Advertisement

Puttur; ಪ್ರಸಿದ್ಧ ಯಕ್ಷಗಾನ ಕಲಾವಿದ ಪೆರುವೋಡಿ ನಾರಾಯಣ ಭಟ್ ಇನ್ನಿಲ್ಲ

05:25 PM Oct 31, 2023 | Team Udayavani |

ಪುತ್ತೂರು: ಪ್ರಸಿದ್ಧ ಯಕ್ಷಗಾನ ಕಲಾವಿದ ಪುತ್ತೂರು ಬಲ್ನಾಡಿನ ನೂಜಿ ನಿವಾಸಿ ಪೆರುವೋಡಿ ನಾರಾಯಣ ಭಟ್ (96 ವ) ಮಂಗಳವಾರ (ಅಕ್ಟೋಬರ್31) ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪೆರುವೋಡಿ ನಾರಾಯಣ ಭಟ್ ಅವರು ಯಕ್ಷಗಾನದಲ್ಲಿ ಹಾಸ್ಯದ ಪಾತ್ರದಲ್ಲಿ ಅಭಿಮಾನಿಗಳ ಮನಸೆಳೆದು ಮನೆಮಾತಾಗಿದ್ದರು.

Advertisement

ಪ್ರಸಿಧ್ಧ ಧರ್ಮಸ್ಥಳ ಮೇಳವು ಸೇರಿ, ಹಲವಾರು ಮೇಳಗಳಲ್ಲಿ ಕಲಾವಿದನಾಗಿ ಪ್ರೇಕ್ಷಕರ ಮನಗೆದ್ದ ಪೆರುವೋಡಿ ನಾರಾಯಣ ಭಟ್ಟರು ‘ಪಾಪಣ್ಣ ಭಟ್ರು’ ಎಂದೇ ಖ್ಯಾತಿ ಪಡೆದವರು.

ಯಕ್ಷಗಾನದ ಹಾಸ್ಯ ಪಾತ್ರಗಳಿಗೆ ವಿಶೇಷ ಮಾನ, ಮಾನ್ಯತೆ ತಂದುಕೊಟ್ಟ ಹಾಸ್ಯಗಾರರಾಗಿರುವ ಪೆರುವೋಡಿಯವರು ‘ಪಾಪಣ್ಣ ವಿಜಯ ಗುಣಸುಂದರಿ’ ಪ್ರಸಂಗದ ‘ಪಾಪಣ್ಣ’ ಪಾತ್ರದ ವಿನ್ಯಾಸ ಹಾಗೂ ಪಾತ್ರಾಭಿವ್ಯಕ್ತಿಯ ಮೂಲಕ ತಮ್ಮ ಕಲ್ಪನಾಶಕ್ತಿಯನ್ನು ಪ್ರದರ್ಶಿಸಿ ಜನ ಮನ್ನಣೆ ಗಳಿಸಿದ್ದರು. ದಮಮಂತಿ ಪುನರ್ ಸ್ವಯಂವರ ಪ್ರಸಂಗದ ‘ಬಾಹುಕ’  ಪಾತ್ರಕ್ಕೆ ಹೊಸ ರೂಪ ನೀಡಿದವರು.

ಪೌರಾಣಿಕ ಪ್ರಸಂಗದ ಬಹುತೇಕ ಎಲ್ಲಾ ಪಾತ್ರಗಳಲ್ಲೂ ಸ್ವಂತಿಕೆಯ ಮೇಲ್ಮೆ ಅವರದಾಗಿದ್ದು, ತುಳು ಪ್ರಸಂಗಗಳಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next