ಮನೆ ಮಾಲಕರೊಬ್ಬರು ಮನೆ ಬಾಡಿಗೆಗೆ ಇದೆ ಎಂದು ವೆಬ್‌ಸೈಟ್‌ನಲ್ಲಿ ಜಾಹೀರಾತು ಹಾಕಿದ್ದರು. ಜು. 2ರಂದು 7735161638ರಿಂದ ಮಾಲಕರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ತಾನು ಎನ್‌ಎಸ್‌ಜಿ ಕಮಾಂಡೋ ಆಗಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕರ್ತವ್ಯಕ್ಕೆ ವರ್ಗಾವಣೆಯಾಗಿದೆ.
Advertisement
ಬಾಡಿಗೆಗೆ ಮನೆ ಬೇಕಾಗಿದ್ದು ಮುಂಗಡ ಹಣ ಪಾವತಿ ಮಾಡುವುದಾಗಿ ತಿಳಿಸಿದ್ದ. ಬಳಿಕ ಎನ್‌ಎಸ್‌ಜಿಯ ನಕಲಿ ಗುರುತು ಚೀಟಿ, ಆಧಾರ್ ಕಾರ್ಡ್, ಪಾನ್‌ಕಾರ್ಡ್, ಆರ್ಮಿ ಕ್ಯಾಂಟೀನ್ ಕಾರ್ಡ್‌ಗಳನ್ನು ಕಳುಹಿಸಿ, ಹೆಡ್‌ಕ್ವಾರ್ಟಸ್‌ನಿಂದ ಕರೆ ಮಾಡುತ್ತಾರೆ ಎಂದು ಹೇಳಿದ್ದ. ಹತ್ತು ನಿಮಿಷಗಳ ಅನಂತರ ಹೆಡ್‌ಕ್ವಾರ್ಟಸ್‌ನಿಂದ ಕರೆ ಮಾಡುತ್ತಿರುವುದಾಗಿ ಹೇಳಿದ ಇನ್ನೋರ್ವ ವ್ಯಕ್ತಿ ಮಾಲಕರಿಗೆ ಕರೆ ಮಾಡಿ ಬಾಡಿಗೆ ಮನೆಯ ಮುಂಗಡ ಹಣ ಪಾವತಿಸಲು ಖಾತೆಯನ್ನು ಖಚಿತಪಡಿಸಿಕೊಳ್ಳಬೇಕು.