Advertisement

ರೆನಾಲ್ಟ್ನಿಂದ ಭಾರತದಲ್ಲಿ ಐದು  ಲಕ್ಷ  ಕಾರು ಮಾರಾಟ

09:58 AM Dec 26, 2018 | Team Udayavani |

ಮಡ್ಗಾಂವ್‌: ಭಾರತೀಯ ಕಾರು ಮಾರುಕಟ್ಟೆಯಲ್ಲಿ 5 ಲಕ್ಷ ಕಾರು ಮಾರಾಟ ಮಾಡಿದ ಸಂಭ್ರಮವನ್ನು ಪ್ರಸಿದ್ಧ ಕಾರು ತಯಾರಿಕಾ ಕಂಪೆನಿ ರೆನಾಲ್ಟ್ ಆಚರಿಸಿಕೊಂಡಿದೆ

Advertisement

ಇದರಂಗವಾಗಿ ಕಾರು ಕಂಪೆನಿ ಡಿಸೆಂಬರ್‌ ಸಂಭ್ರಮಾಚರಣೆಯೊಂದಿಗೆ ಆಕರ್ಷಕ ಕೊಡುಗೆ ಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಗ್ರಾಹಕರಿಗೆ ಶೂನ್ಯ ಬಡ್ಡಿದರದ ಸಾಲ ಸೌಲಭ್ಯವನ್ನೂ ಇದು ಒಳಗೊಂಡಿದೆ. ವಿಶ್ವದ ಪ್ರತಿಷ್ಠಿತ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಫ್ರಾನ್ಸ್‌ನ ರೆನಾಲ್ಟ್ ಎಸ್‌ಎಎಸ್‌ನ ಭಾಗವಾಗಿ ರೆನಾಲ್ಟ್ ಇಂಡಿಯಾ ಇದ್ದು ಭಾರತದಲ್ಲೇ 2 ವಿನ್ಯಾಸ ಕೇಂದ್ರಗಳನ್ನು ಹೊಂದಿದ್ದು, ಇಲ್ಲಿನ ಮಾರುಕಟ್ಟೆಯ ಅಗತ್ಯ ಗಳಿಗೆ ಬೇಕಾದಂತೆ ಕಾರುಗಳನ್ನು ತಯಾ ರಿಸುತ್ತಿದೆ. ಸದ್ಯ ರೆನಾಲ್ಟ್ ಕಂಪೆನಿಯ ಕ್ವಿಡ್‌ ಅತ್ಯಧಿಕ ಮಾರಾಟವಾಗುವ ಮಾದರಿಯಾಗಿದ್ದು, ದೇಶದಲ್ಲಿ 2.75 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪೆನಿ ಹೇಳಿದೆ. ಇದರೊಂದಿಗೆ 2018 ಆವೃತ್ತಿಯ ಹೊಸ ಫೀಚರ್‌ಗಳುಳ್ಳ ಕ್ವಿಡ್‌ ಫೀಚರ್‌ ಲೋಡೆಡ್‌ ಶ್ರೇಣಿಯನ್ನು ಬಿಡುಗಡೆ ಮಾಡ ಲಾಗಿದೆ. ಜತೆಗೆ 5 ಲಕ್ಷ ಮಾರಾಟದ ಮೈಲುಗಲ್ಲಿನ ಭಾಗವಾಗಿ ಡಸ್ಟರ್‌ ಕಾರಿನ ಮಾದರಿಯಲ್ಲಿ ಪೆಟ್ರೋಲ್‌ ಆರ್‌ಎಕ್ಸ್‌ಎಸ್‌ ಮತ್ತು ಎಎಂಟಿ ಡೀಸೆಲ್‌ ಆರ್‌ಎಸ್‌ಎಸ್‌ ಎಂಬ ಹೊಸ ಮಾದರಿ ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಡೀಸೆಲ್‌ 85 ಮತ್ತು 110 ಅಶ್ವಶಕ್ತಿಯ ಎರಡು ಎಂಜಿನ್‌ ಮಾದರಿಯಲ್ಲಿ ಲಭ್ಯ. ರೆನಾಲ್ಟ್ ಕ್ಯಾಪ್ಟರ್‌ ಕೂಡ ಆಕರ್ಷಕ ಕೊಡುಗೆಗಳೊಂದಿಗೆ ಲಭ್ಯವಿದೆ. . 

ದೇಶದಲ್ಲಿ 350 ಮಾರಾಟ ಕೇಂದ್ರಗಳನ್ನು ರೆನಾಲ್ಟ್ ಹೊಂದಿದೆ. ಗ್ರಾಹಕ ಸ್ನೇಹಿಕ್ರಮಗಳ ಅಂಗವಾಗಿ ರೆನಾಲ್ಟ್ ಸೆಕ್ಯೂರ್‌, ರೆನಾಲ್ಟ್ ಅಶ್ಯೂರ್‌x, ರೆನಾಲ್ಟ್ ಅಸಿಸ್ಟ್‌, ವರ್ಕ್‌ಶಾಪ್‌ ಆನ್‌ ವೀಲ್ಸ್‌ ಮತ್ತು ಗ್ರಾಹಕ ಶಿಬಿರಗಳ ಮೂಲಕ ನಿರಂತರ ಸೇವೆ ನೀಡಲಾಗುತ್ತಿದೆ ಎಂದು ಕಂಪೆನಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next