ್ಮ ಸಂಸ್ಥಾನ ದಾಸೋಹ ಸೇವೆಯನ್ನು ಮುಂದುವರೆಸುವಲ್ಲಿ ಪೂಜ್ಯ ಅವ್ವಾಜಿಯವರ ಶ್ರಮದಾಯಕ ಪ್ರಯತ್ನಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
Related Articles
ಬೋರ್ಡ್ ಆಫ್ ಗವರ್ನರ್‌ನ ಸದಸ್ಯರಾದ ಮಾತೋಶ್ರೀ ಪೂಜ್ಯ ಡಾ| ದಾಕ್ಷಾಯಿಣಿ ಅವ್ವಾಜಿ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಕುಲಪತಿ ಡಾ| ನಿರಂಜನ್ ವಿ. ನಿಷ್ಠಿ, ಸಮಕುಲಪತಿ ಡಾ| ವಿ.ಡಿ. ಮೈತ್ರಿ ಮತ್ತು ಎನ್.ಎಸ್.ದೇವರಕಲ್, ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರಿ, ಡೀನ್ ಡಾ| ಲಕ್ಷ್ಮೀ ಪಾಟೀಲ ಮಾಕಾ ಮತ್ತು ಡಾ| ಬಸವರಾಜ ಮಠಪತಿ, ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಡೀನ್ ಡಾ| ಲಕ್ಷ್ಮೀ ಪಾಟೀಲ ಮಾಕಾ, ಪ್ರಾಚಾರ್ಯರಾದ ಡಾ| ಸುರೇಶ ನಂದಗಾಂವ, ಡಾ| ಎಸ್.ಜಿ. ಡೊಳ್ಳೇಗೌಡರ್, ಡಾ| ಎನ್.
ಎಸ್. ಪಾಟೀಲ ಇತರರು ಇದ್ದರು. ಸಹೋದರಿ ಮಹೇಶ್ವರಿ ಎಸ್.ಅಪ್ಪಾ, ಕೋಮಲ ಎಸ್. ಅಪ್ಪಾ, ಶಿವಾನಿ ಎಸ್. ಅಪ್ಪಾ ಹಾಗೂ ಅಪೂರ್ವ ದೇಶಭಕ್ತಿಗೀತೆ ಹಾಡಿದರು. ಶಿಕ್ಷಕರಾದ ಶಂಕರಗೌಡ ಹೊಸಮನಿ ಮತ್ತು ಚಂದ್ರಕಾಂತ ಪಾಟೀಲ ನಿರೂಪಿಸಿದರು. ಈ ಸಂದರ್ಭದಲ್ಲಿ ಎನ್. ಎಸ್.ಎಸ್ ಅ ಧಿಕಾರಿ ಮತ್ತು ವಿದ್ಯಾರ್ಥಿಗಳಿಂದ ಪರೇಡ್ ನಡೆಸಲಾಯಿತು.
Advertisement