Advertisement

ನವೀಕರಿಸಬಹುದಾದ ಇಂಧನ ಕ್ಷೇತ್ರ: 61,000 ಕೋ.ರೂ. ಒಡಂಬಡಿಕೆಗೆ ಸಹಿ

12:28 AM Apr 30, 2022 | Team Udayavani |

ಬೆಂಗಳೂರು: ರಾಜ್ಯದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 61,000 ಕೋಟಿ ರೂ. ಮೊತ್ತದ ಹೂಡಿಕೆಯ ಒಡಂಬಡಿಕೆಗೆ ವಿವಿಧ ಸಂಸ್ಥೆಗಳು ಸಹಿ ಹಾಕಿದ್ದು, ರಾಜ್ಯದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 12 ಸಾವಿರ ಉದ್ಯೋಗ ಸೃಷ್ಟಿಗೆ ಇದು ದಾರಿಯಾಗಲಿದೆ ಎಂದು ಇಂಧನ ಸಚಿವ ವಿ. ಸುನೀಲ್‌ ಕುಮಾರ್‌ ಅಭಿಪ್ರಾಯಪಟ್ಟರು.

Advertisement

ಹೊಸದಿಲ್ಲಿ ನಡೆಯುತ್ತಿರುವ ವಿಂಡರ್ಜಿ 2022 ಸಮ್ಮೇಳನದಲ್ಲಿ, ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹಲವಾರು ಹೂಡಿಕೆದಾರರು 61,000 ಕೋಟಿ ರೂ. ಮೊತ್ತದ ಎಕ್ಸ್ ಪ್ರಶನ್‌ ಆಫ್ ಇಂಟರೆಸ್ಟ್ ಗೆ ಸಹಿ ಹಾಕಿ ಮಾತನಾಡಿದ ಅವರು, ರಾಜ್ಯ ಇಂಧನ ಇಲಾಖೆ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು ಕೊಪ್ಪಳ, ಗದಗ, ದಾವಣಗೆರೆ, ಚಿತ್ರದುರ್ಗ, ವಿಜಯನಗರ, ತುಮಕೂರು, ಬಾಗಲಕೋಟೆ ಭಾಗದಲ್ಲಿ ಉದ್ಯೋಗ ಸೃಜನೆಯಾಗಲಿದೆ ಹಾಗೂ 9,218 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗಲಿದೆ. ರಿನ್ಯೂ, ಟೊರೆಂಟ್‌, ಇಡಿಎಫ್ ರಿನ್ಯೂಬಲ್‌ನಂತಹ ಖ್ಯಾತ ಕಂಪೆನಿಗಳು ಎಕ್ಸ್ ಪ್ರಶನ್‌ ಆಫ್ ಇಂಟರೆಸ್ಟ್ ಗೆ ಸಹಿ ಮಾಡಿವೆ ಎಂದು ಹೇಳಿದರು.

ಇಂಡಿಯನ್‌ ವಿಂಡ್‌ ಟರ್ಬೈನ್‌, ಮ್ಯಾನ್ಯುಫಾಕ್ಚರರ್ಸ್‌ ಅಸೋಸಿಯೇಶನ್‌ ಮತ್ತು ಪಿಡಿಎ ಟ್ರೇಡ್‌ ಫೇರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮೂರು ದಿನಗಳ ಸಮ್ಮೇಳನ ವಿಂಡರ್ಜಿ- 2022 ಅನ್ನು ಆಯೋಜಿಸಿದೆ. ಇದರಲ್ಲಿ ಭಾರತ ಕ್ಲೀನ್‌ ಎನರ್ಜಿ ಕಡೆಗೆ ಇಡುತ್ತಿರುವ ಹೆಜ್ಜೆಗಳು, ಭಾರತದಲ್ಲಿ ಇರುವ ಅವಕಾಶಗಳು, ತಾಂತ್ರಿಕತೆಯ ಅಭಿವೃದ್ಧಿ ಮತ್ತು ಆವಿಷ್ಕಾರ, ಪವನ ಶಕ್ತಿ ಉತ್ಪಾದನೆಯಲ್ಲಿ ಇರುವ ತೊಡಕುಗಳು ಸಹಿತ ಅನೇಕ ವಿಷಯಗಳ ಬಗ್ಗೆ ಚರ್ಚೆ ಹಾಗೂ ವಿಚಾರ ವಿನಿಮಯ ನಡೆಯಲಿದೆ ಎಂದು ತಿಳಿಸಿದರು.

ಕರ್ನಾಟಕ ಸರಕಾರದ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯಕ ಅವರು, ನವೀಕರಿಸಬಹುದಾದ ಇಂಧನ ವಲಯದಲ್ಲಿ ಹಾಗೂ ನವೀಕರಿಸಬಹುದಾದ ಇಂಧನಗಳ ಯೋಜನೆಗಳಲ್ಲಿ ಹೂಡಿಕೆ ಹಾಗೂ ರಾಜ್ಯದ ಸಾಧನೆ ಬಗ್ಗೆ ವಿವರಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next