Advertisement

ಚುನಾವಣೆ ಕರ್ತವ್ಯದ ವಾಹನಗಳಿಗೆ ಬಾಡಿಗೆ ಬಾಕಿ!

12:28 AM Aug 06, 2023 | Team Udayavani |

ಬಂಟ್ವಾಳ: ವಿಧಾನಸಭೆ ಚುನಾವಣೆ ನಡೆದು ಚುನಾಯಿತರಾ ದವರು ಶಾಸಕ, ಸಚಿವ, ಮುಖ್ಯಮಂತ್ರಿಯಾಗಿ ಎಲ್ಲಡೆ ಓಡಾಡುತ್ತಿದ್ದಾರೆ. ಆದರೆ ಚುನಾವಣೆ ಕರ್ತವ್ಯಕ್ಕೆ ವಾಹನ ನೀಡಿದವರು ಮಾತ್ರ 3 ತಿಂಗಳು ಕಳೆದರೂ ಬರಬೇಕಾದ ಹಣಕ್ಕಾಗಿ ಇರುವ ಕಚೇರಿಗಳಿಗೆಲ್ಲ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಪ್ರತೀ ವಾಹನಗಳಿಗೂ ಸರಕಾರವೇ ಬಾಡಿಗೆ ನಿಗದಿಪಡಿಸಿ ಆದೇಶ ನೀಡಿತ್ತು. ಆದರೆ ಬಹುತೇಕ ವಾಹನಗಳಿಗೆ ಅರ್ಧ ದಷ್ಟೂ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಅಧಿ ಕಾರಿ ಗಳಲ್ಲಿ ಕೇಳಿದರೆ “ಸ್ವಲ್ಪ ದಿನಗಳಲ್ಲಿ ಸರಿಯಾಗುತ್ತದೆ’ ಎಂಬ ಎನ್ನುತ್ತಿ ದ್ದಾ ರೆಯೇ ವಿನಾ ಸಮರ್ಪಕ ಉತ್ತರ ಇಲ್ಲ.

ಸಾಲ ಮಾಡಿ ವಾಹನ ಖರೀದಿ ಸಿರುವ ಮಾಲಕರು ಇದೀಗ ಮರು ಪಾವತಿಗೆ ಪರದಾಡಬೇಕಾದ ಸ್ಥಿತಿ ಇದೆ.

ದ.ಕ. ಜಿಲ್ಲೆಯಲ್ಲಿ 600ಕ್ಕೂ ಅಧಿಕ ಟೂರಿಸ್ಟ್‌ ವಾಹನಗಳನ್ನು ಚುನಾವಣೆ ಕರ್ತವ್ಯಕ್ಕೆ ಪಡೆಯಲಾಗಿದ್ದು, ಬಹು ತೇಕ ಮಂದಿಗೆ ಅಲ್ಪ ಮೊತ್ತ ಪಾವತಿ ಯಾಗಿದೆ ಎನ್ನಲಾಗುತ್ತಿದೆ. ಬೇರೆ ಬೇರೆ ವಿಭಾಗಗಳಿಗೆ ವಾಹನಗಳನ್ನು ಬಾಡಿಗೆ ಪಡೆದ ಪರಿಣಾಮ ಎಷ್ಟು ವಾಹನ ಗಳಿಗೆ, ಎಷ್ಟೆಷ್ಟು ಬಾಡಿಗೆ ಪಾವತಿಯಾಗಿದೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಬಾಡಿಗೆ ಎಷ್ಟೆಷ್ಟು ನಿಗದಿ?
ಕ್ಯಾಬ್‌ (6 ಪ್ಲಸ್‌ 1) ಪ್ರತೀ ಕಿ.ಮೀ.ಗೆ 14.5 ರೂ.ಗಳಂತೆ ದಿನಕ್ಕೆ ಗರಿಷ್ಠ 2,800 ರೂ., ವಾಹನವನ್ನು ಬಳಸದೇ ಇದ್ದರೆ ದಿನಕ್ಕೆ 1,550 ರೂ., ಮ್ಯಾಕ್ಸಿ ಕ್ಯಾಬ್‌ಗ ಪ್ರತೀ ಕಿ.ಮೀ.ಗೆ 19 ರೂ.ಗಳಂತೆ ದಿನಕ್ಕೆ ಗರಿಷ್ಠ 3,800 ರೂ., ಬಳಸದೇ ಇದ್ದರೆ 3,400 ರೂ. ನಿಗದಿಯಾಗಿತ್ತು. ಹೀಗೆ ಬಸ್‌, ಗೂಡ್ಸ್‌ ವಾಹನ, ಆಟೋ ರಿಕ್ಷಾಗಳಿಗೂ ನಿಗದಿ ಮಾಡಿ ಸರಕಾರ ಆದೇಶ ನೀಡಿತ್ತು. ಚಾಲಕರ ವೇತನ, ಇಂಧನ, ಇತರ ಎಲ್ಲ ವೆಚ್ಚಗಳು ಇದರಲ್ಲಿ ಒಳಗೊಂಡಿವೆ.

Advertisement

ತಾಲೂಕುಗಳಿಗೆ ಅನುದಾನ
ವಾಹನಗಳ ಬಾಡಿಗೆ ಕುರಿತು ದ.ಕ. ಜಿಲ್ಲಾ ಚುನಾವಣ ಶಾಖೆ ಯಿಂದ ಮಾಹಿತಿ ಕೇಳಿದಾಗ, ಬಾಡಿಗೆಗೆ ವಾಹನ ಪಡೆಯುವ ಕುರಿತು ನಾವು ಆಯಾಯ ತಾಲೂ ಕಿಗೆ ಅನು ದಾನ ನೀಡಿದ್ದೇವೆ. ವಾಹನಗಳ ನಿಯೋ ಜನೆ ಹಾಗೂ ಬಾಡಿಗೆ ಹಂಚಿಕೆಯ ಕಾರ್ಯ ಸ್ಥಳೀಯ ತಹಶೀಲ್ದಾರ್‌ ಮೂಲಕವೇ ನಡೆಯುತ್ತದೆ. ಬಾಡಿಗೆ ವಿಚಾರಕ್ಕೆ ಸಂಬಂಧಿಸಿ ಲೋಪ ದೋಷಗಳಿದ್ದರೆ ನಮ್ಮ ಗಮನಕ್ಕೆ ಬರುವುದಿಲ್ಲ. ಬಾಡಿಗೆಗೆ ಪಡೆದ ಸುಮಾರು 200 ಬಸ್‌ಗಳ ಪೈಕಿ 45 ಕೆಎಸ್ಸಾರ್ಟಿಸಿ ಬಸ್‌ಗಳಿಗೆ ನಾವು ಜಿಲ್ಲೆಯಿಂದ ಬಾಡಿಗೆ ನೀಡಿದ್ದೇವೆ. ಉಳಿದಂತೆ ಆಯಾಯ ತಾಲೂಕುಗಳಿಂದ ಬಾಡಿಗೆ ಸಂದಾಯವಾಗುತ್ತದೆ ಎಂದು ಜಿಲ್ಲಾ ಚುನಾವಣೆ ಶಾಖೆಯ ಅಧೀಕ್ಷಕ ತಿಳಿಸಿದ್ದಾರೆ.

ಉಡುಪಿಯಲ್ಲೂ 210 ವಾಹನಗಳ ಬಿಲ್‌ ಬಾಕಿ

ಜಿಲ್ಲಾಡಳಿತಕ್ಕೆ ನೀಡಿದ್ದ 80 ವಾಹನಗಳ ಬಿಲ್‌ ಪಾವತಿಯಾಗಿದೆ. ಉಳಿದ 210 ವಾಹನಗಳ ಬಿಲ್‌ ಪಾವತಿ ಬಾಕಿ ಇದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಲಾಗಿದ್ದು, ಪಾವತಿಸುವ ಭರವಸೆ ನೀಡಿದ್ದಾರೆ ಎಂದು ಉಡುಪಿ ಜಿಲ್ಲಾ ಟ್ಯಾಕ್ಸಿಮನ್‌, ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ರಮೇಶ್‌ ಕೆ. ಕೋಟ್ಯಾನ್‌ ತಿಳಿಸಿದ್ದಾರೆ.

ಕೆಲವು ತಾಲೂಕುಗಳಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ವಾಹನಗಳಿಗೆ ಬಾಡಿಗೆಗೆ ಸಂಬಂಧಿಸಿ ಸಮಸ್ಯೆ ಕಂಡುಬಂದಿದ್ದು, ಮಾಲಕರು ದೂರು ನೀಡಿದ್ದಾರೆ. ಸರಿ ಪಡಿಸುವ ಕುರಿತು ತಹಶೀಲ್ದಾರ್‌ಗಳ ಜತೆ ಮಾತುಕತೆ ನಡೆಸುತ್ತಿದ್ದು, ಪೂರ್ತಿ ಪಾವತಿಸಲು ಪ್ರಯತ್ನಿಸುತ್ತಿದ್ದೇವೆ.
– ವಿಶ್ವನಾಥ ಅಜಿಲ, ಚುನಾವಣೆ ನೋಡೆಲ್‌ ಅಧಿಕಾರಿ, ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next