Advertisement

ಪೌರ ಕಾರ್ಮಿಕರ ಉಪಾಹಾರ ಸೇವನೆಗೆ ಬದಲಿ ವ್ಯವಸ್ಥೆ: ರೂಪಾ

11:50 AM May 20, 2019 | Team Udayavani |

ಹಾಸನ: ನಗರದ ಮಹಾರಾಜ ಉದ್ಯಾನವನದ ರಂಗ ಮಂದಿರದಲ್ಲಿ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಸೇವನೆಗೆ ವ್ಯವಸ್ಥೆ ಮಾಡಲಾಗುವುದು ಎಂದು ನಗರಸಭೆ ಆಯಕ್ತೆ ರೂಪಾಶೆಟ್ಟಿ ಹೇಳಿದರು.

Advertisement

ನಗರದ ಮಹಾರಾಜ ಉದ್ಯಾನವನದ ಶೌಚಾಲಯದ ಪಕ್ಕ ಮರದ ಕೆಳಗೆ ಪೌರ ಕಾರ್ಮಿಕರು ಬೆಳಗಿನ ಉಪಾಹಾರ ಸೇವನೆ ಮಾಡುತ್ತಿದ್ದಾರೆ. ಮಳೆ, ಬಿಸಿಲಿನಲ್ಲಿ ತೊಂದರೆ ಅನುಭವಿಸುತ್ತಿದ್ದು, ಉಪಾಹಾರ ಸೇವನೆಗೆ ಪ್ರತ್ಯೇಕ ಜಾಗದ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಪೌರ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಹೆತ್ತೂರು ನಾಗರಾಜ್‌ ಹಾಗೂ ಅಧ್ಯಕ್ಷ ಲೋಕೇಶ್‌ ಅವರ ನೀಡಿದ ದೂರಿನ ಹಿನ್ನೆಲೆಯಲ್ಲಿ ನಗರಸಬೆ ಆಯಕ್ತೆ ರೂಪಾಶೆಟ್ಟಿ ಭಾನುವಾರ ಬೆಳಗ್ಗೆ ಭೇಟಿ ನೀಡಿ ಪೌರ ಕಾರ್ಮಿಕರಿಂದ ಸಮಸ್ಯೆ ಆಲಿಸಿದರು.

ಕಳೆದ ಮೂರು ವರ್ಷಗಳಿಂದ ಶೌಚಾಲಯದ ಪಕ್ಕದಲ್ಲಿನ ಮರದ ಕೆಳಗೆ ಉಪಾಹಾರ ಸೇವನೆ ಮಾಡುತ್ತಿದ್ದೇವೆ. ಮಳೆ ಬಂದರೆ ಸಾಕಷ್ಟು ತೊಂದರೆ ಯಾಗುತ್ತದೆ. ಬೇಸಿಗೆಯಲ್ಲಿಯೂ ಕಷ್ಟವಾಗುತ್ತಿದೆ. ಆಹಾರ ಸೇವನೆ ಮಾಡುವಾಗ ಮರದ ಮೇಲಿಂದ ಹುಳಹುಪ್ಪಟೆಗಳು ಬೀಳುತ್ತವೆ.

ಈ ಬಗ್ಗೆ ಬದಲಿ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರೂ ಯಾರೂ ಗಮನಹರಿಸಿರಲಿಲ್ಲ. ನಮಗೆ ಬದಲಿ ಜಾಗದ ವ್ಯವಸ್ಥೆ ಮಾಡಿಕೊಡುವಂತೆ ಇದೆ ವೇಳೆ ಕಾರ್ಮಿಕರು ಮನವಿ ಮಾಡಿದರು.

ಪೌರ ಕಾರ್ಮಿಕರ ಸಮಸ್ಯೆ ಆಲಿಸಿದ ಪೌರಾ ಯುಕ್ತರು ಸ್ಥಳ ಪರಿಶೀಲನೆ ನಡೆಸಿ ರಂಗಮಂದಿರ ದಲ್ಲಿ ಸೇವನೆ ಮಾಡಿ ಎಂದು ಸಲಹೆ ನೀಡಿದರು.

Advertisement

ಪೌರಾಯುಕ್ತೆ ರೂಪಶೆಟ್ಟಿ ಪೌರಕಾರ್ಮಿಕರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳು ವುದು ನಗರಸಭೆಯ ಜವಾಬ್ದಾರಿಯಾಗಿದೆ. ಉಪಾಹಾರದ ಗುಣಮಟ್ಟದ ಲೋಪ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next