ಬಹುದಿನಗಳಿಂದ ಕಾಯುತ್ತಿದ್ದ ಎಸ್‌ಯುವಿ ರಿನಾಲ್ಟ್ ಕಿಗರ್ ಮಾರುಕಟ್ಟೆ ಪ್ರವೇಶಿಸಿದೆ. ಫೆ.15ರಂದು ಭಾರತದಲ್ಲಿ ಈ ಕಾರು ಲಾಂಚ್ ಆಗಿದ್ದು, ಬುಕ್ಕಿಂಗ್ ಕೂಡ ಶುರುವಾಗಿದೆ. 11 ಸಾವಿರ ರೂ. ಕಟ್ಟಿ ಕಾರು ಶೋರೂಂನಲ್ಲಿ ಅಥವಾ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ನಿಸಾನ್ ಕಂಪನಿಯ ಸಿಎಂಎಫ್-ಎ+ ತಂತ್ರಜ್ಞಾನದಡಿಯಲ್ಲಿ ಈ ಕಾರನ್ನುಸಿದ್ಧಪಡಿಸಲಾಗಿದೆ. ಇದು 3,991 ಎಂಎಂ ಉದ್ದ, 1,750ಎಂಎಂ ಅಗಲ ಮತ್ತು 1,605ಎಂಎಂ ಎತ್ತರವಿದೆ. 2,500ಎಂಎಂ ವೀಲ್‌ಬೇಸ್ ಹೊಂದಿದೆ. 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಇದ್ದು, 405 ಲೀ. ಬೂಟ್ ಸ್ಪೇಸ್ ಇದೆ. ಇದು ಒಂದು ಲೀಟರ್ ಪೆಟ್ರೋಲ್ ಸಾಮರ್ಥ್ಯದ ಎಂಜಿನ್ ಒಳಗೊಂಡಿದ್ದು, ಮೂರು ಸಿಲಿಂಡರ್‌ಗಳಿವೆ.
ಹೀಗಾಗಿ, 72 ಪಿಎಸ್ 6,250 ಆರ್ ಪಿಎಂನಲ್ಲಿ ಸಿಗಲಿದೆ. ಹಾಗೆಯೇ, 96 ಎನ್‌ಎಂ 3,500 ಆರ್ ಪಿಎಂನಲ್ಲಿ ದೊರೆಯಲಿದೆ. ಇದರಲ್ಲಿ ಐದು ಗೇರ್ ಗಳಿದ್ದು, ಆಟೋಮ್ಯಾಟಿಕ್ ಕೂಡ ಲಭ್ಯವಿದೆ. ಕಿಗರ್ ನಾಲ್ಕು ವೇರಿಯಂಟ್‌ಗಳಲ್ಲಿ ಸಿಗಲಿದೆ. ಇದರಲ್ಲಿ ಗೇರ್ ಬಾಕ್ಸ್ ಮತ್ತು ಎಂಜಿನ್ ಸಾಮರ್ಥ್ಯದಲ್ಲಿಬದಲಾವಣೆಗಳಿವೆ. ಅಂದರೆದರಕ್ಕೆ ತಕ್ಕ ಹಾಗೆ ಫೀಚರ್ ಕೂಡ ಬದಲಾಗಲಿದೆ. ಇದು ಕೇವಲ ಪೆಟ್ರೋಲ್ ಕಾರು.
ಆರ್ ಎಕ್ಸ್ ಝಡ್ ಫುಲ್ ಟಾಪ್ ಎಂಡ್ ಆಗಿದ್ದು, ಇದರಲ್ಲಿ ಎಲ್ಲಾ ಫೀಚರ್‌ಗಳು ಸಿಗಲಿವೆ. 7 ಇಂಚಿನ ಡಿಜಿಟಲ್ ಇನ್ಫೋಟೈನ್ ಮೆಂಟ್ ಜತೆಗೆ 8 ಸ್ಪೀಕರ್‌ಗಳು, ವಯರ್ ಲೆಸ್ ಆ್ಯಂಡ್ರಾಯ್ಡ ಆಟೋ/ ಆ್ಯಪಲ್ ಕಾರ್ ಪ್ಲೇ ರೋಟರಿ ಕಂಟ್ರೋಲರ್ ಜತೆಗೆ ಡ್ರೈವ್ ಮೋಡ್, ಆಟೋ ಎಸಿ ಕಂಟ್ರೋಲ್, ಇಂಟೀರಿಯರ್ ಆ್ಯಂಬಿಯಂಟ್ ಲೈಟಿಂಗ್ ಫೀಚರ್ ಗಳಿವೆ.ಇದು ಆರು ಬಣ್ಣಗಳಲ್ಲಿ ಸಿಗಲಿದೆ. ಅಂದರೆ, ಐಸ್ ಕೂಲ್ ವೈಟ್, ಪ್ಲಾನೆಟ್ ಗ್ರೇ, ಮೂನ್‌ಲೈಟ್ ಗ್ರೇ, ಮಹಾಗೋನಿ ಬ್ರೌನ್, ಕಾಸ್ಪಿಯನ್ ಬ್ಲೂ ಮತ್ತು ರೇಡಿಯಂಟ್ ರೆಡ್‌ನಲ್ಲಿ ಲಭ್ಯವಿದೆ.
ನಾಲ್ಕು ವೇರಿಯಂಟ್ :
- ರಿನಾಲ್ಟ್ ಕಿಗರ್ ಆರ್ ಎಕ್ಸ್ ಇ – 5.45 ಲಕ್ಷದಿಂದ ಬೆಲೆ ಆರಂಭ
- ರಿನಾಲ್ಟ್ ಕಿಗರ್ ಆರ್ ಎಕ್ಸ್ ಎಲ್ – 6.14 ಲಕ್ಷದಿಂದ ಬೆಲೆ ಆರಂಭ
- ರಿನಾಲ್ಟ್ ಕಿಗರ್ ಆರ್ ಎಕ್ಸ್ ಟಿ- 6.60 ಲಕ್ಷ ದಿಂದ ಬೆಲೆ ಆರಂಭ
- ರಿನಾಲ್ಟ್ ಕಿಗರ್ ಆರ್ ಎಕ್ಸ್ ಝಡ್ – 7.55 ಲಕ್ಷದೊಂದಿಗೆ ಬೆಲೆ ಆರಂಭ
-ಸೋಮಶೇಖರ ಸಿ.ಜೆ.