Advertisement

ಶಿಥಿಲಗೊಂಡ ಅಂಗನವಾಡಿ ಕಟ್ಟಡ ದುರಸ್ತಿ ಮಾಡಿ

06:22 PM Aug 27, 2021 | Team Udayavani |

ಬಂಗಾರಪೇಟೆ: ತಾಲೂಕಿನಲ್ಲಿ ಶಿಥಿಲಗೊಂಡಿರುವ ಅಂಗನವಾಡಿ ಕಟ್ಟಡ ಅಭಿವೃದ್ಧಿಪಡಿಸಿ,ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವ ಪಡಿತರಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಸಾಮೂಹಿಕ ನಾಯಕತ್ವದ ರೈತ ಸಂಘದಿಂದ ಆ.30ರಂದು ಕುರಿಗಳೊಂದಿಗೆ ಸಿಡಿಪಿಒ ಕಚೇರಿ ಮುತ್ತಿಗೆ ಹಾಕಲಾಗುವುದೆಂದು ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ‌ ಹೇಳಿದರು.

Advertisement

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಬಳಿ ಸೇರಿದ್ದ ಸಭೆಯಲ್ಲಿ ಮಾತನಾಡಿದ ಅವರು,ತಾಲೂಕು ಸೇರಿ ಜಿಲ್ಲಾದ್ಯಂತ ಅಂಗನವಾಡಿ ಕೇಂದ್ರಗಳು ಶಿಥಿಲಗೊಂಡಿದ್ದು ಸರ್ಕಾರದಿಂದ ಕೋಟ್ಯಂತರ ರೂ.ಅನುದಾನ ಬರುತ್ತಿದ್ದರೂ ಅಭಿವೃದ್ಧಿ ಪಡಿತದೆ ಅಧಿಕಾರಿಗಳು,ಗುತ್ತಿಗೆದಾರರು ಶಾಮೀಲಾಗಿ ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ:‘ದೇಶ್ ಕಾ ಮೆಂಟರ್ಸ್’ಗೆ ರಾಯಭಾರಿ: ದೆಹಲಿ ಸರ್ಕಾರದ ಯೋಜನೆಗೆ ಸೂನು ಸಾಥ್  

ನಾಚಿಕೆಗೇಡಿನ ಸಂಗತಿ: ಎರಡು ವರ್ಷಗಳಿಂದ ಕೋವಿಡ್‌ ಅಲೆಗಳಿಂದ ತತ್ತರಿಸಿದ ಜನರು ಇದೀಗ ಚೇತರಿಕೆ ಕಾಣುತ್ತಿದ್ದು, ಗ್ರಾಮೀಣ
ಭಾಗದಲ್ಲಿ ಕೂಲಿ ಕೆಲಸಗಳಿಗೆ ತೆರಳುತ್ತಿದ್ದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳು ಅವಶ್ಯಕತೆ ಇದ್ದರೂ ಅವುಗಳನ್ನು ಅಭಿವೃದ್ಧಿಪಡಿಸದೆ
ಕಡೆಗಣಿಸಿರುವುದು ನಾಚಿಕೆಗೇಡಿನ ‌ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ‌ ಐತಾಂಡಹಳ್ಳಿ ಮಂಜುನಾಥ್‌ ಮಾತನಾಡಿ, ಅಂಗನವಾಡಿ ಕೇಂದ್ರಗಳು ಶಿಥಿಲಗೊಂಡಿರುವುದು, ಮೂಲ ಸೌಕರ್ಯಗಳು
ಇಲ್ಲದಿರುವುದು ಒಂದು ಸಮಸ್ಯೆಯಾದರೆ ಮಕ್ಕಳು, ಬಡವರು, ಕೂಲಿಕಾರ್ಮಿಕರು, ಬಡ ‌ಬಾಣಂತಿಯರಿಗೆ ಸಿಗಬೇಕಾದ ಪೌಷ್ಟಿಕ ‌ ಆಹಾರವೂ ಸರಿಯಾಗಿ ದೊರೆಯದಿರುವುದು ಮತ್ತೊಂದು ಸಮಸ್ಯೆಯಾಗಿದೆ ಎಂದು ಹೇಳಿದರು. ಕಳಪೆ ಗುಣಮಟ್ಟದ ಆಹಾರ ಪದಾರ್ಥ ನೀಡುತ್ತಿದ್ದು, ಅದನ್ನು ಸಹಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಸಭೆಯಲ್ಲಿ ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್‌, ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮುನ್ನಾ, ಹಸಿರುಸೇನೆ ತಾಲೂಕು ಅಧ್ಯಕ್ಷ ಚಲಪತಿ, ಜಿಲ್ಲಾ ಉಪಾಧ್ಯಕ್ಷ ಚಾಂದ್‌ಪಾಷ, ಗೌಸ್‌ಪಾಷ ‌, ಮರಗಲ್‌ ಮುನಿಯಪ್ಪ, ನವಾಜ್‌, ಜಾವೇದ್‌, ಬಾಬಜಾನ್‌ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next