Advertisement

ಕೂಡಲೇ ಚಿತ್ರಮಂದಿರ ಪುನರಾರಂಭಿಸಬೇಕೆ?

04:23 PM Sep 10, 2020 | keerthan |

ಮಣಿಪಾಲ: ಕೋವಿಡ್ ಲಾಕ್ ಡೌನ್ ನಿಂದಾಗಿ ಸಿನಿಮಾರಂಗ ತತ್ತರಿಸಿದ್ದು, ಕೂಡಲೇ ಚಿತ್ರಮಂದಿರ ಪುನರಾರಂಭಿಸಿ ಎಂಬ ಬೇಡಿಕೆಗೆ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಯತೀಶ್ ಕುಮಾರ್ ಪಿ: ಎಲ್ಲಾ ವಲಯ ಶುರು ಆಗಲಿ ಯಾಕಂದ್ರೆ ಕೋವಿಡ್ ಎಂಬುದು ಜನರಿಗೆ ಅರ್ಥ ಆಗ್ತಾ ಬಂದಿದೆ, ಕೋವಿಡ್ ರೋಗ ಅಲ್ಲಾ, ಅದೊಂದು ದಂಧೆ ಮತ್ತು ಮಾಫಿಯಾ ಅಂತ.

ನರಸಿಂಹ ಸಿಂಹ: ಚಿತ್ರಮಂದಿರಗಳನ್ನು ನಂಬಿಕೊಂಡು ಹಲವಾರು ಜನ ಜೀವನ ಮಾಡುತ್ತಿದ್ದರು ಅವರಿಗೆಲ್ಲಾ ತೊಂದರೆಯಾಗಿದೆ. ಚಿತ್ರಮಂದಿರ ತೆರೆಯುವುದು ಒಳ್ಳೆಯದು ಎಲ್ಲಾ ಮುಂಜಾಗ್ರತೆಗಳಂದಿಗೆ.

ನವೀ ದಾಸ್: ಇವರಿಂದ ನಮ್ಮ ಸಮಾಜಕ್ಕೆ ಏನು ಉಪಯೋಗವಿಲ್ಲ. ಒಂದು ರೀತಿ ಸಮಾಜದಲ್ಲಿ ಶಾಂತಿ ಬಂಗ, ದರೋಡೆ, ಕೊಲೆ ಪ್ರಕರಣ ನೆದಿಯುತಿರೋದು ಸಿನಿಮಾಗಳ ಪ್ರೇರಣೆಯಿಂದ. ಹಾಗಾಗಿ ಶಾಶ್ವತವಾಗಿ ಮುಚ್ಚುವುದು ಉತ್ತಮ

ಆರ್ಥಿಕ್ ಪಾಲಡ್ಕ: ಥಿಯೇಟರನಲ್ಲಿ ಕಾಫಿ -ಪೋಪ್ ಕಾರ್ನ್ , ಕೋಕ್- ಚಿಪ್ಸ್ ಗೆ ₹ 100-250  ಎಂದು ದೋಚುತಿದವರಿಗೆ ಈ ಕಾಲದಲ್ಲಿಯೇ ಪಾಪ ಅನುಭವಿಸಬೇಕಾಯಿತು.

Advertisement

ಶ್ರೀನಿವಾಸ್ ಎಂ. ಎ: ಬೇಕಾದರೆ ಸಿನಿಮಾದವರ ಸಮಾಧಾನಕ್ಕೆ ಸಿನಿಮಾ ಮಂದಿರ ಅನ್ನು ಓಪನ್ ಮಾಡಲಿ ಸರಕಾರ ನಾವಂತೂ ಇನ್ನೊಂದು ವರ್ಷ ಸಿನಿಮಾ ಮಂದಿರ ಕಡೆ ಬರುವುದಿಲ್ಲ.

ಗೌರೀಶ್ ಬೇವೂರ್: ತತ್ತರಿಸಿದ ಕಾರಣ ಇಟ್ಟುಕೊಂಡು ಟಿಕೆಟ್ ಬೆಲೆಯನ್ನ ದುಪ್ಪಟ್ಟು ಮಾಡಿ ಸಾಮನ್ಯ ಜನರನ್ನು ತತ್ತರಿಸುವಂತೆ ಮಾಡುವುದು ಖಚಿತ.

Advertisement

Udayavani is now on Telegram. Click here to join our channel and stay updated with the latest news.

Next