Advertisement

ಎಂಥ ಶಕ್ತಿಯನ್ನೂ ಎದುರಿಸುವ ಛಲ ನನಗಿದೆ

07:30 PM Mar 04, 2021 | Team Udayavani |

ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಜನತೆಯ ಆಶೀರ್ವಾದ, ಅಭಿಮಾನ ಸದಾ ಇದ್ದು, ಎಂತಹ ಶಕ್ತಿಗಳನ್ನು ಕೂಡ ಎದುರಿಸುವ ಆತ್ಮಶಕ್ತಿ ಮತ್ತು ಛಲ ನನಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2020-21ನೇ ಸಾಲಿನ ಸಾಂಸ್ಕೃತಿಕ,ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ಯುವ ರೆಡ್‌ ಕ್ರಾಸ್‌ ಘಟಕ, ರೋವರ್ಸ್‌, ರೇಂಜರ್ಸ್‌ ಚಟುವಟಿಕೆಗಳ ಹಾಗೂ ಹೊನ್ನಕಿರಣ ವಾರ್ಷಿಕ ಸಂಚಿಕೆ -2ರ ಬಿಡುಗಡೆ, ವಿವಿಧ ವೇದಿಕೆಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ, ಹಾಗೂ ಪ್ರಥಮ ವರ್ಷದವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಿಕೆಯ ಸಮಯದಲ್ಲಿ ವಿದ್ಯಾರ್ಥಿಗಳು ಮಾತಾಪಿತೃಗಳಿಗೆ, ಪಾಠ ಹೇಳಿಕೂಡುವ ಗುರುಗಳಿಗೆ ವಿನಯದಿಂದ ಇದ್ದು, ಚೆನ್ನಾಗಿ ಅಭ್ಯಾಸ ಮಾಡಿದರೆ ಒಬ್ಬ ಉತ್ತಮ ನಾಗರಿಕನಾಗಿ ಹೊರಹೊಮ್ಮಬಹುವುದು ಎಂದು ಹೇಳಿದರು.

ವಿಶ್ವದ ಹಲವಾರು ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ ಕೋವಿಡ್‌ -19 ಸರಿಯಾಗಿ ನಿಭಾಯಿಸುವಲ್ಲಿ ವಿಫಲತೆ ಕಂಡಿವೆ. ಆದರೆ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ

ಆಡಳಿತ ಚತುರತೆಯಿಂದಾಗಿ ಕೋವಿಡ್‌-19ನ್ನು ಸಮರ್ಥವಾಗಿ ಎದುರಿಸಲಾಗಿದೆ. ಇವರ ಅಡಳಿತದ ಫಲವಾಗಿ ಇಂದು ಇಡೀ ವಿಶ್ವವೇ ಭಾರತದ ಕಡೆಗೆ ನೋಡುವಂತಾಗಿದೆ ಎಂದರು.

ಪದವಿಯಲ್ಲಿ ಆತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಹೈದರಾಬಾದ್‌ ನಲ್ಲಿ ನಡೆದ ಚೆಸ್‌ ಸ್ಪರ್ಧೆಯಲ್ಲಿ ವಿಜಯಿಗಳಾದ ವಿದ್ಯಾರ್ಥಿಗಳಿಗೆ,ದಾವಣಗೆರೆ ವಿವಿ.ಸಿಂಡಿಕೇಟ್‌  ಸದಸ್ಯರಾಗಿ ಆಯ್ಕೆಯಾಗಿರುವ ಹಿರೇಮಠದ ಹಳದಪ್ಪ, ಇದೇ ಕಾಲೇಜಿನ ವಿ.ವಿ.ಯಿಂದ ಡಾಕ್ಟರೇಟ್‌ ಪದವಿ ಪಡೆದ ಆರಸಯ್ಯ ಅವರನ್ನು ರೇಣುಕಾಚಾರ್ಯ ಸನ್ಮಾನಿಸಿದರು. ಉಪನ್ಯಾಸಕ ಡಾ.ಡಿ.ಸಿ.ಪಾಟೀಲ್‌ ಪ್ರಾಸ್ತವಾವಿಕವಾಗಿ ಮಾತನಾಡಿದರು. ಎಸ್‌ಎಂಎಪ್‌ಸಿ ಕಾಲೇಜಿನ ಪ್ರಾಂಶುಪಾಲ ಡಾ.ಚಾಮರಾಜ್‌, ಸಡಿಸಿ ಸದಸ್ಯರಾದ ಎಸ್‌.ಎಂ. ಹುಡೇದ್‌ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಶಿವಬಸಪ್ಪ, ಎಚ್‌. ಯತ್ತಿನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next