Advertisement

Siddaramaiah 1984ರಲ್ಲೇ ಸಿಎಂಗೆ ಬದಲಿ ನಿವೇಶನ: ಆರ್‌ಟಿಐ ಮಾಹಿತಿ

01:14 AM Aug 06, 2024 | Team Udayavani |

ಮೈಸೂರು: ಸಿಎಂ ಸಿದ್ದರಾಮಯ್ಯ ಅವರಿಗೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿರುವ ಮುಡಾ ಹಗರಣದ ಬೆನ್ನಲ್ಲೇ, ಸಿದ್ದರಾಮಯ್ಯ 1984ರಲ್ಲಿ ಪಶುಸಂಗೋಪನೆ ಸಚಿವರಾಗಿದ್ದ ಸಂದರ್ಭ ಮೈಸೂರಿನ ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ (ಈಗಿನ ಮುಡಾ)ಯಿಂದ ಬದಲಿ ನಿವೇಶನ ಪಡೆದಿದ್ದರು ಎನ್ನಲಾಗಿದೆ.

Advertisement

ಈ ಸಂಬಂಧ ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರಿಗೆ ಮಾಹಿತಿ ಹಕ್ಕಿನ ಅಡಿ ಮುಡಾ ಅಧಿಕಾರಿಗಳು ನೀಡಿರುವ ದಾಖಲೆಗಳಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.

ಉದಯವಾಣಿ ಜತೆ ಮಾತನಾಡಿದ ಗಂಗಾರಾಜು, 1984ರ ಎಪ್ರಿಲ್‌ನಲ್ಲಿ ಮೈಸೂರಿನ ಜಯನಗರ-ತೊಣಚಿಕೊಪ್ಪಲು 2ನೇ ಹಂತದ ಎಂ. ಬ್ಲಾಕ್‌ ನಲ್ಲಿ ನಿವೇಶನ ಸಂಖ್ಯೆ 9ರಲ್ಲಿ 50×80 ಚದರಡಿ ಅಳತೆಯ ನಿವೇಶನ ಮಂಜೂರಾಗಿತ್ತು. ಆದರೆ, ಈ ನಿವೇಶನಕ್ಕೆ ಬದಲಾಗಿ ಅದೇ ಬಡಾವಣೆಯ ಜಿ ಮತ್ತು ಎಚ್‌ ಬ್ಲಾಕ್‌ನಲ್ಲಿ ಖಾಲಿ ಇರುವ ನಿವೇಶನವನ್ನು ಮಂಜೂರು ಮಾಡುವಂತೆ ಸಿದ್ದರಾಮಯ್ಯ ಮನವಿ ಮಾಡಿದ್ದರು.

ಅಧಿಕಾರಿಗಳು ಹಳೇ ನಿವೇಶನ ಹಂಚಿಕೆ ರದ್ದು ಮಾಡಿ, ಹೊಸ ನಿವೇಶನ ಮಂಜೂರು ಮಾಡಿದ್ದರು ಎಂದು ಆರೋಪಿಸಿದ್ದಾರೆ.

ಸಿಎಂ ಪತ್ನಿಗೆ ನೀಡಿದ 14 ನಿವೇಶನ
ವಾಪಸ್‌ ಪಡೆಯಲು ಅಬ್ರಾಹಂ ಮನವಿ
ಮೈಸೂರು: ಮುಡಾ ನಿವೇಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಆರ್‌ಟಿಐ ಕಾರ್ಯಕರ್ತ ಟಿ.ಜೆ. ಅಬ್ರಾಹಂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನೀಡಿರುವ 14 ನಿವೇಶನಗಳನ್ನು ವಾಪಸ್‌ ಪಡೆಯುವಂತೆ ಮುಡಾ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಸೋಮ ವಾರ ಮುಡಾ ಆಯುಕ್ತ ರಘುನಂದನ್‌ ಅವರನ್ನು ಭೇಟಿಯಾಗಿ, 2001ರಲ್ಲಿಯೇ ಕೆಸರೆ ಗ್ರಾಮದ ಸರ್ವೇ ನಂ. 464ರಲ್ಲಿ ಮುಡಾ ನಿವೇಶನ ರಚಿಸಿ, ಅನಂತರದಲ್ಲಿ ಫ‌ಲಾನುಭವಿಗಳಿಗೆ ಹಂಚಿದೆ. 2004ರಲ್ಲಿ ಸಿದ್ದರಾಮಯ್ಯ ಭಾಮೈದ ಆ ಜಮೀನನ್ನು ಖರೀದಿ ಮಾಡಿದ್ದಾರೆ. ಈ ಖರೀದಿಯೇ ಅಕ್ರಮ ಆಗಿರುವುದರಿಂದ ಅವರಿಗೆ ನಿವೇಶನ ನೀಡಲು ಬರುವುದಿಲ್ಲ ಎಂದಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣ ಸಂಬಂಧ ಸಿದ್ದರಾಮಯ್ಯ ಅವರ ಬೆಂಬಲಿಗರು ನನ್ನ ವಿರುದ್ಧ ಮುಗಿ ಬಿದ್ದಿದ್ದಾರೆ. ಅವರ ವರ್ತನೆ ನೋಡಿದರೆ ಈಗಲೇ ಸೋಲು ಒಪ್ಪಿಕೊಂಡಂತಾಗಿದೆ. ಈ ಹಿಂದೆ ಬಿಎಸ್‌ವೈ ವಿರುದ್ಧ ದೂರು ನೀಡಿದ್ದಾಗ ಸಿದ್ದರಾಮಯ್ಯ ಅವರು ಅಬ್ರಹಾಂ ಹೇಳುವುದು ಸತ್ಯ ಎಂದಿ ದ್ದರು. ಆದ ರೀಗ ಅವರ ಪ್ರಕರಣದಲ್ಲಿ ನಾನು ಬ್ಲ್ಯಾಕ್‌ವೆುಲರ್‌ ಎಂದು ಹೇಳುತ್ತಿದ್ದಾರೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next