ನವದೆಹಲಿ: ತನ್ನನ್ನು ತಾನು ಸುತ್ತುವ ಭೂಮಿಯ ತಿರುಳು(ಕೋರ್) ಕುರಿತು ಮಹತ್ವದ ಮಾಹಿತಿಯೊಂದು ಹೊರ ಬಿದ್ದಿದೆ. ಘನ ಲೋಹದ ಈ ತಿರುಳು ತಿರುಗುವ ವೇಗ ತಗ್ಗಿದ್ದಲ್ಲದೇ, ಅದು ವಿರುದ್ಧ ದಿಕ್ಕಿನಲ್ಲಿ ತಿರುಗಲಾರಂಭಿಸಿದೆ!
ಭೂ ಗರ್ಭದ ಈ ತಿರುಳಿನ ತಿರುಗು ವಿಕೆ ವೇಗ ಮತ್ತು ದಿಕ್ಕಿನ ಬಗ್ಗೆ ಭೂಕಂಪ ಶಾಸ್ತ್ರಜ್ಞರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಗಳಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ತಿರುಗುವಿಕೆಯಲ್ಲಿ ಸಾಕಷ್ಟು ಬದಲಾ ವಣೆಗಳಾಗಿರುವುದಕ್ಕೆ ಸಾಕ್ಷ್ಯ ಸಿಗುತ್ತಿವೆ ಎಂದು ಸಿಎನ್‌ಎನ್ ವರದಿ ಮಾಡಿದೆ.
2023ರಲ್ಲಿ ಪ್ರಸ್ತಾಪಿಸಲಾದ ಒಂದು ಮಾದರಿಯು, ಈ ಹಿಂದೆ ತಿರುಳು ಭೂಮಿಗಿಂತ ವೇಗವಾಗಿ ತಿರುಗುತ್ತಿತ್ತು. ಆದರೆ ಈಗ ನಿಧಾನವಾಗಿ ತಿರುಗುತ್ತಿದೆ.
ಒಂದು ಅವಧಿಗೆ ತಿರುಗುವಿಕೆಯು ಭೂಮಿಯ ತಿರುಗುವಿಕೆಗೆ ಹೊಂದಿಕೆ ಯಾಯಿತು. ಬಳಿಕ ಇನ್ನಷ್ಟು ನಿಧಾನವಾ ಯಿತು, ಅಂತಿಮವಾಗಿ ಸುತ್ತಲಿನ ದ್ರವ ಪದರಗಳಿಗೆ ಹೋಲಿಸಿದರೆ ಹಿಮ್ಮುಖವಾಗಿ ಅದು ಚಲಿಸುತ್ತಿದೆ ಎಂದು ವರದಿ ತಿಳಿಸಿದೆ. ಆದರೆ, ಈ ವಾದಕ್ಕೆ ಎಲ್ಲರೂ ಸಮ್ಮತಿಸಿಲ್ಲ. ಭೂಗರ್ಭ ಚಲನೆಯನ್ನು ಸ್ಯಾಂಪಲ್ ಇಲ್ಲವೇ ವೀಕ್ಷಣೆ ಮೂಲಕ ಪತ್ತೆ ಮಾಡುವುದು ಅಸಾಧ್ಯ. ಭೂಕಂಪ ದ ಅಲೆಗಳ ಅಧ್ಯಯನದಿಂದ ಭೂಕಂಪ ಶಾಸ್ತ್ರಜ್ಞರು ಮಾಹಿತಿ ಕಲೆ ಹಾಕುತ್ತಾರೆ.