Advertisement

CAA, NRC ರದ್ದು: ದೀದಿ ಶಪಥ ಪ್ರಣಾಳಿಕೆ

12:37 AM Apr 18, 2024 | Team Udayavani |

ಕೋಲ್ಕತಾ: ಕೇಂದ್ರದಲ್ಲಿ “ಇಂಡಿಯಾ’ ಒಕ್ಕೂಟ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ರದ್ದು ಮಾಡುವ ಭರವಸೆಯನ್ನು ತೃಣಮೂಲ ಕಾಂಗ್ರೆಸ್‌ ಬುಧವಾರ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ತಿಳಿಸಿದೆ.

Advertisement

“ದಿಢೀರ್‌ ಶಪಥ್‌’ ಹೆಸರಿನ ಪ್ರಣಾಳಿಕೆಯಲ್ಲಿ ಶ್ರಮಿಕ ಕಾರ್ಡ್‌ ಹೊಂದಿರುವ ಕಾರ್ಮಿ ಕರಿಗೆ ಪ್ರತೀ ದಿನ 400 ರೂ. ದಿನಗೂಲಿ ನೀಡುವ ವಾಗ್ಧಾನ ಮಾಡಿದೆ. ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ 10 ಉಚಿತ ಸಿಲಿಂಡರ್‌ ನೀಡುವ ವಾಗ್ಧಾನ ಮಾಡಿದೆ. ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬರಿಗೆ ಉಚಿತವಾಗಿ 5 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ ಎಂದು ಪಕ್ಷ ಹೇಳಿಕೊಂಡಿದೆ. ಇದಲ್ಲದೆ, ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಜಾರಿಯನ್ನೂ ಟಿಎಂಸಿ ಹೇಳಿಕೊಂಡಿದೆ.

ಮೋದಿ ಮತ್ತೆ ಬಂದರೆ ದೇಶ ಮಾರುತ್ತಾರೆ: ಅಸ್ಸಾಂ ನಲ್ಲಿ ನಡೆದ ಚುನಾವಣೆ ರ್ಯಾಲಿಯಲ್ಲಿ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ಮತ್ತೆ ಆಯ್ಕೆಯಾದರೆ ದೇಶದಲ್ಲಿ ಪ್ರಜಾಪ್ರಭುತ್ವ ಇರುವುದೇ ಇಲ್ಲ, ಯಾವ ಚುನಾವಣೆಗಳೂ ನಡೆಯುವುದಿಲ್ಲ. ಮುಂದೆ ದೇಶವನ್ನು ಮಾರಿಯೇ ಬಿಡುತ್ತಾರೆ ಎಂದಿದ್ದಾರೆ.

ಭರವಸೆಗಳೇನು ?
ಸಿಎಎ ಕಾಯ್ದೆ ವಾಪಸಾತಿ, ಎನ್‌ಆರ್‌ಸಿ ರದ್ದು ಮತ್ತು ಯುಸಿಸಿ ಜಾರಿಗೆ ನಿರ್ಬಂಧ
ಶ್ರಮಿಕ ಕಾರ್ಡ್‌ ಹೊಂದಿರುವ ಕಾರ್ಮಿ ಕರಿಗೆ ದಿನಕ್ಕೆ 400 ರೂ.ಗಳ ದಿನಗೂಲಿ ಇರುವ 100 ದಿನಗಳ ಉದ್ಯೋಗ ಖಾತರಿ, ವೇತನ ಹೆಚ್ಚಳದ ಭರವಸೆ
ಎಲ್ಲ ಬಡ ಕುಟುಂಬಗಳಿಗೆ ಉಚಿತ ವಸತಿ ಸೌಲಭ್ಯ ಒದಗಿಸುವ ಜತೆಗೆ ಗೌರವಯುತ ಹಾಗೂ ಸುರಕ್ಷಿತ ನಿವಾಸಗಳನ್ನು ನಿರ್ಮಿಸಿಕೊಡುವ ಭರವಸೆ
ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ ವರ್ಷಕ್ಕೆ 10 ಉಚಿತ ಎಲ್‌ಪಿಜಿ ಸಿಲಿಂಡರ್‌
ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬರಿಗೂ ಮನೆ ಬಾಗಿಲಿಗೆ ಉಚಿತ ಪಡಿತರ, ಪ್ರತೀ ತಿಂಗಳು ಉಚಿತವಾಗಿ 5 ಕೆ.ಜಿ. ಅಕ್ಕಿ ವಿತರಣೆ
ಪ್ರಸಕ್ತವಿರುವ ಮಾಸಿಕ ವೃದ್ಧಾಪ್ಯ ವೇತನದಲ್ಲಿ 1,000 ರೂ. ಏರಿಕೆ

Advertisement

Udayavani is now on Telegram. Click here to join our channel and stay updated with the latest news.

Next