Advertisement

ಜಿಲ್ಲೆ ಆರೆಂಜ್‌ ಪಟ್ಟಿಗೆ ಸೇರಿಸಲು ವರದಿ

04:49 PM Apr 14, 2020 | mahesh |

ಕೊಪ್ಪಳ: ಕೋವಿಡ್-19 ವೈರಸ್‌ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ. ಜಿಲ್ಲೆಯಲ್ಲಿ 80 ಜನರ ಮೇಲೆ
ನಿಗಾ ಇರಿಸಿದ್ದು, ಇವರಲ್ಲದೇ ಮನೆಯಲ್ಲೇ ನಿಗಾದಲ್ಲಿರುವ, ಗುಳೆ ಹೋಗಿ ಬಂದಿರುವ 123 ಜನರ ಗಂಟಲು ದ್ರವ ಪಡೆದು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಇವರಲ್ಲಿ 41 ವರದಿ ನೆಗೆಟಿವ್‌ ಬಂದಿದ್ದು, ಇನ್ನುಳಿದ 82 ಜನರ ವರದಿಗಳು ಬಾಕಿಯಿದೆ.

Advertisement

ಹೌದು. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಹಲವು ನಿರ್ಧಾರ ಕೈಗೊಂಡಿದೆ. ಆದರೂ ಗೃಹಬಂಧನದಲ್ಲಿರುವವ ಮೇಲೂ ಸರ್ಕಾರ ಹೆಚ್ಚಿನ ನಿಗಾ ವಹಿಸಿದೆ. ಜಿಲ್ಲೆಯಲ್ಲಿ ಗುಳೆ ಹೋಗಿ ಬಂದವರ ಗಂಟಲು ದ್ರವ ಮಾದರಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗುತ್ತಿದೆ. ಗಂಟಲು ದ್ರವ ಪಡೆದಾಕ್ಷಣ ಅವರಲ್ಲಿ ಸೋಂಕು ಇದೆ ಎಂಬಂರ್ಥವಲ್ಲ. ಆದರೆ ಅವರು ಅನ್ಯ ರಾಜ್ಯ ಹಾಗೂ ಅನ್ಯ ಜಿಲ್ಲೆಗಳಲ್ಲಿ ಕೆಲಸ ಮಾಡಿ ವಾಪಾಸ್ಸಾಗಿದ್ದು, ಕೊರೊನಾ ವ್ಯಾಪಿಸಿರುವ ಪ್ರದೇಶದಿಂದ ಬಂದವರ ಮೇಲೆ ನಿಗಾ ಇರಿಸಲಾಗಿದೆ.

ಜಿಲ್ಲೆಯಲ್ಲಿರುವ 80 ಜನ ಮನೆಯಲ್ಲೇ 14 ದಿನ ಕ್ವಾರಂಟೈನ್‌ ಪೂರೈಸಿದ್ದಾರೆ. 60 ಜನರು 28 ದಿನ ಪೂರೈಸಿದ್ದಾರೆ. ಇವರಲ್ಲಿ ಮೂವರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ವರದಿ ನೆಗಟಿವ್‌ ಎಂದು ಬಂದಿವೆ. ಸೋಮವಾರದ ಅಂತ್ಯಕ್ಕೆ 19 ಜನರ ಮೇಲೆ ಮನೆಯಲ್ಲೇ ನಿಗಾ ಇರಿಸಿದ್ದು, ಇನ್ನೂ ತಬ್ಲಿಘಿ ಜಮಾತ್‌ಗೆ ಭೇಟಿ ನೀಡಿದವರ ಪೈಕಿ 25 ಜನರಿಗೆ ಮನೆಯಲ್ಲಿಯೇ ಇರುವಂತೆ ಸೂಚಿಸಿದ್ದು, 11 ಜನರು ದೆಹಲಿ ಭಾಗದಲ್ಲಿ ಪ್ರವಾಸ ಮಾಡಿದವರಿದ್ದಾರೆ. ಅವರ ಮೇಲೂ  ನಿಗಾ ಇರಿಸಿದೆ. ಹೈ ರಿಸ್ಕ್ ಪ್ರದೇಶದಲ್ಲಿ ಪ್ರಯಾಣಿಸಿದ 39 ಜನರ ಮೇಲೂ ನಿಗಾ ಇರಿಸಿದೆ. ಇನ್ನೂ ಅನ್ಯ ರಾಜ್ಯ, ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ, ಕಾರ್ಮಿಕರ ಬಗ್ಗೆ ನಿಗಾ ಇರಿಸಿದ್ದು, 123 ಜನರ ಗಂಟಲು ದ್ರವ ಪಡೆದು ರವಾನೆ ಮಾಡಿದೆ. 41 ನೆಗಟಿವ್‌ ಎಂದು ಬಂದಿದೆ. 82 ಜನರ ವರದಿ ಬರಬೇಕಿದೆ.

ಬಿಲ್ವಾಢ ಮಾದರಿ ಅಳವಡಿಕೆ: ರಾಜಸ್ಥಾನದ ಬಿಲ್ವಾಢ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮ ದೇಶಕ್ಕೆ ಮಾದರಿಯಾಗಿದೆ. ಅದೇ
ಮಾದರಿಯನ್ನು ಕೊಪ್ಪಳ ಜಿಲ್ಲೆಯಲ್ಲೂ ಅಳವಡಿಕೆ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಜಿಲ್ಲಾಧಿಕಾರಿ ಸುನೀಲ್‌ ಕುಮಾರ ತಿಳಿಸಿದ್ದಾರೆ.

ಆರೆಂಜ್‌ ಪಟ್ಟಿಗೆ ಸೇರ್ಪಡೆಗೆ ವರದಿ
ರಾಜ್ಯ ಸರ್ಕಾರವು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದ ವಸ್ತುಸ್ಥಿತಿಯ ಕುರಿತು ವರದಿ ಕೇಳಿದೆ. ಗುಳೆ ಹೋದ 22 ಸಾವಿರ ಜನರು ಜಿಲ್ಲೆಗೆ ವಾಪಸ್ಸಾಗಿದ್ದಾರೆ. ಇವರಲ್ಲಿ 20 ಸಾವಿರ ಗ್ರಾಮೀಣ ಭಾಗದವರು. ಎಲ್ಲರ ಮೇಲೂ ನಿಗಾ ವಹಿಸಿದೆ. ಇನ್ನೂ ಗದಗ, ಬಳ್ಳಾರಿ, ವಿಜಯಪುರ, ಬಾಗಲಕೋಟೆ ನಮ್ಮ ಗಡಿ ಜಿಲ್ಲೆಗಳಾಗಿದ್ದು, ಅಲ್ಲಿ ವೈರಸ್‌ ಕಾಣಿಸಿಕೊಂಡಿದೆ. ಕೊಪ್ಪಳ ಜಿಲ್ಲೆ ಮಧ್ಯದಲ್ಲಿದೆ. ಹೀಗಾಗಿ ನಾವು ಸಂಕಷ್ಟದಲ್ಲಿದ್ದೇವೆ. ಸರ್ಕಾರ ಕೊಪ್ಪಳ ಜಿಲ್ಲೆಯನ್ನು ಗ್ರೀನ್‌ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. ನಾವು ರಿಸ್ಕ್ನಲ್ಲಿ ಇರುವುದರಿಂದ ಗ್ರೀನ್‌ ಪಟ್ಟಿಯಿಂದ ಆರೆಂಜ್‌ ಪಟ್ಟಿಗೆ ಸೇರ್ಪಡೆ ಮಾಡುವಂತೆ ವರದಿ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ಸುನೀಲ್‌ ಕುಮಾರ ಅವರು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next