Advertisement

ಸವದಿಗೆ ಡಿಸಿಎಂ ಸ್ಥಾನ, ಅಲ್ಪನಿಗೆ ಐಶ್ವರ್ಯ ಬಂದಂತಾಗಿದೆ : ರೇಣುಕಾಚಾರ್ಯ ವ್ಯಂಗ್ಯ

10:17 AM Oct 30, 2019 | Team Udayavani |

ಕುಷ್ಟಗಿ: ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿಯಾಗಿರುವುದು ಅಲ್ಪನಿಗೆ ಐಶ್ವರ್ಯ ಬಂದಂತಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ತಮ್ಮ ಪಕ್ಷದ ಡಿಸಿಎಂ ವಿರುದ್ದ ವಾಗ್ದಾಳಿ ನಡೆಸಿದರು.

Advertisement

ಕುಷ್ಟಗಿಯ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಇತಿಹಾಸದಲ್ಲಿ 25 ಸಾವಿರ ಮತಗಳ ಅಂತರದಿಂದ ಸೋತವರಿಗೆ ಮಂತ್ರಿ ಅಷ್ಟೇ ಉಪಮುಖ್ಯಮಂತ್ರಿ ಮಾಡಿರುವುದಕ್ಕೆ ಲಕ್ಷ್ಮಣ ಸವದಿ ಗೌರವದಿಂದ ನಡೆದುಕೊಳ್ಳಬೇಕಿತ್ತು. ಅನರ್ಹ ಶಾಸಕರು ಸಂಬಂಧವೇ ಇಲ್ಲ ಎನ್ನುವ ಹೇಳಿಕೆ ಸಲ್ಲ ಪಕ್ಷಕ್ಕೆ ಮುಜುಗುರ ತರುವ ಹೇಳಿಕೆ ನೀಡಲೇ ಬಾರದಿತ್ತು. 17 ಜನ ಶಾಸಕರ ರಾಜಿನಾಮೆ ತ್ಯಾಗದ ಹಿನ್ನೆಲೆಯಲ್ಲಿ ಸವದಿಗೆ ಡಿಸಿಎಂ ಎಂದು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಅನರ್ಹ ಶಾಸಕರ ರಾಜಿನಾಮೆಯಿಂದ ಎನ್ನುವುದು ಮರೆಯಬಾರದು. ಅನರ್ಹ ಶಾಸಕರು ಸಂಬಂಧವೇ ಇಲ್ಲ ಎನ್ನುವುದನ್ನು ಖಂಡಿಸುವೆ ಎಂದ ಅವರು, ಯಾರು ಬಿಜೆಪಿ ಅಧಿಕಾರಕ್ಕೆ ಬರಲು ರಾಜಿನಾಮೆ ಕೊಟ್ಟಿರುವರೋ ಅವರಿಗೆ ಅವಮಾನಿಸಿದಂತೆ, ಈ ಹೇಳಿಕೆಯಿಂದ ಸರ್ಕಾರದ ವಿರುದ್ದ ವಿರೋಧಾಭಾಸದ ವಿಚಿತ್ರ ಹೇಳಿಕೆಯಿಂದ ಕೆರಳಿಸುವಂತಾಗಿದ್ದು ಅವರೇನಾದರೂ ನಮ್ಮ ಸರ್ಕಾರದ ವಿರುದ್ದವೇ ತಿರುಗಿ ಬಿದ್ದರೆ ಹೇಗೆ? ಎಂದು ಆತಂಕ ವ್ಯಕ್ತಪಡಿಸಿದರು.

ವರಿಷ್ಠರ ನಡೆ ಪ್ರಶ್ನಿಸಲಾರೆ..:ಸೋತವರು ಮುಖ್ಯಮಂತ್ರಿಯಾಗಿರುವುದು ನನಗೂ ಅಶ್ಚರ್ಯ ಜೊತೆಗೆ ಬೇಸರವೂ ತಂದಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯದ ವರಿಷ್ಠರ ನಡೆಯನ್ನು ಪ್ರಶ್ನಿಸುವುದಿಲ್ಲ. ಅವರು ಯಾವ ಕಾರಣಕ್ಕೆ ಡಿಸಿಎಂ ಸ್ಥಾನ ಅವರಿಗೆ ಕಲ್ಪಿಸಿದ್ದಾರೆನ್ನುವುದು ತಿಳಿಯದ ವಿಚಾರವಾಗಿದೆ. ಲಕ್ಷ್ಮಣ ಸವದಿ ಎಂ.ಎಲ್.ಎ. ನೂ ಅಲ್ಲ, ಎಂ.ಎಲ್ ಸಿಯೂ ಅಲ್ಲ ಅಂತವರು ಉಪ ಮುಖ್ಯಮಂತ್ರಿ ಮಾಡಿರುವ ಈ ವಿಷಯದಲ್ಲಿ ವರಿಷ್ಠರನ್ನು ಪ್ರಶ್ನಿಸುವುದಿಲ್ಲ ನಾನೋರ್ವ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿರುವೆ ಎಂದರು.

ಡಿಸಿಎಂ ಲಕ್ಷ್ಮಣ ಸವದಿ ಈ ಹೇಳಿಕೆಗೆ ಒಬ್ಬ ವ್ಯಕ್ತಿಯಿಂದ ಸರ್ಕಾರವನ್ನು ಏನೂ ಮಾಡಲು ಸಾಧ್ಯವಿಲ್ಲ. ಸರ್ಕಾರಕ್ಕೆ ಮುಜುಗುರ ತರುವ ಹೇಳಿಕೆಗಳನ್ನು ನಿಲ್ಲಿಸಬೇಕಿದೆ .

Advertisement

ಡಿಕೆಶಿ ಯಾವ ಲೆಕ್ಕ ಮಾದ್ಯಮದಲ್ಲಿ ಹುಲಿ ಬಂತು ಹುಲಿ, ಕನಕಪುರದ ಬಂಡೆ ಎಂದು ಬಿಂಬಿಸಲಾಗುತ್ತಿದೆ. ಆ ಬಂಡೆ ಕರಗಿ ಹೋಗಿದೆ. ಅವರು ಬಂದು ಒಮ್ಮೆಲೆ ಜಾದು ಮಾಡಿಬಿಡುತ್ತಾರೆಯೇ ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಲು ಮೂರು ತಿಂಗಳು ಕಾಯಬೇಕಾಯಿತು. ಅವರು, ಕಾಡಿ ಬೇಡಿ ವಿರೋಧ ಪಕ್ಷದ ನಾಯಕ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವರು ಸಿಎಂ ಭ್ರಮೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next