Advertisement
ರೇಣುಕಾಚಾರ್ಯರ ರಾಜಕೀಯ ಆರಂಭದ ದಿನಗಳು ಮುಳ್ಳಿನ ಹಾದಿ. 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದಾಗ ರೇಣುಕಾಚಾರ್ಯ ಗೆಲ್ಲುವುದು ಕನಸು ಎಂದೇ ಅನೇಕರು ಭಾವಿಸಿದ್ದರು. ಆದರೆ ರೇಣುಕಾಚಾರ್ಯ ಅವರು ಗೆಲುವು ಸಾಧಿಸಿ ಒಬ್ಬº ಸಾಮಾನ್ಯ ಕಾರ್ಯಕರ್ತ ಸಂಘಟನೆಯಿಂದ, ಜನ ಮನ್ನಣೆಯಿಂದ ಹೇಗೆ ರಾಜಕೀಯದ ಹಾದಿಯಲ್ಲಿ ಮೇಲೇರಬಹುದು ಎಂಬುದನ್ನು ಸಾಧಿಸಿ ತೋರಿಸುವ ಮೂಲಕ ಗೆಲುವು ಕಷ್ಟ ಎಂದವರೇ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ್ದರು.
Related Articles
Advertisement
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸಂಪುಟದಲ್ಲಿ ಅಬಕಾರಿ ಖಾತೆಯಂತಹ ಮಹತ್ವದ ಖಾತೆಯ ಸಚಿವರಾಗಿ ರಾಜ್ಯದೆಲ್ಲೆಡೆ ಸುತ್ತಾಡಿ ಕಳ್ಳ ಭಟ್ಟಿ ಅಡ್ಡೆಗಳನ್ನು ಸಂಪೂರ್ಣ ನಾಶಮಾಡಿ ಸರ್ಕಾರದ ಬೊಕ್ಕಸಕ್ಕೆ ದಾಖಲೆಯ ಪ್ರಮಾಣದಲ್ಲಿ ಆದಾಯ ತಂದುಕೊಟ್ಟರು.
ಯಾವುದೇ ಕ್ಷೇತ್ರದಲ್ಲಿ ಸಾಧನೆ… ಎಂಬುದು ಸಾರ್ಥಕತೆಯ ಪ್ರತಿಬಿಂಬ. ತಳಮಟ್ಟದಿಂದಲೇ ಅದ್ಭುತ ಸಾಧನೆಗೈದು ಜನಸೇವೆಗೆ ತನ್ನನ್ನು ತಾನು ಅರ್ಪಿಸಿಕೊಂಡಿರುವ ರಾಜಕಾರಣಿ ಎಂ.ಪಿ. ರೇಣುಕಾಚಾರ್ಯ ಅಭಿವೃದ್ಧಿ ಎಂಬ ಪದಕ್ಕೆ ಅನ್ವರ್ಥವಾಗಿ ಬೆಳೆದ ಜನನಾಯಕ. ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಶಿಕ್ಷಣ, ಆರೋಗ್ಯ, ರಸ್ತೆಗಳು, ಕುಡಿಯುವ ನೀರು, ವಿದ್ಯಾರ್ಥಿ ನಿಲಯಗಳು, ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಮತ್ತು ಡಿಪೋ, ತುಂಗಾ ಭದ್ರಾ ನದಿಗೆ ನೂತನ ಸೇತುವೆ, 131 ಕೋಟಿ ವೆಚ್ಚದ ಹೊನ್ನಾಳಿ- ಸವಳಂಗ ಚತುಷ್ಪಥ ಹೆದ್ದಾರಿ, ಭದ್ರಾ ಮತ್ತು ತುಂಗಾ ನಾಲಾ ಆಧುನೀಕರಣ, ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣ, ಆಸ್ಪತ್ರೆ, ದಾದಿಯರ ಕಟ್ಟಡಗಳು, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಮೊರಾರ್ಜಿ ವಸತಿ ಶಾಲೆಗಳು, ಪಾಲಿಟೆಕ್ನಿಕ್ ಹಾಗೂ ಐ.ಟಿ.ಐ ಕಾಲೇಜುಗಳು ಅಲ್ಪಸಂಖ್ಯಾಂತರ ಉರ್ದು ಪ್ರೌಢಶಾಲೆ ಮತ್ತು ಮಸೀದಿ, ದರ್ಗಾ ಅಭಿವೃದ್ಧಿ, ಪೊಲೀಸ್ ಠಾಣೆ ಕಟ್ಟಡಗಳು ಮತ್ತು 7 ವಸತಿ ಗೃಹಗಳು, ನೂತನ ಅಗ್ನಿ ಶಾಮಕ ಠಾಣೆ, ತಾಲೂಕು ಕ್ರಿಡಾಂಗಣ ಮತ್ತು ಅತ್ಯಾಧುನಿಕ ಸುಸಜ್ಜಿತ ಒಳಾಂಗಣ ಕ್ರಿಡಾಂಗಣ, ವಿದ್ಯಾರ್ಥಿ ನಿಲಯ ಕಟ್ಟಡಗಳು, ಪ್ರಥಮ ದರ್ಜೆ ಮತ್ತು ಪಿ.ಯು. ಕಾಲೇಜುಗಳ ಕಟ್ಟಡಗಳು, ಹಾಗೂ ಪ್ರಾಥಮಿಕ, ಪ್ರೌಢಶಾಲಾ ಕಟ್ಟಡಗಳು, ಹಾಗೂ 6 ಪ್ರೌಢಶಾಲೆಗಳ ಮಂಜೂರಾತಿ. ಅಂಗನವಾಡಿ ಕಟ್ಟಡಗಳು, ಸ್ತ್ರೀ ಶಕ್ತಿ ಭವನ, ನೂತನ ಪ್ರವಾಸಿ ಮಂದಿರ, ಹೊನ್ನಾಳಿ ಪಟ್ಟಣಕ್ಕೆ ಶುದ್ದ ಕುಡಿಯುವ ನೀರಿನ ಘಟಕ, ಪಟ್ಟಣದ ಒಳಚರಂಡಿ ವ್ಯವಸ್ಥೆ, ನಗರೋತ್ಥಾನ ಯೋಜನೆಯಡಿ ಯಲ್ಲಿ ನಗರದ ಸರ್ವಾಂಗೀಣ ಅಭಿವೃದ್ಧಿ ಕಾರ್ಯ… ಹೀಗೆ ಹತ್ತು ಹಲವು ಏಣಿಕೆಗೆ ಸಿಗದಷ್ಟು, ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಿರುವುದು ಅವರ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ.
ಹಲವಾರು ಕಾಯಿಲೆಗಳಿಗೆ ತುತ್ತಾದ, ಬಡರೋಗಿಗಳ ಚಿಕಿತ್ಸೆಗೆ ಮತ್ತು ಚಿಕಿತ್ಸೆ ಫಲಿಸದೆ ಮರಣ ಹೊಂದಿದ ಕುಟುಂಬದವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ಒದಗಿಸುವಲ್ಲಿ ಮುಂಚೂಣಿ ಸ್ಥಾನದಲ್ಲಿದ್ದಾರೆ. 10 ಕೋಟಿಗೂ ಆಧಿಕ ಮೊತ್ತದ ಪರಿಹಾರ ದೊರಕಿಸಿಕೊಟ್ಟಿರುವ ಹೆಗ್ಗಳಿಕೆಗೆ ರೇಣುಕಾಚಾರ್ಯ ಪಾತ್ರರಾಗಿದ್ದಾರೆ. ತಾಲೂಕಿನಲ್ಲಿ ದಿನನಿತ್ಯ ಯಾವುದೇ ಸಾವು, ನೋವು ಸಂಭವಿಸಿದರೂ ಕೇವಲ ದೂರವಾಣಿ ಕರೆಗೆ ಸ್ಪಂದಿಸಿ ತಕ್ಷಣ ನೊಂದವರ ಮನೆಗೆ ತೆರಳಿ ಕೈಲಾದಷ್ಟು ಪ್ರಾಮಾಣಿಕವಾಗಿ ಧನ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಪ್ರತಿನಿತ್ಯ ತಮ್ಮ ಕಷ್ಟ ಹೇಳಿಕೊಂಡು, ಬಡ ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಅಂಗವಿಕಲರು, ವಯೋವೃದ್ಧರು, ಆರ್ಥಿಕವಾಗಿ ಹಿಂದುಳಿದವರು, ಮದುವೆ ಇನ್ನು ಮುಂತಾದ ಶುಭ ಕಾರ್ಯಗಳಿಗೂ ಕೂಡಾ ತಮ್ಮಿಂದಾದ ಧನ ಸಹಾಯ ಮಾಡುವುದನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಎಂ.ಪಿ.ರೇಣುಕಾಚಾರ್ಯ ಅವರು ಅಧಿಕಾರ ಇದ್ದಾಗಲೂ ಹಾಗೂ ಅಧಿಕಾರ ಕಳೆದುಕೊಂಡಾಗಲೂ ಸದಾ ಜನರ ಜೊತೆ ಇರುತ್ತಾರೆ ಎಂಬುದಕ್ಕೆ ಅವರ ಮನೆಯಲ್ಲಿ ಸದಾ ಎಲ್ಲಾ ಜನಾಂಗದ ಜನಜಂಗುಳಿ ಇರುವುದೇ ಸಾಕ್ಷಿಯಾಗಿದೆ.
ಬರಗಾಲದಿಂದ ಆತ್ಮಹತ್ಯೆಗೆ ಒಳಗಾದ ರೈತರ ಮನೆಗೆ ತೆರಳಿ ಸಾಂತ್ವನ ಹೇಳುವ ಮೂಲಕ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ತಮ್ಮ ಹೋರಾಟದ ಮೂಲಕ ಸರ್ಕಾರದಿಂದ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿ ನೊಂದವರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮದು ಕೇವಲ ಮಾತಿನಲ್ಲಷ್ಟೇ ಸಾಧನೆ ಅಲ್ಲ. ಆಡಿದ್ದನ್ನು ಮಾಡಿ ತೋರಿಸುವ ಜನಸೇವಕ ಹಾಗೂ ನಾಯಕ ಎಂಬುದನ್ನು ರೇಣುಕಾಚಾರ್ಯರು ಸಾಬೀತುಪಡಿಸಿದ್ದಾರೆ.