Advertisement
ವಿಮಾನ ನಿಲ್ದಾಣದಿಂದ ಪ್ರಧಾನಿಯವರು ಮಂಗಳೂರಿಗೆ ಕಾರಿನಲ್ಲಿ ಆಗಮಿ ಸುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿರುವ ಹೊಂಡ ಗುಂಡಿಗಳಿಗೆ ಇದೀಗ ಮುಕ್ತಿ ನೀಡ ಲಾಗುತ್ತಿದೆ. ಮಂಗಳೂರು ಅಂ.ವಿಮಾನ ನಿಲ್ದಾಣದಿಂದ ನಿರ್ಗಮನ ರಸ್ತೆಯಿಂದ ಮುಖ್ಯರಸ್ತೆಗೆ ಸಂಪರ್ಕಿಸುವ ಭಾಗದ ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಹೊಂಡ ತುಂಬಿರುವ ಕಾರಣ ಇಲ್ಲಿ ದುರಸ್ತಿ ನಡೆಸಲಾಗುತ್ತಿದೆ. ಎರಡು ದಿನಗಳಿಂದ ಲೋಕೋಪಯೋಗಿ ಇಲಾಖೆಯಿಂದ ಡಾಮರು ಕಾಮಗಾರಿ ನಡೆಸಲಾಗುತ್ತಿದೆ. ಜತೆಗೆ, ಮಂಗಳೂರುವರೆಗಿನ ರಸ್ತೆಯಲ್ಲಿ ಹೊಂಡ ಗುಂಡಿ ಇರುವ ಭಾಗದಲ್ಲಿ ತೇಪೆ ಹಚ್ಚಲಾಗುತ್ತಿದೆ. ಭದ್ರತೆಯ ದೃಷ್ಟಿಯಿಂದ ದುರಸ್ತಿ ನಡೆಸಲಾಗುತ್ತಿದೆ. ಬುಧವಾರ, ಗುರುವಾರ ಈ ಕಾಮಗಾರಿ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ವಿಮಾನದ ಮೂಲಕ ಎ. 13ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಅತಿ ಭದ್ರತೆಯ ಕಾರಿನ ಮೂಲಕ ಮಂಗಳೂರಿನ ಕೇಂದ್ರ ಮೈದಾನಕ್ಕೆ ಬರಲಿದ್ದಾರೆ. ಹೀಗಾಗಿ ಪ್ರಧಾನಿ ಅವರು ಆಗಮಿಸುವ ಕಾರನ್ನು ರೈಲಿನಲ್ಲಿ ಮಂಗಳೂರಿಗೆ ತರಲಾಗುತ್ತದೆ. ಈ ಹಿಂದೆ ಒಮ್ಮೆ ವಿಮಾನದ ಮೂಲಕ ತರಲಾಗಿತ್ತು. ಉಳಿದ ಸಂದರ್ಭ ರೈಲಿನ ಮುಖೇನವೇ ತರಿಸಲಾಗಿತ್ತು. ಈ ಬಾರಿ ಕೂಡ ರೈಲಿನಲ್ಲಿಯೇ ಎ. 11 ಅಥವಾ 12ರಂದು ಮಂಗಳೂರು ರೈಲು ನಿಲ್ದಾಣಕ್ಕೆ ತರಲು ನಿರ್ಧರಿಸಲಾಗಿದೆ. ಬಳಿಕ ಕಾರು ಗಳನ್ನು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ ಇರಿಸಲಾಗುತ್ತದೆ.
Related Articles
ವಿಮಾನ ನಿಲ್ದಾಣದಿಂದ ಕೇಂದ್ರ ಮೈದಾನದವರೆಗೆ ಅವರು ಸಾಗಿಬರುವ ರಸ್ತೆಯಲ್ಲಿ ಪೂರ್ಣ ಬಂದೋಬಸ್ತ್ ಮಾಡಲಾಗುತ್ತದೆ. ಭದ್ರತೆಯ ಹಿನ್ನೆಲೆ ಯಲ್ಲಿ ಪ್ರಧಾನಿ ಆಗಮನದ ಮುನ್ನಾ ದಿನ ಒಂದು ಬಾರಿ ರಿಹರ್ಸಲ್ ಮಾಡ ಲಾಗುತ್ತದೆ. ವಿಮಾನ ನಿಲ್ದಾಣದಿಂದ ಕೇಂದ್ರ ಮೈದಾನದವರೆಗೆ ಪ್ರಧಾನಿ ಸಂಚರಿಸುವ ಕಾರು ಹಾಗೂ ಬೆಂಗಾವಲು ವಾಹನಗಳು ಸಂಚರಿಸಲಿದೆ. ಎ. 13 ರಂದು ಕೂಡ ವಿಶೇಷ ವಿಮಾನ ಮಂಗಳೂರಿಗೆ ಬರುವ ಮುನ್ನವೂ ರಿಹಸಲ್ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
ಇಂದು ವಿಶೇಷ ಭದ್ರತಾದಳ ಮಂಗಳೂರಿಗೆಎ.13ರಂದು ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಪ್ರಧಾನಿ ಭದ್ರತೆ ಉಸ್ತುವಾರಿ ವಹಿಸಿರುವ ವಿಶೇಷ ಭದ್ರತಾ ದಳದ ಅಧಿಕಾರಿಗಳು ಪೂರ್ವಭಾವಿಯಾಗಿ ಎ. 10ರಂದು ಹೊಸದಿಲ್ಲಿಯಿಂದ ಮಂಗಳೂರಿಗೆ ಆಗಮಿಸಲಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾ ನ ನಿಲ್ದಾಣ, ನಗರದ ಕೇಂದ್ರ ಮೈದಾನಕ್ಕೆ ಆಗಮಿಸುವ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭದ್ರತೆ ದೃಷ್ಟಿಯಿಂದ ಕ್ರಮ
ಪ್ರಧಾನಿ ಮೋದಿ ಅವರ ಕಾರು ಸಂಚರಿಸುವ ಹಿನ್ನೆಲೆಯಲ್ಲಿ ಹೊಂಡ ಗುಂಡಿಗಳನ್ನು ದುರಸ್ತಿ ಮಾಡಲು ಭದ್ರತೆಯ ದೃಷ್ಟಿಯಿಂದ ಸೂಚಿಸಲಾಗಿದೆ. ಇದರಂತೆ ವಿಮಾನ ನಿಲ್ದಾಣ ರಸ್ತೆಯಿಂದ ಮಂಗಳೂರುವರೆಗಿನ ರಸ್ತೆಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.
ಶಶಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ, ದ.ಕ