ಬೆಂಗಳೂರು : ರೇಣುಕಾಚಾರ್ಯ ಅವರು ಮುತ್ತುರಾಜ. ಅವರ ಬಗ್ಗೆ ಮಾತಾಡಲ್ಲ. ಆದರೆ ವಿದ್ಯಾರ್ಥಿಗಳಿಗೆ ಒಬ್ಬ ಮಂತ್ರಿಯ ಮಗನೇ ಕೇಸರಿ ಶಾಲು ಹಂಚಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಸರಿ ಶಾಲು ಸರಬರಾಜು ಮಾಡಿದವರು ಯಾರು ಪೇಟಾಗಳನ್ನು ತಂದವರು ಯಾರು ? 50 ಲಕ್ಷ ಶಾಲು ಸೂರತ್ ನಲ್ಲಿ ಆರ್ಡರ್ ಮಾಡಿದ್ದಾರೆ. ನಮಗೆಲ್ಲ ಎಲ್ಲ ಗೊತ್ತಾಗಲ್ಲ ಅಂದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಮ ಕೂಡ ಮಾಹಿತಿ ನೀಡುವವರು ಇದ್ದಾರೆ.ಯಾಕೆ ಕ್ಯಾಮೆರಾ ಬಂದಾಗ ಮುಚ್ಚುಕೊಳ್ಳುವ ಕೆಲಸ ಮಾಡಿದ್ರು.ಇದರ ಹಿಂದೆ ಯಾರು ಇದ್ದಾರೆ ಅಂತ ಗೊತ್ತಿದೆ ಗಂಭೀರ ಆರೋಪ ಮಾಡಿದ್ದಾರೆ.
ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಅಂತರ ಕಾಪಾಡಿಕೊಂಡ ವಿಚಾರಕ್ಕೆ, ನಾವು ಸಂವಿಧಾನಕ್ಕೆ ಬದ್ಧ .ನಾವು ಸಂವಿಧಾನದ .ಮೇಲೆ ಪ್ರಮಾಣವಚನ ತೆಗೆದುಕೊಂಡಿದ್ದೇವೆ.ನಾನು ಹುಟ್ಟಿದ ಧರ್ಮ ನಮಗೆ ಮುಖ್ಯ.ನಾನು ಕುಂಕುಮ,ಗಂಧ,ವಿಭೂತಿ ಇಡ್ತೇನೆ. ನಾವು ಸಂವಿಧಾನದ ಪ್ರಕಾರ ನಡ್ಕೋತ್ತೇವೆ.ಅವರವರ ಧರ್ಮ ಅವರಿಗೆ ಮುಖ್ಯ.ಯಾರು ಬಲವಂತ ಮಾಡಲು ಆಗಲ್ಲ ಎಂದರು.
ರಾಷ್ಟ್ರ ಧ್ವಜ ಕಂಬದ ಮೇಲೆ ಎಲ್ಲಾ ಧ್ವಜ ಹಾರಿಸೋಕ್ಕೆ ಆಗಲ್ಲ .ಅದು ಸರ್ಕಾರದ ಪ್ರಾಪರ್ಟಿ ಕಂಬ ಬೇರೆ ಧ್ವಜ ಬೇರೆನಾ..? ಎಲ್ಲಾ ಧ್ವಜಗಳನ್ನ ಎಲ್ಲಾ ಕಡೆ ಹಾರಿಸೋಕ್ಕೆ ಆಗಲ್ಲ .ಎಲ್ಲಾ ಟಿವಿಗಳನ್ನೂ ಗಮನಿಸಿದ್ದೇನೆ .ಎಲ್ಲಾ ದಾಖಲೆಗಳು ನನ್ನ ಬಳಿ ಇವೆ ಎಂದರು.
ರಾಷ್ಟ್ರ ಧ್ವಜದ ಮೇಲೆ ಕೇಸರಿ ಶಾಲು ಹಾಕಿದ್ದು ತಪ್ಪು ಎಂದು ಅಶೋಕ್ ಒಪ್ಪಿಕೊಂಡಿದ್ದಾರೆ .ಅದು ಅಶೋಕ್ ದೊಡ್ಡತನ. ಆದರೆ ಕೇಸರಿ ಶಾಲು ತರಿಸಿದ್ದು ಯಾರು..?ಶಿವಮೊಗ್ಗದಲ್ಲಿ ಓರ್ವ ಶಾಸಕ ಕೇಸರಿ ಶಾಲು ತರಿಸಿದ್ದಾರೆ .ಮಕ್ಕಳಿಗೆ ಪ್ರಚೋದನೆ ಮಾಡಬೇಡಿ.ಮಕ್ಕಳಿಗೆ ವಿಷಬೀಜ ಬಿತ್ತೋದು ಬೇಡ ಎಂದರು.