Advertisement

ಕೇಬಲ್‌ ಚಾನೆಲ್‌ನಲ್ಲಿ  ಅನಪೇಕ್ಷಿತ ಕಾರ್ಯಕ್ರಮ ದೂರು ನೀಡಿ

02:50 AM Jul 16, 2017 | Team Udayavani |

ಉಡುಪಿ: ಕೇಬಲ್‌ ವಾಹಿನಿಗಳಲ್ಲಿ ಪ್ರಸಾರವಾಗುವ ಅನಪೇಕ್ಷಿತ ಕಾರ್ಯಕ್ರಮಗಳ ವಿರುದ್ಧ ಸಾರ್ವಜನಿಕರು ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಯಲ್ಲಿ ಪ್ರಾರಂಭಿಸಿರುವ ದೂರು ಕೋಶಕ್ಕೆ ದೂರು ನೀಡಿ ಎಂದು ಅಪರ ಜಿಲ್ಲಾಧಿಕಾರಿ ಜಿ. ಅನುರಾಧಾ ಅವರು ಹೇಳಿದರು.

Advertisement

ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಕೇಬಲ್‌ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಬಲ್‌ ವಾಹಿನಿಗಳಲ್ಲಿ ಪ್ರಸಾರವಾಗು ವಂತಹ ಅನಪೇಕ್ಷಿತ ಯಾವುದೇ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಅತೃಪ್ತಿ ಉಂಟು ಮಾಡಿದರೆ ಅಥವಾ ಯಾವುದೇ ಸಮುದಾಯಕ್ಕೆ ತೊಂದರೆ ಯಾಗುವ ರೀತಿಯಲ್ಲಿ ಪ್ರಸಾರವಾಗಿದ್ದರೆ ಉಡುಪಿ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಯಲ್ಲಿ ಪ್ರಾರಂಭಿಸಿರುವ ಕೇಬಲ್‌ ದೂರು ಕೋಶ (0820-2524807) ಇಲ್ಲಿಗೆ ಮಾಹಿತಿ ಹಾಗೂ ಲಿಖೀತ ದೂರು ನೀಡಿದಲ್ಲಿ ಸಂಬಂಧ‌ಪಟ್ಟ ಕೇಬಲ್‌ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

ಆಪರೇಟರ್-ಮಾಹಿತಿ ಒದಗಿಸಿ

ಜಿಲ್ಲೆಯ ಎಲ್ಲ ನೋಂದಾಯಿತ ಕೇಬಲ್‌ ಆಪರೇಟರ್‌ಗಳು ತಮ್ಮ ವಿವರಗಳನ್ನು ಈ ಸಮಿತಿಗೆ ನೀಡಲು ಈಗಾಗಲೇ ಮಾಹಿತಿ ನೀಡಲಾಗಿದೆ. ಈ ಸಂಬಂಧ ಹಲವರು ಮಾಹಿತಿಗಳನ್ನು ನೀಡಿರುತ್ತಾರೆ. ಮಾಹಿತಿ ನೀಡದವರ ಬಗ್ಗೆ ತಿಳಿದು ಬಂದರೆ ಅಂತಹವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಪರೇಟರ್‌ಗಳಿಗೆ ಸಂದೇಶ ರವಾನಿಸಿದ್ದಾರೆ.
ಕೇಬಲ್‌ ನಿರ್ವಹಣೆ ಕಾಯ್ದೆ ಬಗ್ಗೆ ಜಿಲ್ಲೆಯಲ್ಲಿ ಅರಿವು ಮೂಡಿಸಲು ಪ್ರತ್ಯೇಕ ಕಾರ್ಯಾಗಾರ ಏರ್ಪಡಿಸಲು ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಜಿಲ್ಲಾ ವಾರ್ತಾಧಿಕಾರಿಗಳಿಗೆ ಅಪರ ಡಿಸಿ ಸೂಚನೆ ನೀಡಿದರು.

Advertisement

ಸಮಿತಿಯ ಸದಸ್ಯರಾದ ಪವರ್‌ ಸಂಸ್ಥೆಯ ದಿವ್ಯಾ ರಾಣಿ, ಉಪನ್ಯಾಸಕ  ಡಾ| ದುಗ್ಗಪ್ಪ ಕಜೆಕಾರ್‌, ನಿವೃತ್ತ ಉಪನ್ಯಾಸಕ ರಾಮಕೃಷ್ಣ ರಾವ್‌, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next