Advertisement

ರೇಣುಕಾಚಾರ್ಯ ಕಾಲ್ಪನಿಕ ವ್ಯಕ್ತಿ

11:51 AM Aug 21, 2017 | |

ಬಾಗಲಕೋಟೆ: ವೀರಶೈವ ಲಿಂಗಾಯತ ಧರ್ಮ ಸ್ಥಾಪಕರು ಶ್ರೀ ರೇಣುಕಾಚಾರ್ಯರು ಎಂದು ಪಂಚ ಪೀಠಾಧೀಶರು ಹೇಳಿಕೊಂಡು ಬರುತ್ತಿದ್ದಾರೆ. ಆದರೆ, ರೇಣುಕಾಚಾರ್ಯರು ಒಬ್ಬ ಕಾಲ್ಪನಿಕ ವ್ಯಕ್ತಿ ಎಂದು ಬಸವಧರ್ಮ ಪೀಠಾಧ್ಯಕ್ಷೆ ಜಗದ್ಗುರು ಶ್ರೀ ಮಾತೆ ಮಹಾದೇವಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಧರ್ಮಕ್ಕೆ ತಳಬುಡ ಇಲ್ಲ. ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ವಿರೋಧಿಸುವವರಿಗೆ ಅಧ್ಯಯನದ ಕೊರತೆ ಇದೆ. ಸಮಗ್ರ ಅಧ್ಯಯನ ಮಾಡಿದವರಿಗೆ ಲಿಂಗಾಯತ ಧರ್ಮದ ಬಗ್ಗೆ ಸ್ಪಷ್ಟ ಉತ್ತರ ಸಿಗುತ್ತದೆ. ಲಿಂಗಾಯತ ಧರ್ಮ ಬೇಡಿಕೆಗೆ ಬಿಜೆಪಿ ಮತ್ತು ಆರ್‌ ಎಸ್‌ಎಸ್‌ ಮುಖಂಡರು ಬೆಂಬಲಿಸಬಾರದು ಮತ್ತು ಆ ಹೇಳಿಕೆಗಳಿಂದ ದೂರ ಇರಬೇಕೆಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಹೇಳಿರುವುದನ್ನು ಪತ್ರಿಕೆಗಳಲ್ಲಿ ನೋಡಿದ್ದೇನೆ. ಆದರೆ, ಪ್ರತ್ಯೇಕ ಧರ್ಮಕ್ಕಾಗಿ ಮೋಹನ ಭಾಗವತ್‌ ಅವರೂ ಬೆಂಬಲಿಸಬೇಕು ಎಂದು ಒತ್ತಾಯಿಸಿದರು.

ತುಮಕೂರಿನ ಸಿದ್ಧಗಂಗಾ ಶ್ರೀಗಳು, ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯದಲ್ಲಿ ಯಾವುದೇ ಹೇಳಿಕೆ ಕೊಟ್ಟಿಲ್ಲ. ಒಂದು ಕಾರ್ಯಕ್ರಮದಲ್ಲಿ ತಾವು ವೀರಶೈವ ಮಠಗಳ ಪರಂಪರೆಯವರು ಎಂದು ಹೇಳಿಕೊಳ್ಳುವ ಮೂಲಕ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ತಾವು ಒಪ್ಪುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಸಿದ್ಧಗಂಗಾ ಶ್ರೀಗಳಿಗೂ ಅಧ್ಯಯನದ ಕೊರತೆ ಇದೆ. ಯಡಿಯೂರಪ್ಪ ಅವರು ಪ್ರತ್ಯೇಕ ಧರ್ಮಕ್ಕೆ ಈ ಹಿಂದೆ ಒಪ್ಪಿಕೊಂಡಿದ್ದರು. ಈಗ ಬಿಜೆಪಿ ಹೈಕಮಾಂಡ್‌ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಅವರು ಸುಮ್ಮನಾಗಿದ್ದಾರೆ. ಮೇಲಾಗಿ ಅವರಿಗೆ ಅಧ್ಯಯನ, ಆತ್ಮವಿಶ್ವಾಸದ ಕೊರತೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next