Advertisement
ಆದರೆ, ಮನೆಯಲ್ಲಿ ಜನರ ಸಂಖ್ಯೆ ಹೆಚ್ಚಾದಾಗ ಅಥವಾ ಸ್ವಂತ ಊರಿಗೆ ಹೋಗಿ, ಬೆಂಗಳೂರಂಥ ಊರಿಗೆ ವಾಪಸ್ ಬರುವಾಗ, ಬೇಡವೆಂದರೂ ಲಗೇಜ್ ಹೆಚ್ಚಾಗುತ್ತದೆ. ಇಂಥ ಸಂದರ್ಭಕ್ಕೆ ಹೊಂದುವಂಥ ಟ್ರೈಬರ್ ಎಂಬ ಏಳು ಸೀಟಿನ ಕಾರೊಂದನ್ನು ರೆನಾಲ್ಟ್ ಸಂಸ್ಥೆ ಬಿಡುಗಡೆ ಮಾಡಿದೆ. ನೋಡಿದರೆ ಮಾರುತಿ ವಿಟಾರಾ ಬ್ರೆಝಾ ಸೈಜಿನಷ್ಟೇ ಕಾಣಿಸುತ್ತದೆಯಾದರೂ, ಇದನ್ನು ಎಸ್‌ಯುವಿ ಎಂದು ಕರೆಯುವುದು ಕಷ್ಟ. ಏಕೆಂದರೆ, ಈ ಕಾರಿನ ಸಾಮರ್ಥ್ಯ ಕಡಿಮೆ. ಹೀಗಾಗಿ ಕ್ರಾಸ್ ಓವರ್ ಎಂದು ಕರೆದುಕೊಂಡು ಒಂದು ಫ್ಯಾಮಿಲಿ ಕಾರು ಎಂದು ಕರೆಯಬಹುದು.
ಸದ್ಯ ಏಳು ಸೀಟಿನ ಕಾರುಗಳ ವಿಚಾರದಲ್ಲಿ, ಮಾರುಕಟ್ಟೆಯಲ್ಲಿ ಸದ್ದು ಮಾಡಿರುವುದು ಮಾರುತಿ ಸಂಸ್ಥೆಯ ಎರ್ಟಿಗಾ. ಆದರೆ, ಹ್ಯಾಚ್‌ಬ್ಯಾಕ್ ಕಾರುಗಳ ಖರೀದಿ ಮಾಡುವ ಮನಸ್ಸಿರುವ ಮಂದಿಗೆ ಇದು ಕೊಂಚ ದುಬಾರಿ. ರೆನಾಲ್ಟ್ ಈ ದುಬಾರಿತನವನ್ನೇ ಮನಸ್ಸಿನಲ್ಲಿ ಇರಿಸಿಕೊಂಡು ಈ ಕಾರು ರೂಪಿಸಿದೆ. ಮೊದಲ ಸಾಲಿನಲ್ಲಿ ಡ್ರೈವರ್ ಮತ್ತು ಆತನ ಪಕ್ಕದ ಒಂದು ಸೀಟು, ಮಧ್ಯದಲ್ಲಿ ಯಥಾಪ್ರಕಾರ ಮೂವರು ಹಾಗೂ ಹಿಂದೆ ಇಬ್ಬರು ಕುಳಿತುಕೊಂಡು ಪ್ರಯಾಣಿಸಬಹುದು. ಆದರೆ, ಏಳು ಜನರೇ ಪ್ರಯಾಣಿಸಬೇಕು ಎಂದಾದಲ್ಲಿ ಹೆಚ್ಚು ಲಗೇಜ್ ತುಂಬಲು ಆಗುವುದಿಲ್ಲ ಎಂಬುದು ಒಂದು ಸೆಟ್‌ಬ್ಯಾಕ್. ಇದಕ್ಕೆ ಕಾರಣ, ಈ ಕಾರಿನ ಬೂಟ್ ಸೈಜ್(ಡಿಕ್ಕಿ) ಕೇವಲ 84 ಲೀ. ಅಷ್ಟೇ. ಆದರೆ ಹಿಂದಿನ ಎರಡು ಸೀಟುಗಳನ್ನು ಮಡಚಿಟ್ಟರೆ 320 ಲೀ.ಗೆ ಹಿಗ್ಗಿಸಿಕೊಳ್ಳುವ ಅವಕಾಶವಿದೆ. ಸುರಕ್ಷತಾ ಸೌಲಭ್ಯಗಳು
ಹೊರಗಿನಿಂದ ಈ ಕಾರನ್ನು ನೋಡುವುದಾದರೆ ದೊಡ್ಡದಾಗಿ ಕಾಣಿಸುತ್ತದೆ. ಹಾಗೆಯೇ ಒಳಗಿನ ವಿನ್ಯಾಸವೂ ಚೆನ್ನಾಗಿಯೇ ಇದೆ. 8 ಇಂಚಿನ ಟಚ್‌ಸ್ಕ್ರೀನ್ ಮ್ಯೂಸಿಕ್ ಸಿಸ್ಟಮ್, ರೇರ್ ಮತ್ತು ಪಾರ್ಕಿಂಗ್ ಸೆನ್ಸಾರ್ ಕ್ಯಾಮೆರಾ, ನಾಲ್ಕು ಏರ್ ಬ್ಯಾಗ್, ಎಬಿಎಸ್ ಸೇರಿದಂತೆ ಸುರಕ್ಷತಾ ಕ್ರಮಗಳೂ ಇವೆ. ಇದರಲ್ಲಿ ಕೆಲವು ಸವಲತ್ತುಗಳು ಹೈಯರ್ ಎಂಡ್‌ನ ಮಾಡೆಲ್‌ನಲ್ಲಿ ಮಾತ್ರ ಕಾಣಸಿಗಬಹುದು. ಎಂಜಿನ್ ಸಾಮರ್ಥ್ಯವನ್ನು ಇನ್ನಷುc ಹೆಚ್ಚಿಸಬಹುದಿತ್ತು ಎಂಬುದು ಆಟೋಮೊಬೈಲ್ ತಜ್ಞರ ವಾದ. ಮುಂದಿನ ವರ್ಷಾರಂಭದಲ್ಲಿ ಆಟೋಮ್ಯಾಟಿಕ್ ವರ್ಷನ್ ಬರಬಹುದು. ಆಗ ಸಾಮರ್ಥ್ಯ ಕೊಂಚ ಹೆಚ್ಚಬಹುದು ಎಂಬ ಮಾತುಗಳೂ ಇವೆ.
Related Articles
40 ಲೀ.- ಇಂಧನ ಟ್ಯಾಂಕ್
84 ಲೀ.- ಬೂಟ್ ಸೈಜ್(ಡಿಕ್ಕಿ)
5- ಗೇರ್
20 ಕಿ.ಮೀ- ಮೈಲೇಜ್
4.5- 6.49 ಲಕ್ಷ (ದೆಹಲಿ ಎಕ್ಸ್ ಶೋ ರೂಂ ಬೆಲೆ)
Advertisement
ರೆನಾಲ್ಟ್ ಕ್ವಿಡ್, ಡಸ್ಟನ್ ಗೋಗೆ ಹೊಸ ಪ್ರತಿಸ್ಪರ್ಧಿಈ ತಿಂಗಳ ಕೊನೆಗೆ. ಮಾರುತಿ ಸುಜುಕಿ ಹೊಸ ಕಾರೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದರ ಹೆಸರು ಮಾರುತಿ ಸುಜುಕಿ ಎಸ್-ಪ್ರೆಸ್ಸೊ. ವಿಶೇಷವೆಂದರೆ, ಕಳೆದ ವರ್ಷದ ಆಟೋ ಎಕ್ಸ್ ಪೋದಲ್ಲೇ ಈ ಕಾರು ಪ್ರದರ್ಶನಗೊಂಡಿದ್ದರೂ, ಇದುವರೆಗೆ ಲಾಂಚಿಂಗ್ ಬಗ್ಗೆ ಏನನ್ನೂ ಹೇಳಿರಲಿಲ್ಲ. ಇದೀಗ ಮಾರುತಿ ವಿಟಾರಾ ಬ್ರೆಝಾ ಅನ್ನೇ ಮಾದರಿಯಾಗಿಟ್ಟುಕೊಂಡು, ಮಾರುತಿ ಸಂಸ್ಥೆ ಹೊಸ ಹ್ಯಾಚ್‌ಬ್ಯಾಕ್ ಕಾರೊಂದನ್ನು ಸೃಷ್ಟಿಸಿದೆ. ನೋಡಲು ಎಸ್‌ಯುವಿ ಥರವಿದ್ದರೂ ಇದು ಎಸ್‌ಯುವಿ ಅಲ್ಲ. ಸಂಸ್ಥೆಯವರ ಪ್ರಕಾರ, ಇದು ಫ್ಯೂಚರ್-ಎಸ್ ರೀತಿಯ ಕಾರು. 1 ಲೀ. ಎಂಜಿನ್, 3 ಸಿಲಿಂಡರ್ ಮೋಟಾರು ಅನ್ನು ಒಳಗೊಂಡಿರುವ ಇದು, ಸಾಮರ್ಥ್ಯದ ದೃಷ್ಟಿಯಿಂದ ಯಾರಿಗೇನೂ ಕಡಿಮೆ ಇಲ್ಲ ಎಂಬಂತಿದೆ. ಇದರ ದರ 4.5- 5 ಲಕ್ಷದ ಆಸುಪಾಸಿನಲ್ಲಿರುತ್ತದೆ ಎಂದು ಹೇಳಲಾಗುತ್ತಿದೆ. ಇದು, ಎಕ್ಸ್ ಶೋ ರೂಮ್ ಬೆಲೆ. ಈ ಕಾರು ಬರಲಿದೆ ಎಂಬ ಕಾರಣಕ್ಕಾಗಿ ಈಗಾಗಲೇ ಮಾರುಕಟ್ಟೆಯಲ್ಲಿರುವ, ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಆಗಿರುವ ಆಲ್ಟೋ ಕೆ 10ರ ಪರ್ಯಾಯವಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. -ಸೋಮಶೇಖರ ಸಿ.ಜೆ.