Advertisement

100 ಜನರ ವರದಿ ಬಾಕಿ

12:05 PM May 15, 2020 | Suhan S |

ಬೆಳಗಾವಿ: ಕಳೆದ ಒಂದೆರಡು ದಿನಗಳಿಂದ ನಿರಾಳವಾಗಿದ್ದ ಬೆಳಗಾವಿಯಲ್ಲಿ ಗುರುವಾರ ಮತ್ತೆ ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ.

Advertisement

ಮುಂಬೈದಿಂದ ಬಂದಿದ್ದ ಗರ್ಭಿಣಿಗೆ ಸೋಂಕು ತಗುಲಿರುವುದು ಸಹಜವಾಗಿಯೇ ಬೆಳಗಾವಿ ನಗರದಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲೆಯಲ್ಲಿ ಇದುವರೆಗೆ 116 ಜನರಿಗೆ ಸೋಂಕು ತಗುಲಿದ್ದು ಅದರಲ್ಲಿ 54 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಓರ್ವ ವೃದ್ಧೆ ಮೃತಪಟ್ಟಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಈಗ 61 ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು ಅದರಲ್ಲಿ ಎಂಟು ಜನ ಬಾಗಲಕೊಟೆ ಜಿಲ್ಲೆಗೆ ಸೇರಿದವರಾಗಿದ್ದಾರೆ. ಜಿಲ್ಲೆಯಲ್ಲಿ ಇವತ್ತಿನವರೆಗೆ 8106 ಜನರ ಮೇಲೆ ನಿಗಾ ವಹಿಸಲಾಗಿದೆ.

ಇದುವರೆಗೆ 517 ಜನರು 14 ದಿನಗಳ ಗೃಹ ನಿಗಾದಲ್ಲಿದ್ದಾರೆ. 61 ಜನರು ಆಸ್ಪತ್ರೆಯ ಐಸೋಲೇಷನ್‌ ಘಟಕದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 5606 ಜನರು 14 ದಿನಗಳ ಗೃಹ ನಿಗಾ ಪೂರ್ಣಗೊಳಿಸಿದ್ದರೆ 1922 ಜನರು 28 ದಿನಗಳ ಗೃಹ ನಿಗಾ ಅವಧಿ ಮುಕ್ತಾಯಗೊಳಿಸಿದ್ದಾರೆ. ಇವತ್ತಿನವರೆಗೆ 6811 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು 6519 ಜನರ ವರದಿ ನಕಾರಾತ್ಮಾಕವಾಗಿವೆ. ಒಟ್ಟು 100 ಜನರ ವರದಿಗಾಗಿ ಕಾಯಲಾಗುತ್ತಿದೆ ಎಂದು ಸರಕಾರ ಬಿಡುಗಡೆ ಮಾಡಿರುವ ವೈದ್ಯಕೀಯ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next