Advertisement

ದೋಹಾ ಪ್ರಯಾಣಿಕರಿಗೆ ಬದಲಿ ವಿಮಾನ ವ್ಯವಸ್ಥೆ

08:36 AM Jun 30, 2018 | Team Udayavani |

ಮಂಗಳೂರು: ತಾಂತ್ರಿಕ ದೋಷದಿಂದಾಗಿ ಗುರುವಾರ ರದ್ದುಗೊಂಡಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಮಂಗಳೂರಿನಿಂದ ದೋಹಾಕ್ಕೆ ಪ್ರಯಾಣಿಸಬೇಕಾಗಿದ್ದ ಪ್ರಯಾಣಿಕರನ್ನು ಶುಕ್ರವಾರ ಬದಲಿ ವಿಮಾನದ ಮೂಲಕ ಕಳುಹಿಸಿ ಕೊಡಲಾಗಿದೆ. 

Advertisement

ತಾಂತ್ರಿಕ ದೋಷಕ್ಕೆ ಒಳಗಾಗಿದ್ದ ವಿಮಾನವನ್ನು ಗುರುವಾರ ರಾತ್ರಿಯೇ ದುರಸ್ತಿಗೊಳಿಸಲಾಗಿದ್ದು, ಆ ಬಳಿಕ ಅದು ಪ್ರಯಾಣಿಕರಿಲ್ಲದೆ ಮುಂಬಯಿ ವಿಮಾನ ನಿಲ್ದಾಣಕ್ಕೆ ತೆರಳಿದೆ. ಮಂಗಳೂರಿನಿಂದ ದೋಹಾಕ್ಕೆ ತೆರಳಬೇಕಾಗಿದ್ದ, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ತಾಂತ್ರಿಕ ದೋಷದಿಂದಾಗಿ ಗುರುವಾರ ರದ್ದುಗೊಂಡಿತ್ತು. ಆ ದಿನ ಸಂಜೆ 5.35ಕ್ಕೆ ಈ ವಿಮಾನವು ಮಂಗಳೂರಿನಿಂದ ಹೊರಡಬೇಕಾಗಿತ್ತು. ಆದರೆ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮ ವಿಮಾನದ ಹಾರಾಟವನ್ನೇ ರದ್ದುಗೊಳಿಸಿ, ಆ ವಿಮಾನದಲ್ಲಿ ಪ್ರಯಾಣಿಸಬೇಕಾಗಿದ್ದ ಎಲ್ಲ 140 ಮಂದಿ ಪ್ರಯಾಣಿಕರಿಗೆ ನಗರದ ಹೊಟೇಲ್‌ವೊಂದರಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. 

ಈ ಪ್ರಯಾಣಿಕರನ್ನು ಶುಕ್ರವಾರ ಬೆಳಗ್ಗೆ ಕೊಚ್ಚಿಯಿಂದ ಬಂದಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಮತ್ತೂಂದು ವಿಮಾನದಲ್ಲಿ ಮುಂಜಾನೆ 5 ಗಂಟೆಗೆ ದೋಹಾಕ್ಕೆ ಕಳುಹಿಸಿ ಕೊಡಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next