Advertisement

ಸುಂಕ ಹೇರಿದ್ದಕ್ಕೆ ವರದಿ ಸೇಡು

01:52 AM Jun 24, 2019 | Team Udayavani |

ಹೊಸದಿಲ್ಲಿ/ವಾಷಿಂಗ್ಟನ್‌: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯಾಗುತ್ತಿದೆ ಎಂಬ ಅಮೆರಿಕ ಸಂಸತ್‌ ಮತ್ತು ವಿದೇಶಾಂಗ ಸಚಿವಾಲಯದ ವರದಿ ಯಲ್ಲಿನ ಅಸಲಿಯತ್ತು ಬೇರೆಯೇ ಇದೆ ಎಂಬ ಅಂಶ ಬಹಿರಂಗವಾಗಿದೆ. ರಷ್ಯಾ ಜತೆಗೆ ಮೋದಿ ಸರಕಾರ ಮಾಡಿ ಕೊಂಡಿರುವ ಎಸ್‌-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಗೆ ಅಮೆರಿಕ ಸರಕಾರ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದೆ. ಈ ರಕ್ಷಣಾ ವ್ಯವಸ್ಥೆಯ ಬದಲಾಗಿ ಆರ್‌ಕ್ಯೂ-4 ಎ ಗ್ಲೋಬಲ್‌ ಹ್ಯಾಕ್‌ ಮಿಲಿಟರಿ ಸರ್ವಿಲೆನ್ಸ್‌ ಡ್ರೋನ್‌ ಖರೀದಿ ಮಾಡಬೇಕು ಎಂಬ ಒತ್ತಾಸೆಯನ್ನು ಹೊಂದಿದೆ.

Advertisement

ಜತೆಗೆ ಚೀನ ಜತೆಗೆ ವಾಣಿಜ್ಯಿಕ ಚಟುವಟಿಕೆಗಳ ಕ್ಷೇತ್ರದಲ್ಲಿ ತೆರಿಗೆ ಜಟಾಪಟಿಗೆ ಇಳಿದಿರುವ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಅಮೆರಿಕದ ಸರಕಾರ ಭಾರತ ಹರ್ಲೆ ಡೇವಿಡ್‌ಸನ್‌ ಬೈಕ್‌ ಸಹಿತ ತನ್ನ ವಸ್ತು-ಸರಕುಗಳಿಗೆ ಮಿತಿ ಮೀರಿದ ಸುಂಕ ಹೇರುತ್ತಿದೆ ಎಂದು ಆರೋಪಿಸುತ್ತಿದೆ. ಅಮೆರಿಕದ ಎಚ್ಚರಿಕೆಗೆ ಬಗ್ಗದೆ 28 ವಸ್ತುಗಳಿಗೆ ಸುಂಕ ಮಿತಿ ಹೆಚ್ಚು ಮಾಡಿದ್ದೇ, “ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ’ ಎಂಬ ವರದಿಗೆ ಮುನ್ನುಡಿ ಎಂದು “ಟೈಮ್ಸ್‌ ನೌ’ ವರದಿ ಮಾಡಿದೆ. ಇದರ ಜತೆಗೆ ಟರ್ಕಿ ಸರಕಾರದ ಜತೆಗೆ ಕೂಡ ತಗಾದೆಯನ್ನು ಅಮೆರಿಕ ಅದ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾಡಿದ್ದಾರೆ.

ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತ ಮತ್ತು ಚೀನದಲ್ಲಿ ಉತ್ತಮ ಪರಿಸರವಿಲ್ಲ. ಅದರ ಮಾಲಿನ್ಯಕ್ಕೆ ಎರಡೂ ರಾಷ್ಟ್ರಗಳು ಗಣನೀಯ ಕೊಡುಗೆ ನೀಡುತ್ತವೆ ಎಂದು ಟೀಕಿಸಿದ್ದರು.

ಅಮೆರಿಕದ ಎಚ್ಚರಿಕೆಗೆ ಕಿವಿಗೊಡದೆ, ಮೋದಿ ಸರಕಾರ ರಷ್ಯಾ ಜತೆಗಿನ ಡೀಲ್‌ ಮುಂದುವರಿಸಲು ಈಗಾಗಲೇ ನಿರ್ಧರಿಸಿದೆ. ಅದಕ್ಕೆ ಪೂರಕವಾಗಿಯೇ ಅಮೆರಿಕ ವಿದೇಶಾಂಗ ಸಚಿವ ಮೈಕ್‌ ಪೊಂಪೊÂà ಜೂ. 25ರಿಂದ 27ರ ವರೆಗೆ ಹೊಸದಿಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಸುಂಕ ವಿಚಾರದ ಬಗ್ಗೆ ಚರ್ಚೆಯಾಗಲಿದೆ ಎಂದು ಹೇಳಲಾಗುತ್ತಿದೆ.

ವರದಿಗೆ ಖಂಡನೆ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬ ಅಮೆರಿಕದ ವಿದೇಶಾಂಗ ಇಲಾಖೆ ವರದಿಯನ್ನು ವಿದೇಶಾಂಗ ಇಲಾಖೆ ಅತ್ಯುಗ್ರವಾಗಿ ಖಂಡಿಸಿದೆ. ಈ ವರದಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೊಸದಿಲ್ಲಿಯಲ್ಲಿ ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ರವಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ದೇಶದ ಪ್ರಜೆಗಳಿಗೆ ಇರುವ ಸಾಂವಿಧಾನಿಕ ಹಕ್ಕಿನ ಬಗ್ಗೆ ವಿಮರ್ಶೆ ನಡೆಸಲು ಇತರ ಯಾವುದೇ ರಾಷ್ಟ್ರಕ್ಕೆ ಹಕ್ಕು ಇಲ್ಲ ಎಂದು ಅಮೆರಿಕದ ವರದಿಗೆ ಖಡಕ್‌ ಉತ್ತರ ನೀಡಿದ್ದಾರೆ.

ಭಾರತ ಹೊಂದಿರುವ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಹೆಮ್ಮೆ ಹೊಂದಿದೆ. ಸಹಿಷ್ಣುತೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯ ವ್ಯವಸ್ಥೆಯ ಬಗ್ಗೆ ಕೇಂದ್ರ ಸರಕಾರ ಬದ್ಧವಾಗಿದೆ. ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಮತ್ತು ಬಲಿಷ್ಠ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಅತ್ಯುತ್ತಮ ರೀತಿಯಲ್ಲಿ ಜಾತ್ಯತೀತ ವ್ಯವಸ್ಥೆ ಇದೆ ಎಂದು ಅವರು ತಿಳಿಸಿದ್ದಾರೆ.

ಅಲ್ಪಸಂಖ್ಯಾಕರೂ ಸಹಿತ ಎಲ್ಲ ವರ್ಗದ ಪ್ರಜೆಗಳಿಗೆ ಭಾರತದಲ್ಲಿ ಮೂಲಭೂತ ಹಕ್ಕುಗಳನ್ನು ಸಂವಿಧಾನಬದ್ಧವಾಗಿಯೇ ನೀಡಲಾಗಿದೆ. ಜತೆಗೆ ಧಾರ್ಮಿಕ ಸ್ವಾತಂತ್ರ್ಯವನ್ನೂ ನೀಡಲಾಗಿದೆ ಎಂದು ರವೀಶ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಏನು ಪ್ರಸ್ತಾವವಾಗಿತ್ತು?: ಅಮೆರಿಕ ವಿದೇಶಾಂಗ ಸಚಿ ವಾಲಯ ಮತ್ತು ಸಂಸತ್‌ ಜಂಟಿಯಾಗಿ ಸಿದ್ಧಪಡಿಸಿರುವ “ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ’ ವರದಿಯಲ್ಲಿ ಭಾರತದಲ್ಲಿ ಹಿಂದೂ ಸಂಘಟನೆಗಳು ಅಲ್ಪಸಂಖ್ಯಾkರಿಗೆ ವಿಶೇಷವಾಗಿ ಮುಸ್ಲಿಮರಿಗೆ ಗೋವುಗಳನ್ನು ಸಾಗಿಸಲು ತಡೆಯೊಡ್ಡುವ ನೆಪದಲ್ಲಿ ಥಳಿಸಿ, ಹತ್ಯೆ ಮಾಡಿವೆ ಎಂದು ಉಲ್ಲೇಖೀಸಲಾಗಿತ್ತು. ಕುತೂಹಲದ ವಿಚಾರವೆಂದರೆ ಕಳೆದ ವಾರ ಖುದ್ದು ಅಮೆರಿಕ ವಿದೇಶಾಂಗ ಸಚಿವ ಮೈಕ್‌ ಪೊಂಪೊÂà ಅವರೇ ಈ ವಿವಾದಾತ್ಮಕ ವರದಿ ಬಿಡುಗಡೆ ಮಾಡಿದ್ದರು.

ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅಮೆರಿಕ ಬಿಡುಗಡೆ ಮಾಡಿರುವ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಬೇರೊಂದು ದೇಶಕ್ಕೆ ಭಾರತದ ಪ್ರಜೆಗಳಿಗೆ ನೀಡಲಾಗಿರುವ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಅಧಿಕಾರವೇ ಇಲ್ಲ.
-ರವೀಶ್‌ ಕುಮಾರ್‌, ವಿದೇಶಾಂಗ ಇಲಾಖೆ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next