Advertisement

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

05:05 PM Nov 26, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ಹೈಕೋರ್ಟಗೆ ಜಾಮೀನು ಅರ್ಜಿಯನ್ನು ಸಲ್ಲಿಸಿರುವ ಆರೋಪಿ ದರ್ಶನ್‌ ಪರ ಸಿವಿ ನಾಗೇಶ್‌ ಮಂಗಳವಾರ(ನ.26ರಂದು) ತಮ್ಮ ವಾದವನ್ನು ಮಂಡಿಸಿದ್ದಾರೆ.

Advertisement

ಮಂಗಳವಾರ ಮಧ್ಯಾಹ್ನ ಪ್ರಬಲವಾದ ಅಂಶಗಳೊಂದಿಗೆ ವಾದವನ್ನು ಮಾಡಿದ್ದ ನಾಗೇಶ್‌, ಸಂಜೆಯ ವಿಚಾರಣೆಯಲ್ಲೂ ಅನೇಕ ಅಂಶಗಳನ್ನು ಉಲ್ಲೇಖಿಸಿದ್ದಾರೆ.

 ದರ್ಶನ್‌ ಬಟ್ಟೆಯಲ್ಲಿ ರಕ್ತದ ಕಲೆಗಳಿತ್ತು ಎನ್ನುವ‌ ಪೊಲೀಸರ ಅಂಶವನ್ನು ಉಲ್ಲೇಖಿಸಿರುವ ನಾಗೇಶ್,  ಬಟ್ಟೆ ಒಗೆದ ಸುಶೀಲಮ್ಮ ಅವರ ಹೇಳಿಕೆಯನ್ನು ಪಡೆಯಲಾಗಿದೆ. ಎ.3 ಪವನ್‌ ಬಟ್ಟೆ ಒಗೆಯಲು ಸೂಚಿಸಿದ್ದ. ಜೂ.10ರಂದು ಬಟ್ಟೆ ಒಗೆಯಲಾಗಿದೆ. ಕುಕ್ಕಿ ಕುಕ್ಕಿ ಸರ್ಫ್‌ನಲ್ಲಿ ಬಟ್ಟೆಯನ್ನು ಒಗೆದಿದ್ದಾರೆ. ವೈಜ್ಞಾನಿಕವಾಗಿ ಈ ರೀತಿ ಮಾಡಿದರೆ ರಕ್ತದ ಕಲೆಗಳು ಸಿಗಲ್ಲ ಎಂದಿದ್ದಾರೆ.

ದರ್ಶನ್‌ ಅವರ ಹಣವನ್ನು ಪೊಲೀಸರು ಸೀಜ್‌ ಮಾಡಿದ್ದಾರೆ. ಆದರೆ ಇದನ್ನು ಅವರು ಸಾಕ್ಷ್ಯನಾಶಕ್ಕಾಗಿ ಬಳಸಿದ್ದಾರೆ ಎಂದು ನಮೂದಿಸಲಾಗಿದೆ. ಮೋಹನ್‌ ರಾಜ್‌ ರಿಂದ 38 ಲಕ್ಷ ರೂ. ಪಡೆಯಲಾಗಿತ್ತು. ಮೊದಲೇ ಕೊಲೆ ಆಗುತ್ತದೆ ಎಂದು ಅದನ್ನು ಸಂಗ್ರಹಿಸಿ ಇಡಲಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

ಡ್ರೈವರ್‌, ಮ್ಯಾನೇಜರ್‌, ನೌಕರರಿಗೆ ದರ್ಶನ್‌ ಕರೆ ಮಾಡಿದ್ದಾರೆ. ಎ3 ಪವನ್‌ಗೆ  ಹೆಚ್ಚು ಬಾರಿ ಕರೆ ಮಾಡಿದ್ದಾರೆ ಎಂದು ವಾದಿಸಿದ್ದಾರೆ. ಇವರಿಗೆ ಬಿಟ್ಟು ಉಳಿದವರಿಗೆ ದರ್ಶನ್‌ ಕರೆ ಮಾಡಿಲ್ಲವೆಂದು ವಾದಿಸಿದ್ದಾರೆ.

Advertisement

ವಾದವನ್ನು ಆಲಿಸಿದ  ನ್ಯಾ. ವಿಶ್ವಜಿತ್ ಶೆಟ್ಟಿ ಗುರುವಾರ (ನ.28ಕ್ಕೆ) ಅರ್ಜಿ ವಿಚಾರಣೆಯನ್ನು ಮುಂದೂಡಿದ್ದಾರೆ. ಕಾಲಾವಕಾಶ ಮುಗಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next