Advertisement
ಹೇರಿಕುದ್ರು ಹಾಗೂ ತಲ್ಲೂರು ಮಧ್ಯೆ ವಾರಾಹಿ ನದಿಗೆ ಈಗ ಹೊಸದಾಗಿ ಸೇತುವೆ ನಿರ್ಮಿಸ ಲಾಗಿದೆ. ಬೈಂದೂರಿನಿಂದ ಕುಂದಾಪುರ ಕಡೆಗೆ ಸಂಚರಿ ಸಲು ಹೊಸ ಸೇತುವೆಯಲ್ಲಿ ಅನುವು ಮಾಡಿಕೊಡಲಾಗಿದ್ದು, ಕುಂದಾಪುರದಿಂದ ಬೈಂದೂರು ಕಡೆಗೆ ಹಳೆ ಸೇತುವೆಯಲ್ಲಿಯೇ ಸಂಚರಿಸಬೇಕಾಗಿದೆ. ಈ ಸೇತುವೆಯ ಅಲ್ಲಲ್ಲಿ ಅನೇಕ ಕಡೆಗಳಲ್ಲಿ ಈಗಾಗಲೇ ದುರಸ್ತಿ ಮಾಡಿದ ಬಳಿಕವಷ್ಟೇ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಆದರೆ ಒಂದು ಕಡೆ ಮಾತ್ರ ಸೇತುವೆಯ ತಡೆಗೋಡೆ ಹಾನಿಯಾಗಿ ಮುರಿದು ಹೋಗಿತ್ತು. ಇದು ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣ ಪ್ರತಿನಿತ್ಯ ಬೆಳಗ್ಗಿನಿಂದ ಮಧ್ಯರಾತ್ರಿಯವರೆಗೂ ಬೈಕ್, ಕಾರು, ರಿಕ್ಷಾದಂತಹ ವಾಹನಗಳಿಂದ ಹಿಡಿದು, ಬಸ್‌ಗಳು, ಸರಕು ಸಾಗಾಟದ ಘನ ವಾಹನಗಳು ಸಂಚರಿಸುತ್ತಿರುತ್ತವೆ. ತಡೆಗೋಡೆ ಮುರಿದು ಹೋಗಿದ್ದರಿಂದ ಈ ಸೇತುವೆಯು ಅಪಾಯಕಾರಿಯಾಗಿ ಪರಿಣಮಿಸಿತ್ತು.ಸುದಿನ ವರದಿ
ಈ ಹಳೆ ಸೇತುವೆಯ ತಡೆಗೋಡೆ ಮುರಿದು ಹೋಗಿದ್ದ ಬಗ್ಗೆ, ಇದರಿಂದ ವಾಹನ ಸವಾರರಿಗೆ ಆಗುತ್ತಿದ್ದ ತೊಂದರೆ ಕುರಿತಂತೆ “ಉದಯವಾಣಿ ಸುದಿನ’ವು ಫೆ. 10 ರಂದು “ಹಾನಿಯಾದ ತಡೆಗೋಡೆ ; ಅಪಾಯ ಆಹ್ವಾನಿಸುತ್ತಿರುವ ಸೇತುವೆ’ ಎನ್ನುವ ವರದಿಯನ್ನು ಪ್ರಕಟಿಸಿ, ಸಂಬಂಧಪಟ್ಟವರ ಗಮನಸೆಳೆದಿತ್ತು. ಇದಕ್ಕೆ ಸ್ಪಂದಿಸಿದ ಹೆದ್ದಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿ ಸಂಸ್ಥೆಯವರು ಈ ಸೇತುವೆಯ ತಡೆಗೋಡೆಯ ದುರಸ್ತಿ ಕಾಮಗಾರಿಯನ್ನು ಆರಂಭಿಸಿದೆ.