Advertisement

ಆಂಧ್ರದಲ್ಲಿ ನ.2ರಿಂದ ಶಾಲೆ ಪುನಾರಂಭ ; ಅರ್ಧ ದಿನ ಮಾತ್ರ ಕ್ಲಾಸ್‌ ನಡೆಸಲು ಸೂಚನೆ

12:32 AM Oct 30, 2020 | mahesh |

ಹೊಸದಿಲ್ಲಿ/ವಿಶಾಖಪಟ್ಟಣ: ಕೋವಿಡ್ ಸೋಂಕಿನ ನಡುವೆಯೇ ಆಂಧ್ರಪ್ರದೇಶದಲ್ಲಿ ನ.2ರಿಂದ ಶಾಲೆ, ಕಾಲೇಜುಗಳು ಶುರುವಾಗಲಿವೆ. ಆದರೆ ಅರ್ಧ ದಿನ ಮಾತ್ರ ತರಗತಿ ನಡೆಸಲು ಅನುಮತಿ ನೀಡಲಾಗಿದೆ. 9,10, 11,12ನೇ ತರಗತಿಗಳಿಗೆ ನ.2ರಿಂದ, 6,7,8ನೇ ತರಗತಿಗಳಿಗೆ ನ.23ರಿಂದ ಶುರುವಾಗಲಿದೆ. ದಿನ ಬಿಟ್ಟು ದಿನ ಅರ್ಧ ದಿನ ಮಾತ್ರ ತರಗತಿ ನಡೆಸಬೇಕು ಎಂದು ಆಂಧ್ರಪ್ರದೇಶ ಸರಕಾರ ಸುತ್ತೋಲೆ ಯಲ್ಲಿ ತಿಳಿಸಿದೆ. ಕೇಂದ್ರ ಗೃಹ ಸಚಿವಾ ಲಯ ಶಾಲೆ ಪುನಾರಂಭಕ್ಕೆ ಹೊಸ ನಿಯಮ ಬಿಡುಗಡೆ ಮಾಡಿದ ಬೆನ್ನಲ್ಲೇ ಈ ಸುತ್ತೋಲೆ ಹೊರಡಿಸಲಾಗಿದೆ.

Advertisement

ಪ್ರಕರಣ ಮತ್ತೆ ಹೆಚ್ಚಳ: ದೇಶದಲ್ಲಿ ಬುಧವಾರದಿಂದ ಗುರುವಾರದ ಅವಧಿಯಲ್ಲಿ 49, 881 ಸೋಂಕಿನ ಪ್ರಕರಣಗಳು ದೃಢಪಟ್ಟು 517 ಮಂದಿ ಅಸುನೀಗಿದ್ದಾರೆ. ಚೇತರಿಕೆ ಪ್ರಮಾಣ ಶೇ.90.99ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಖಾತೆ ತಿಳಿಸಿದೆ. ಅ.28ರ ವರೆಗೆ 10, 65, 63, 440 ಪರೀಕ್ಷೆ ನಡೆಸಲಾ ಗಿದೆ ಎಂದು ಐಸಿಎಂಆರ್‌ ತಿಳಿಸಿದೆ.

3ನೇ ಅಲೆ?: ದಿಲ್ಲಿ ಸರಕಾರ‌ ಸೋಂಕು ಪತ್ತೆ ಮಾಡುವ ಕ್ರಮಗಳನ್ನು ಬದಲು ಮಾಡಿದೆ ಎಂದಿದ್ದಾರೆ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌. ರಾಜ್ಯದಲ್ಲಿ 3ನೇ ಹಂತದ ಸೋಂಕಿನ ಅಲೆ ಶುರುವಾಗಿದೆಯೋ ಇಲ್ಲವೋ ಎನ್ನುವುದನ್ನು ಈಗಲೇ ಹೇಳ ಲಾಗದು ಎಂದಿದ್ದಾರೆ. 24 ಗಂಟೆಗಳ ಅವಧಿಯಲ್ಲಿ ದಿಲ್ಲಿಯಲ್ಲಿ 5, 600 ಪ್ರಕರಣ ಪತ್ತೆಯಾಗಿ ರುವ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೆಚ್ಚು ಪರೀಕ್ಷೆ ನಡೆಸಿ: ಮುಂಬರುವ ಹಬ್ಬ ಗಳ ಸಂದರ್ಭದಲ್ಲಿ ಹೆಚ್ಚಿನ ರೀತಿಯಲ್ಲಿ ಸೋಂಕು ಪತ್ತೆ, ಚಿಕಿತ್ಸೆ, ನಿಗಾ ವ್ಯವಸ್ಥೆ ಮತ್ತಷ್ಟು ಬಲಪಡಿಸಬೇಕು ಎಂದು ದಿಲ್ಲಿ, ಕೇರಳ ಮತ್ತು ಪಶ್ಚಿಮ ಬಂಗಾಳ ಗಳಿಗೆ ಕೇಂದ್ರ ಸರಕಾರ‌ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next