Advertisement
ಮನೆ ಅಂದಮೇಲೆ ಒಂದಷ್ಟು ರಿಪೇರಿ ಇದ್ದದ್ದೇ. ಹೊಸ ವಾಹನ ಕೊಂಡಾಗ ಒಂದೈದು ವರ್ಷ ಯಾವುದೇ ರಿಪೇರಿಯ ತಾಪತ್ರಯ ಇರುವುದಿಲ್ಲ. ಹಾಗೆಯೇ, ಹೊಸ ಮನೆ ಕಟ್ಟಿದ 8-10 ವರ್ಷ ರಿಪೇರಿಯ ಕಿರಿಕಿರಿ ಇರುವುದಿಲ್ಲ. ಆನಂತರ ಅದನ್ನು ಕಾಲಕಾಲಕ್ಕೆ ಮಾಡುತ್ತಲಿದ್ದರೆ, ಮನೆ ಬಹುಕಾಲ ಬಾಳುವುದರಲ್ಲಿ ಸಂಶಯವಿಲ್ಲ. ಆದರೆ ರಿಪೇರಿ ಮಾಡಲು ಅನುಕೂಲಕರವಾಗುವಂತೆ ನಾವು ಮನೆ ಕಟ್ಟುವಾಗಲೇ ಸಾಕಷ್ಟು ಮುಂಜಾಗರೂಕತೆ ವಹಿಸುವುದು ಉತ್ತಮ.
ವಿದ್ಯುತ್ ವಾಹಕಗಳನ್ನು ಸಾಮಾನ್ಯವಾಗಿ ಒಂದೆರಡು ತಿರುವುಗಳಲ್ಲಿ ಸುಲಭದಲ್ಲಿ ಎಳೆದು ಹಾಕಬಹುದು. ಇದಕ್ಕಿಂತ ಹೆಚ್ಚಿನ ಬೆಂಡುಗಳು ಬಂದರೆ, ವೈರ್ ಗಳನ್ನು ಎಳೆಯಲು ಕಷ್ಟವಾಗುತ್ತದೆ. ಆದುದರಿಂದ ಪ್ರತಿ ಎರಡು ಮೂರು ಬೆಂಡಿಗೆ ಒಂದರಂತೆ ಜಂಕ್ಷನ್ ಬಾಕ್ಸ್‌ಗಳನ್ನು ನೀಡುವುದು ಕಡ್ಡಾಯ ಮಾಡಿ. ಅದೇ ರೀತಿಯಲ್ಲಿ ಮಹಡಿಯಿಂದ ಮಹಡಿಗೆ, ಒಳಗಿನಿಂದ ಹೊರಗೆ ಹೋಗುವ ಸ್ಥಳದಲ್ಲೂ ಬಾಕ್ಸ್‌ಗಳನ್ನು ಇಲ್ಲವೇ ಇತರೆ ರೀತಿಯ ಪರಿಶೀಲನೆ ಮಾಡಲು ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಉತ್ತಮ. ಕೆಲವೊಮ್ಮೆ ವಿದ್ಯುತ್ ವಾಹಕಗಳಲ್ಲಿ ಹೆಚ್ಚಿನ ವೋಲ್ಟೆàಜ್ ಪ್ರವಹಿಸಿ ವೈರುಗಳು ಸುಡುವುದು, ಕರಗುವುದು ಆಗಬಹುದು. ಆಗ ಪೈಪುಗಳು ತೀರ ಉದ್ದವಾಗಿದ್ದರೆ, ಎರಡು ಮೂರು ಬೆಂಡುಗಳಿಗಿಂತ ಹೆಚ್ಚಿನ ತಿರುವುಗಳಿದ್ದರೆ, ಕರಕಲಾದ ವೈರುಗಳನ್ನು ಎಳೆದು ಹೊಸದನ್ನು ಹಾಕುವುದು ಕಷ್ಟ ಆಗಬಹುದು. ಆದುದರಿಂದ ನಾವು ವೈರು ಹಾಕುವಾಗಲೇ ಮುಂದೆಂದಾದರೂ ತೊಂದರೆ ಬಂದರೆ -ಹಳೆಯದನ್ನು ತೆಗೆದು ಹೊಸದನ್ನು ಹಾಕಲು ಸೂಕ್ತವಾಗಿರುವ ತೆರೆಯಬಹುದಾದ ಜಂಕ್ಷನ್‌ಗಳನ್ನು ಅಳವಡಿಸಿಕೊಳ್ಳುವುದು ಅನುಕೂಲಕರ.
Related Articles
ಎಲ್ಲಕ್ಕಿಂತ ಕಷ್ಟದ ಕೆಲಸ ಎಂದರೆ- ರಸ್ತೆ ಕೆಳಗೆ ಕೆಲವೊಮ್ಮೆ ಅನಿವಾರ್ಯವಾಗಿ ಹಾದುಹೋಗಬೇಕಾದ ಕೇಬಲ್‌ಗಳ ದುರಸ್ತಿ. ರಸ್ತೆ ಅಗೆಯುವುದು ಎಂದರೆ ಮೊದಲೇ ದೊಡ್ಡ ಕೆಲಸ. ಜೊತೆಗೆ ಕಾರ್ಪೊರೇಷನ್, ಬಿ.ಡಿ.ಎ ಇತ್ಯಾದಿ ಸಂಸ್ಥೆಗಳಿಂದ ಪರವಾನಗಿ ಪಡೆಯಲೇ ಬೇಕಾದ ಗೋಜಲು ಬೇರೆ. ಇನ್ನು, ಮುಖ್ಯ ರಸ್ತೆ ಅಗೆಯಬೇಕೆಂದರೆ ಟ್ರಾಫಿಕ್ ಸಮಸ್ಯೆಯೂ ಎದುರಾಗುವುದರಿಂದ ರಾತ್ರಿಯೇ ಅಗೆದು ಕೆಲಸ ಮುಗಿಸಬೇಕಾಗುತ್ತದೆ. ಹೊಸ ಮನೆಗೆ ರೋಡ್ ಕಟ್ಟಿಂಗ್ ಇತ್ಯಾದಿಗೆ ಓಡಾಡುವಾಗ ಇರುವ ಉತ್ಸಾಹ ರಿಪೇರಿ ಮಾಡುವಾಗ ಇರುವುದಿಲ್ಲ.
Advertisement
ಹಾಗಾಗಿ, ರಸ್ತೆ ಬದಿಯ ಕಂಬದಿಂದ ನಮ್ಮ ಮನೆಗೆ ಸಂಪರ್ಕ ಕಲ್ಪಿಸುವ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸುವಾಗಲೇ ಅದನ್ನು ನಾಲ್ಕು ಇಲ್ಲವೇ ಆರು ಇಂಚಿನ ಸ್ಯಾನಿಟರಿಪೈಪ್‌ಗಾಗಿ ಬಳಸುವ ಪ್ಲಾಸ್ಟಿಕ್ ಇಲ್ಲವೇ ಸುಟ್ಟ ಜೇಡಿ ಮಣ್ಣಿನ ಕೊಳವೆಗಳಲ್ಲಿ ಹಾದುಹೋಗುವಂತೆ ಮಾಡಬೇಕು. ಹೀಗೆ ಮಾಡುವುದರಿಂದ ಮುಂದೆ ರಸ್ತೆ ಅಗೆಯುವ ಗೋಜು ಇರುವುದಿಲ್ಲ.
ವಿದ್ಯುತ್ ಕಂಬ ಮನೆಯ ಎದುರು ಬದಿಗಿದ್ದರೆ, ಅಲ್ಲೊಂದು ಸಣ್ಣ ಗುಂಡಿ ಹಾಗೂ ಈಬದಿಗೆ ಮತ್ತೂಂದು ಗುಂಡಿಯನ್ನು ತೋಡಿ ಕೊಳವೆಯ ಮೂಲಕ ಹರಿದಿರುವ ಡ್ಯಾಮೇಜ್ ಆಗಿರುವ ಹಳೆಯ ಭೂಗತ ವಿದ್ಯುತ್ ವಾಹಕವನ್ನು ತೆಗೆದು ಹೊಸದೊಂದು, ವಿದ್ಯುತ್ ವಾಹಕವನ್ನು ನಿರಾಯಾಸವಾಗಿ ಹಾಕಬಹುದು. ಇದೇ ರೀತಿಯಲ್ಲಿ, ಪಾದಚಾರಿ ಮಾರ್ಗದಲ್ಲಿ ಕೇಬಲ್ ಒಂದಷ್ಟು ದೂರ ಹಾದುಹೋಗಿದ್ದರೆ, ಅಲ್ಲೂ ಕೂಡ ಸೂಕ್ತ ರೀತಿಯಲ್ಲಿ ಪೈಪ್ ಅಳವಡಿಸಿದ್ದರೆ, ಮುಂದೆ ರಿಪೇರಿ ಮಾಡಲು ಅನುಕೂಲಕರ. ಯಾವುದೇ ಬೆಂಡ್ ತಿರುವು ಬಂದಲ್ಲಿ, ಅಲ್ಲೊಂದು ಇನ್‌ಸ್ಪೆಕ್ಷನ್ ಚೇಂಬರ್ ಹಾಕಲು ಮರೆಯಬಾರದು. ಯಾವುದೇ ಪೈಪ್ ಇಲ್ಲವೇ ಕೇಬಲ್ ಅಳವಡಿಸುವ ಮೊದಲು ಅದರ ರಕ್ಷಣೆಯ ಬಗ್ಗೆಯೂ ಕಾಳಜಿ ವಹಿಸಬೇಕು. ಸಾಮಾನ್ಯವಾಗಿ ರಸ್ತೆ ಅಗೆಯುವವರು, ಇತರರಿಗೆ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸುವವರು ನಮ್ಮ ಕೇಬಲ್ ಅನ್ನು ಘಾಸಿಗೊಳಿಸುವ ಸಾಧ್ಯತೆ ಇರುತ್ತದೆ. ಗಢಾರಿಯಿಂದಲೋ ಇಲ್ಲವೇ ಪಿಕಾಸಿಯಿಂದಲೋ ಒಂದು ಏಟು ಬಿದ್ದರೆ, ಕೇಬಲ್‌ಗಳಿಗೆ ಪೆಟ್ಟಾಗಿ ವಿದ್ಯುತ್ ವಾಹಕಗಳು ಶಾರ್ಟ್‌ಸಕೂìÂಟ್ ಆಗುವ ಸಾಧ್ಯತೆ ಇರುತ್ತದೆ. ಆದುದರಿಂದ ಕೇಬಲ್ ಸುತ್ತಲೂ ಹಾಕಿದ ಪೈಪ್‌ಗ್ಳ ಮೇಲೊಂದು ಪದರ ಮಾಮೂಲಿ ಇಟ್ಟಿಗೆಯನ್ನೋ ಇಲ್ಲ ಕಾಂಕ್ರಿಟ್ಬ್ಲಾಕ್ಗಳನ್ನೋ ಹೆಚ್ಚುವರಿಯಾಗಿಯೂ ಜೋಡಿಸಬಹುದು. ಆಗ ನಮಗೆ ನಮ್ಮ ಕೇಬಲ್ ಎಲ್ಲಿ ಹಾಯ್ದು ಹೋಗಿದೆ ಎಂಬುದು ಸುಲಭವಾಗಿ ಗೊತ್ತಾಗುವುದರ ಜೊತೆಗೆ ಕೇಬಲ್‌ಗೆ ಏಟು ತಾಗುವ ಸಾಧ್ಯತೆಗಳೂ ಕಡಿಮೆಯಾಗುತ್ತದೆ. ಸ್ಯಾನಿಟರಿ ಕೊಳವೆಗಳ ರಿಪೇರಿ
ಪ್ರತಿ ಹತ್ತು ಹದಿನೈದು ಅಡಿಗಳಿಗೊಂದು ಇನ್‌ಸ್ಪೆಕ್ಷನ್ ಛೇಂಬರ್‌ಗಳನ್ನು ಅಳವಡಿಸುವುದು ಉತ್ತಮ. ಸಾಮಾನ್ಯವಾಗಿ ಪೈಪುಗಳನ್ನು ತೆರೆವು ಗೊಳಿಸುವ ಬಿದಿರು ಕಡ್ಡಿಗಳು ಸುಮಾರು ಇಪ್ಪತ್ತು ಅಡಿಗಳಷ್ಟು ಉದ್ದವಿದ್ದರೂ ನಮ್ಮ ಛೇಂಬರ್ ಗಳ ಆಳವೇ ಇರಡು ಮೂರು ಅಡಿಗಳಿದ್ದು, ನಂತರ ಹಿಡಿದು ದೂಡಲು ನಾಲ್ಕು ಐದು ಅಡಿಗಳಷ್ಟಾದರೂ ಹೆಚ್ಚುವರಿಯಾಗಿ ಉದ್ದ ಬೇಕಾಗುತ್ತದೆ. ಹಾಗಾಗಿ ಪ್ರತಿ ಹತ್ತು ಅಡಿಗಳಿಗಾದರೂ ಒಂದು ಛೇಂಬರ್ ಇದ್ದರೆ ರಿಪೇರಿ ಮಾಡಲು ಅನುಕೂಲಕರ. ಹಾಗೆಯೇ, ಪ್ರತಿ ತಿರುವಿನಲ್ಲೂ ಒಂದು ಪರಿಶೀಲನಾ ಕಿಂಡಿಯನ್ನು ಕೊಡಲು ಮರೆಯಬಾರದು. ಈ ರೀತಿ ಮಾಡಿದಾಗ, ಮೊದಲನೆಯದಾಗಿ ತಿರುವುಗಳಲ್ಲೇ ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಎರಡನೆಯದಾಗಿ ಸ್ಯಾನಿಟರಿ ಪೈಪುಗಳು ಯಾವ ದಿಕ್ಕಿಗೆ ಎಲ್ಲೆಲ್ಲಿಂದ ಬರುತ್ತದೆ ಹಾಗೂ ಹೋಗುತ್ತದೆ ಎಂಬುದನ್ನು ಸುಲಭದಲ್ಲಿ ತಿಳಿಯಬಹುದಾಗಿದೆ. ಗೋಡೆಗಳಲ್ಲಿನ ಕೊಳವೆಗಳ ಪರಿಶೀಲನೆ
ಪ್ರತಿ ಬೆಂಡ್ ಹಾಗೂ ಪ್ರತಿ ಹತ್ತು ಹನ್ನೆರಡು ಅಡಿಗಳಿಗೆ ಒಂದರಂತೆ “ಡೋರ್’ ಅಂದರೆ ಬಾಗಿಲು ಎಂದು ಕರೆಯಲ್ ಪಡುವ ಮುಚ್ಚಳಗಳನ್ನು ಸ್ಯಾನಿಟರಿ ಕೊಳವೆಗಳಿಗೆ ಅಳವಡಿಸಬೇಕು. ಮನೆಯೊಳಗಿನಿಂದ ಹೊರಗೆ ಬರುವ ಕಡೆ, ಅಡ್ಡ ಹರಿದು ಕೆಳಗೆ ಇಳಿಯುವ ಕಡೆ ಕಡ್ಡಾಯವಾಗಿ ಡೋರ್ ಇರುವ ಬೆಂಡ್, “ಟಿ’ ಇಲ್ಲವೇ ಇತರೆ ಫಿಟಿಂಗ್‌ಗಳನ್ನು ಅಳವಡಿಸಬೇಕು. ಹೀಗೆ ಮಾಡುವುದರಿಂದ, ಹಂತಹಂತವಾಗಿ ರಿಪೇರಿ ಮಾಡಲು ಅನುಕೂಲಕರ. ಮೊದಲ ಹಂತ ಮನೆಯೊಳಗಿನ ಟ್ರಾಪ್, ವಾಶ್ ಬೇಸಿನ್ ಟ್ರಾಪ್‌ಗ್ಳ ಪರಿಶೀಲನೆ ಮೂಲಕ ಆರಂಭವಾಗಿ, ನಂತರ ಮನೆಯ ಹೊರಗಿನ ಪೈಪ್‌ಗ್ಳಲ್ಲಿರುವ ಡೋರ್ ತೆಗೆದು ಪರಿಶೀಲಿಸಿ, ನಂತರ ಇನ್‌ಸ್ಪೆಕ್ಷನ್ ಛೇಂಬರ್‌ಗಳತ್ತ ಗಮನ ಹರಿಸಬಹುದು.
ಮನೆಯ ಒಳಗೂ ಎಲ್ಲ ಟ್ರಾಪ್‌ಗ್ಳನ್ನೂ ಸುಲಭದಲ್ಲಿ ತೆರೆದು ಕ್ಲೀನ್ ಮಾಡಿ ರಿಪೇರಿ ಆಗುವಂತೆ ಅಳವಡಿಸಬೇಕು. ಸಾಧ್ಯವಾದಷ್ಟೂ ಯಾವ ಕೊಳವೆಯ ಮೊದಲ ಪ್ರವೇಶ ಸ್ಥಾನವನ್ನೂ ಸುಲಭದಲ್ಲಿ ರಿಪೇರಿ ಆಗದ ರೀತಿಯಲ್ಲಿ ಸಿಮೆಂಟ್ ಹಾಕಿ ಮುಚ್ಚಿರಬಾರದು. ನೋಡಲು ಕೆಲವೊಮ್ಮೆ ಸಿಮೆಂಟ್ ಮಾಡಿ ಸೀಲ್ ಮಾಡಿದ ಈ ಮಾದರಿಯ ಜಾಯಿಂಟ್‌ಗಳು ಸಪೂರ ಎಂದೆನಿಸಿದರೂ ರಿಪೇರಿಗೆ ಬಂದಾಗ ಇವನ್ನು ಒಡೆದು ಮತ್ತೆ ಹಾಕುವುದು ಕಷ್ಟ ಆಗುತ್ತದೆ. ಕೊಳಾಯಿ ರಿಪೇರಿ
ಮನೆಗೆ ಬರುವ ನೀರನ್ನು ಎಷ್ಟೇ ಪರಿಷ್ಕರಿಸಿದರೂ ಒಂದಷ್ಟು ಮಣ್ಣು, ಮತ್ತೂಂದು ಉಳಿದು ಬಿಡುತ್ತದೆ. ಜೊತೆಗೆ ದೇಹಕ್ಕೆ ಪೂರಕವಾದ ಕೆಲ ರಾಸಾಯನಿಕಗಳೂ ಮಳೆಯ ನೀರಿನ ಜೊತೆ ನೆಲದಲ್ಲಿ ಹರಿದು ನದಿ, ಬಾವಿಗೆ ಸೇರ್ಪಡೆಯಾಗುತ್ತದೆ. ಇದೆಲ್ಲಾ ಕೆಲವೊಮ್ಮೆ ಪೈಪುಗಳ ಒಳಗೆ ಕಟ್ಟಿಕೊಂಡು ನಿಧಾನವಾಗಿ ಅವುಗಳ ಸಾಮರ್ಥ್ಯವನ್ನು ಕುಗ್ಗಿಸುತ್ತವೆ. ಅದರಲ್ಲೂ ಸಣ್ಣ ರಂಧ್ರಗಳಿರುವ ಕೊಳಾಯಿ ಸ್ಟಾಪ್ ಕಾಕ್ ಇತ್ಯಾದಿಗಳಲ್ಲಿ ಕಟ್ಟಿಕೊಳ್ಳುವುದು ಸಾಮಾನ್ಯ. ಆದುದರಿಂದ ಈ ಎಲ್ಲವನ್ನೂ ಆಗಾಗ ನಿರ್ವಹಣೆ ಮಾಡಿ, ರಿಪೇರಿ ಮಾಡುವ ರೀತಿಯಲ್ಲಿ ಅಳವಡಿಸಿಕೊಂಡರೆ ತೊಂದರೆ ಬಂದಾಗ ನಿವಾರಿಸಿಕೊಳ್ಳುವುದು ಸುಲಭ. ಹೆಚ್ಚಿನ ಮಾತಿಗೆ 98441 32826 – ಆರ್ಕಿಟೆಕ್ಟ್ ಕೆ. ಜಯರಾಮ್