ಬೆಂಗಳೂರು : ಸಚಿವ ಸಂಪುಟ ಕುರಿತಾದ ಕೂಗು ಜೋರಾಗಿರುವ ವೇಳೆಯಲ್ಲಿ ಬಿಜೆಪಿ ಶಾಸಕರಾದ ಬಸವನ ಗೌಡ ಪಾಟೀಲ್ ಯತ್ನಾಳ್ ಮತ್ತು ಎಂ.ಪಿ. ರೇಣುಕಾಚಾರ್ಯ ಗುರುವಾರ ಭೇಟಿ ಮಾಡಿ ಚರ್ಚೆ ನಡೆಸಿರುವುದು ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ.
ಭೇಟಿಯ ಬಳಿಕ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಯತ್ನಾಳ್ ಅತ್ಯಂತ ಅನುಭವಿ ರಾಜಕಾರಣಿಗಳು, ಕೇಂದ್ರ ಸಚಿವರಾಗಿದ್ದರು, ಹಿರಿಯರು. ನಮ್ಮದು ಆಕಸ್ಮಿಕ ಸೌಜನ್ಯದ ಭೇಟಿ ಎಂದರು.
ಮುಂದೆ ಬಿಜೆಪಿ ಅಧಿಕಾರಕ್ಕೆ ಬರಬೇಕು.ಪಾದಯಾತ್ರೆಯ ಮೂಲಕ ಅಧಿಕಾರಕ್ಕೆ ಬಂದೇವು ಅನ್ನುವ ಹಾಗೆ ಡಿ ಕೆ ಶಿವಕುಮಾರ್ ಇದ್ದಾರೆ. ಹೀಗಾಗಿ ಅವರ ವೇಗ ತಡೆಯಲು ಚರ್ಚೆ ನಡೆಸಿದೆವು ಎಂದರು.
ಕಾಲ ಬಂದರೆ ಹೈಕಮಾಂಡ್ ನಾಯಕರನ್ನ ಭೇಟಿ ಮಾಡುತ್ತೇವೆ. ಮಾರ್ಚ್ ಆದ ಮೇಲೆ ಮಂತ್ರಿಗಿರಿ ಕೊಟ್ಟರೆ ಅಭಿವೃದ್ಧಿ ಆಗುತ್ತದಾ.ಯತ್ನಾಳ್ ಹಿರಿಯರಿದ್ದಾರೆ, ಅವರು ಮಂತ್ರಿಯಾಗಲಿ ಅಂತ ಶುಭಕೋರುತ್ತೇನೆ ಎಂದರು.
ಸಂಪುಟ ಪುನರ್ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಸಚಿವರ ವಿರುದ್ದವೂ ಆಕ್ರೋಶ ಇಲ್ಲ. ಸಂಘಟನೆ ಹಾಗೂ ಸರ್ಕಾರಕ್ಕೆ ಯಾರು ಒಳ್ಳೆಯ ಮಾಡಿದ್ದಾರೋ ಅವರನ್ನ ಮುಂದುವರೆಸುವುದು ಒಳ್ಳೆಯದು.ಅಧಿಕಾರಕೊಸ್ಕರ ಇದ್ದವರು, ಸ್ವಾರ್ಥಕೊಸ್ಕರ ಇದ್ದವರನ್ನ ಕೈಬಿಡಬೇಕು ಎಂದರು.
ರಾಷ್ಟ್ರೀಯ ನಾಯಕರನ್ನ ಭೇಟಿ ಮಾಡುತ್ತೇವೆ, ಸಿಎಂ ಜೊತೆಗೆ ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಬಿಜೆಪಿ ದೇಶದಲ್ಲಿ ರಾಜ್ಯದಲ್ಲಿ ಸದೃಢವಾಗಿದೆ, ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು.
ಎಲ್ಲಾ ಶಾಸಕರು ಮಾತನಾಡುವುದಕ್ಕೆ ಆಗುತ್ತಿಲ್ಲ.ಬಹಳಷ್ಟು ಶಾಸಕರು ನಮಗೆ ಹೇಳಿದ್ದಾರೆ, ಹೀಗಾಗಿ ನಾವಿಬ್ಬರು ಸಚಿವ ಸಂಪುಟದ ಬಗ್ಗೆ ಮಾತನಾಡಿದ್ದೇವೆ. ಬಿಜೆಪಿಯಲ್ಲಿ ಸಹಿ ತೆಗೆದುಕೊಳ್ಳುವ ಸಂಸ್ಕೃತಿ ಇಲ್ಲ ಎಂದರು.