Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಬಿಎಂಪಿಗೆ ಸಂಬಂಧಿಸಿದಂತೆ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪಗಳು ಶುದ್ಧ ಸುಳ್ಳೆಂದು ಲೋಕಾಯುಕ್ತ ತನಿಖಾ ಅಧಿಕಾರಿಗಳು ಸಲ್ಲಿಸಿರುವ ವರದಿಗೂ ಗುತ್ತಿಗೆದಾರರ ಸಂಘದ ಈ ಹಿಂದಿನ ರಾಜ್ಯಾಧ್ಯಕ್ಷ ದಿವಂಗತ ಕೆಂಪಣ್ಣ ಅವರು ಮಾಡಿರುವ ಆರೋಪಕ್ಕೂ ಸಂಬಂಧವಿಲ್ಲ. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಬಿಬಿಎಂಪಿಗೆ ಸಂಬಂಧಿಸಿದಂತೆ ನೀಡಲಾದ ದೂರಿಗೆ ಲೋಕಾಯುಕ್ತ ತನಿಖಾಧಿಕಾರಿಗಳು ವರದಿ ನೀಡಿದ್ದಾರೆ ಎಂದರು.
ಗುತ್ತಿಗೆದಾರರ ಸಂಘದ ಹಿಂದಿನ ರಾಜ್ಯಾಧ್ಯಕ್ಷ ಕೆಂಪಣ್ಣ ಅವರು ಹಿಂದಿನ ಬಿಜೆಪಿ ಸರ್ಕಾರ ಆಡಳಿತ ಅವಧಿಯಲ್ಲಿ 40 ಪರ್ಸೆಂಟ್ ಕಮಿಷನ್ ಕುರಿತಾಗಿ ಪ್ರಧಾನಿಗೆ ಪತ್ರ ಬರೆಯುವುದರ ಜತೆಗೆ ತದ ನಂತರ ಸಿದ್ಧರಾಮಯ್ಯ ಅವರಿಗೂ ದೂರು ಸಲ್ಲಿಸಿದ್ದರ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ರಚನೆ ಮಾಡಲಾಗಿದೆ. ಈಗ ಸಮಿತಿ ಎಲ್ಲ ಕಡೆಯಿಂದ ಮಾಹಿತಿ ಮತ್ತು ಅಭಿಪ್ರಾಯ ಸಂಗ್ರಹಿಸುತ್ತಿದೆ. ಹೀಗಾಗಿ ನ. 20ರಂದು ನ್ಯಾ. ಮೋಹನದಾಸ್ ಸಮಿತಿ ರಾಜ್ಯ ಗುತ್ತಿಗೆದಾರ ಸಂಘಕ್ಕೆ ಆಹ್ವಾನ ನೀಡಿ ಮಾಹಿತಿ ಪ್ರಮುಖವಾಗಿ ದಾಖಲೆಗಳ ಸಲ್ಲಿಸುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ 40 ಪರ್ಸೆಂಟ್ ಕಮಿಷನ್‌ಗೆ ಸಂಬಂಧಿಸಿದಂತೆ ರಾಜ್ಯಾದಾದ್ಯಂತ ಸಂಗ್ರಹಿಸಲಾದ ಎಲ್ಲ ದಾಖಲೆಗಳ ಸಮಿತಿಗೆ ಸಲ್ಲಿಸಲಿದೆ ಎಂದು ಶೇಗಜಿ ತಿಳಿಸಿದರು.
Related Articles
Advertisement
ಬಿಬಿಎಂಪಿಗೆ ಸಂಬಂಧಿಸಿದಂತೆ ಮಾತ್ರ ಲೋಕಾಯುಕ್ತ ತನಿಖಾಧಿಕಾರಿಗಳು ನೀಡಿರುವ ಕಮಿಷನ್ ಆರೋಪ ಸುಳ್ಳು ಎಂದಿರುವುದನ್ನೇ ವಿಪಕ್ಷದವರು ಗುತ್ತಿಗೆದಾರರ ಸಂಘದ ಹಿಂದಿನ ರಾಜ್ಯಾಧ್ಯಕ್ಷ ಕೆಂಪಣ್ಣ ಆರೋಪ ಸುಳ್ಳೆಂದು ಬಿಂಬಿಸುತ್ತಿರುವುದು ಸರಿಯಲ್ಲ. ಸಂಘದ ಆರೋಪಕ್ಕೆ ಸದಾ ಬದ್ದವಿದ್ದು, ತಮ್ಮ ಬಳಿ ಎಲ್ಲ ಆಡಿಯ-ವಿಡಿಯೋಗಳ ಜತೆಗೆ ದಾಖಲೆಗಳನ್ನು ನ್ಯಾ. ನಾಗಮೋಹನದಾಸ್ ಸಮಿತಿಗೆ ಸಂಘದ ಎಲ್ಲ ಪದಾಧಿಕಾರಿಗಳೊಂದಿಗೆ ಸಲ್ಲಿಸಲಾಗುವುದು ಎಂದು ಜಗನ್ನಾಥ ಶೇಗಜಿ ಪುನರುಚ್ಚರಿಸಿದರು.
ಕಾಂಗ್ರೆಸ್ ಸರ್ಕಾರದಲ್ಲೂ ಕಮಿಷನ್ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲೂ ಶೇ.10ರಿಂದ 15ರವರೆಗೆ ಕಮಿಷನ್ ಕೇಳಿ ಬರುತ್ತಿದೆ. ಕೆಕೆಆರ್‌ಡಿಬಿ ಕಾಮಗಾರಿಯಲ್ಲಿ ಪ್ರಮುಖವಾಗಿ ಕೇಳಿ ಬಂದಿದೆ. ಇದರಲ್ಲಿ ಎಲ್ಲ ಪಕ್ಷದ ಶಾಸಕರು ಸೇರಿದ್ದಾರೆ. ಇದರ ಕುರಿತಾಗಿಯೂ ದಾಖಲೆಗಳ ಸಂಗ್ರಹಿಸಲಾಗುತ್ತಿದೆ ಎಂದು ಶೇಗಜಿ ತಿಳಿಸಿದರು. ಸಂಘದ ಪದಾಧಿಕಾರಿಗಳಾದ ಮೋಹಸೀನ್ ಪಟೇಲ್, ಸಂಜಯ್ ಆರ್.ಕೆ, ಗುರುನಂಜಯ್ಯ, ಶಿವಾನಂದ ಪಾಟೀಲ್, ರಾಜಶೇಖರ ಬುದ್ದಿವಂತ ಸೇರಿದಂತೆ ಇತರ ಪದಾಧಿಕಾರಿಗಳು ಹಾಜರಿದ್ದರು.