Advertisement

ದೇಗುಲಕ್ಕೆ ಅಳವಡಿಸಿರುವ ಗೇಟ್‌ ಬದಲಿಸಿ

05:16 AM Jul 09, 2020 | Lakshmi GovindaRaj |

ನಂಜನಗೂಡು: ಶ್ರೀಕಂಠೇಶ್ವರ ದೇವಾಲಯದ ಹೊರಬಾಗಿಲಿಗೆ ಅಳವಡಿಸಿರುವ ಗೇಟ್‌ ಅವೈಜ್ಞಾನಿವಾಗಿದ್ದು, ಕೂಡಲೇ ಬದಲಿಸುವಂತೆ ತಾಪಂ ಉಪಾಧ್ಯಕ್ಷ ಗೋವಿಂದರಾಜು ಆಗ್ರಹಿಸಿದರು. ಪಟ್ಟಣದ ತಾಪಂ ಕಚೇರಿಯಲ್ಲಿ ಅಧ್ಯಕ್ಷ  ಮಹದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

Advertisement

ದೇವಾಲಯದಲ್ಲಿ ಒಂದು ಮೊಳೆ ಹೊಡೆಯಬೇಕೆಂದರೂ ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಅನುಮತಿ ಪಡೆಯಬೇಕು ಎನ್ನುವ ನೀವು ಯಾರನ್ನು ಕೇಳಿ, ಈ ಅವೈಜ್ಞಾನಿಕವಾದ ಗೇಟ್‌ ಅಳವಡಿಸಿ ದೇವಾಲಯದ ಅಂದ ಹಾಳು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಗೇಟ್‌ ಅಳವಡಿಕೆಗೆ ಅನುಮತಿ ಪತ್ರ, ಅದಕ್ಕಾದ ಖರ್ಚು ವೆಚ್ಚಗಳ ಬಗ್ಗೆಯೂ ಸಭೆಗೆ ತೋರಿಸಬೇಕೆಂದು  ದೇವಾಲಯದ ಆಡಳಿತ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಉಪಾಧ್ಯಕ್ಷರ ಮಾತಿಗೆ ತಡಬಡಿಸಿದ ದೇವಾಲಯದ ಅಧಿಕಾರಿ ರವಿಕುಮಾರ್‌, ನಾಳೆಯೇ ಅದನ್ನು ತೆರವುಗೊಳಿಸುತ್ತೇನೆ ಎಂದು ತಿಳಿಸಿದರು. ಅಧ್ಯಕ್ಷ  ಮಹದೇವಪ್ಪ ಮಾತನಾಡಿ, ಹೆಡೆ ಯಾಲದಲ್ಲಿ ಹಾಗೂ ಹೆಜ್ಜಿಗೆಯಲ್ಲಿ ಸುಸ್ಥಿಯಲ್ಲಿದ್ದ ರಸ್ತೆ ಹಾಗೂ ಚರಂಡಿಯನ್ನು ಕಿತ್ತು 4 ವರ್ಷವಾಯಿತು. ಇದುವರೆಗೂ ದುರಸ್ತಿ ಮಾಡಿಲ್ಲ. ಸರಿಪಡಿಸಲು ಇನ್ನೆಷ್ಟು ವರ್ಷಗಳು ಬೇಕು ಎಂದು  ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಅಧಿಕಾರಿ ಮುತ್ತುರಾಜ್‌, ಗುತ್ತಿಗೆದಾರರು ಕಾಮಗಾರಿ ವಿಳಂಬ ಮಾಡುತ್ತಿದ್ದು, 15 ದಿನದಲ್ಲಿ ಹೆಡೆಯಾಲದ ರಸ್ತೆ ಚರಂಡಿ ದುರಸ್ತಿ  ಮಾಡಿಸುವ ಭರವಸೆ ನೀಡಿದರು. ಮಳೆಗಾಲ ಆರಂಭವಾಗಿದೆ. ಕಬಿನಿ ಜಲಾಶಯದಲ್ಲಿ ದಿನದಿನಕ್ಕೂ ನೀರಿನ ಪ್ರಮಾಣ ಏರುತ್ತಿದೆ. ನೀರು ಈಗಾಗಲೇ ತಮಿಳುನಾಡಿನತ್ತ ಸಾಗಿದೆ. ನಮ್ಮ ನಾಲೆಗಳಿಗೆ ಯಾವಾಗ ನೀರು ಬಿಡುವುದು ಎಂಬ  ಪ್ರಶ್ನೆಗೆ ಉತ್ತರಿಸಿದ ನೀರಾವರಿ ಅಧಿಕಾರಿಗಳು, ಆಗಸ್ಟ್‌ ಮೊದಲ ವಾರದಲ್ಲಿ ನಾಲೆಗಳಿಗೆ ನೀರು ಬಿಡಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next