ಪುಂಜಾಲಕಟ್ಟೆ : ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಪಕ್ಷ ಬಲವರ್ಧನೆಗೆ ಹಾಗೂ ಸಂಘಟನೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರಗಳ ಗ್ರಾ.ಪಂ.ಗಳಲ್ಲಿ ಹಮ್ಮಿಕೊಂಡ ಪಂ. ಮಿಲನ ಕಾರ್ಯಕ್ರಮ ಅರಳ ಗ್ರಾ.ಪಂ. ವಲಯ ಮಟ್ಟದಲ್ಲಿ ಕುಟ್ಟಿಕಳ ಜಂಕ್ಷನ್‌ನಲ್ಲಿ ಜರಗಿತು.
ಮಾಜಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ, ಪಕ್ಷದ ಕಾರ್ಯಕರ್ತರು ಪಕ್ಷದ ಸಂಘಟನೆ ಹಾಗೂ ಬಲವರ್ಧನೆ ಯಲ್ಲಿ ತೊಡಗಿಸಿಕೊಂಡು ಪಕ್ಷವನ್ನು ಬಲಿಷ್ಠಗೊಳಿಸಿ ಮುಂದಿನ ಗ್ರಾ.ಪಂ. ಚುನಾವಣೆಯನ್ನು ಎದುರಿಸಬೇಕು. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಸೋಲನ್ನು ಸವಾ ಲಾಗಿ ಸ್ವೀಕರಿಸಿ ಅಪಪ್ರಚಾರ ಹಾಗೂ ಸುಳ್ಳು ಆರೋಪಗಳಿಗೆ ತಕ್ಕ ಉತ್ತರ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಕಾರ್ಯಕರ್ತರು ಪಕ್ಷದ ಆಸ್ತಿ ಯಾಗಿದ್ದು, ಹೊಸ ಹುಮ್ಮಸ್ಸಿನಿಂದ ಸಂಘಟಿತರಾಗಿ ಪಕ್ಷದ ಬಲವರ್ಧನೆ ನಡೆಸಬೇಕಾಗಿದೆ. ಕಳೆದ ಚುನಾ ವಣೆಗಳಲ್ಲಿ ಪಕ್ಷದ ಹಿನ್ನಡೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಪಕ್ಷದ ಮುಖಂಡರಾದ ಜಗದೀಶ್ ಕೊೖಲ, ರಮೇಶ್ ನಾಯಕ್ ರಾಯಿ, ರಿಯಾಜ್ ಹುಸೈನ್ ಬಂಟ್ವಾಳ, ದೇವಪ್ಪ ಕರ್ಕೇರ ಕರ್ಪೆ ಉಪಸ್ಥಿತರಿದ್ದರು.
ವಲಯ ಕಾಂಗ್ರೆಸ್ ಹಾಗೂ ಬೂತ್ ಸಮಿತಿಯನ್ನು ಪುನರ್ ರಚಿಸ ಲಾಯಿತು. ಕಾಂಗ್ರೆಸ್ ಪಕ್ಷದ ಅರಳ ಗ್ರಾ.ಪಂ. ಸಮಿತಿ ಅಧ್ಯಕ್ಷರನ್ನಾಗಿ ಅಶ್ರಫ್ ಕುಟ್ಟಿಕಳ ಅವರನ್ನು ಆಯ್ಕೆ ಮಾಡಲಾಯಿತು. ಬೂತ್ ಸಮಿತಿಗಳ ಅಧ್ಯಕ್ಷರಾಗಿ ಪುರಂದರ ಶೆಟ್ಟಿ, ಸಂತೋಷ್ ಜೋಯ್ ಪಿಂಟೋ, ಉಸ್ಮಾನ್, ಹನೀಫ್ ಅವರನ್ನು ಆಯ್ಕೆ ಮಾಡಲಾಯಿತು. ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಜೈಸನ್ ಲೋಬೋ, ಮಹಿಳಾ ಸಮಿತಿ ಅಧ್ಯಕ್ಷರಾಗಿ ಶಶಿಕಲಾ ಆಯ್ಕೆಯಾದರು.
ಬೂತ್ ಸಮಿತಿಯ ಅಧ್ಯಕ್ಷ ಉಸ್ಮಾನ್ ಸ್ವಾಗತಿಸಿ, ಗ್ರಾ.ಪಂ. ಸದಸ್ಯ ಎಂ.ಬಿ. ಅಶ್ರಫ್ ವಂದಿಸಿದರು.