Advertisement

Kalaburagi: ಶಾಸಕ ಯತ್ನಾಳ್ ದಿಲ್ಲಿಗೆ ಹೋದಂತೆ ನಾವೂ ಕೂಡಾ ಹೋಗ್ತೇವೆ: ರೇಣುಕಾಚಾರ್ಯ

02:53 PM Dec 05, 2024 | Team Udayavani |

ಕಲಬುರಗಿ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ದಿಲ್ಲಿಗೆ ಹೋಗಿ ದೂರು ನೀಡಿರುವಂತೆ ತಾವೂ ಕೂಡಾ ಹೋಗಿ ಪಕ್ಷದ ಹೈಕಮಾಂಡ್ ಬಳಿ ತೆರಳುತ್ತೇವೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಬಳಿ ತೆರಳಿ ವಸ್ತು ಸ್ಥಿತಿ ವಿವರಿಸುತ್ತೇವೆ. ಯತ್ನಾಳ ಬಿಜೆಪಿ ನಾಯಕತ್ವದ ವಿರುದ್ಧದ ಹೋರಾಟ ನಿಲ್ಲೋದಿಲ್ಲ ಎನ್ನುತ್ತಾರೆ. ಮೊದನೇಯದಾಗಿ ಯಾರ ವಿರುದ್ಧ ಹೋರಾಟ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಬಿಜೆಪಿ ಪಕ್ಷ ಎಲ್ಲವನ್ನು ನೀಡಿದೆ. ಈಗ ಅದೇ ಪಕ್ಷದ ಸಂಘಟನೆ ವಿರುದ್ಧ ಟೀಕೆ ಮಾಡೋದು ಎಷ್ಟರ ಮಟ್ಟಿಗೆ ಸರಿ. ಮೊದಲು ನೊಟೀಸ್ ಬಂದಿಲ್ಲ ಎಂದಿದ್ದರು. ನಂತರ ಬಂದಿದ್ದೇ ಎಂದು ಹೇಳಿದರು. ಒಟ್ಟಾರೆ ಯತ್ನಾಳ ಅವರದ್ದು ದ್ವಿಮುಖ ನೀತಿಯಾಗಿದೆ ಎಂದು ಟೀಕಿಸಿದರು.

ನಾವು ಕಾಂಗ್ರೆಸ್ ವಿರುದ್ಧ ಹೋರಾಡಬೇಕಿದೆ. ಪ್ರಮುಖವಾಗಿ ೭೦೦ ಕೋ.ರೂ ಮುಡಾ ಹಗರಣ ಎಳೆ ಎಳೆಯಾಗಿ ಜನತೆ ಎದುರು ಇನ್ನಷ್ಟು ಬಿಚ್ಚಿಡುವುದು ಅಗತ್ಯವಿದೆ. ಇಡಿ ಈಗಾಗಲೇ ಲೋಕಾಯುಕ್ತಗೂ ದೂರು ನೀಡಿದೆ. ಮುಂದಿನ ದಿನಗಳಲ್ಲಿ ನೈತಿಕತೆ ಬೀದಿಗೆ ಬರಲಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: MUDA Scam: ಸಿದ್ದರಾಮಯ್ಯ ಮೇಲ್ಮನವಿ ಅರ್ಜಿ ವಿಚಾರಣೆ ಜ.25ಕ್ಕೆ ಮುಂದೂಡಿಕೆ

Advertisement

Udayavani is now on Telegram. Click here to join our channel and stay updated with the latest news.

Next