Advertisement

ಭಾರತದಲ್ಲಿ ಸಂಚಲನ ಸೃಷ್ಟಿಸಲು ಬರುತ್ತಿದೆ Renault Kiger: ಬಿಡುಗಡೆ ದಿನಾಂಕ ಪ್ರಕಟ

05:47 PM Jan 05, 2021 | Team Udayavani |

ನವದೆಹಲಿ: ಭಾರತದಲ್ಲಿ ಈಗಾಗಲೇ ಹಲವು ಮೈಲಿಗಲ್ಲು ಸ್ಥಾಪಿಸಿರುವ ರೆನಾಲ್ಟ್  ತನ್ನ ನೂತನ Renault Kiger SUV  ಕಾರನ್ನು ಬಿಡುಗಡೆಗೊಳಿಸುವ ದಿನಾಂಕ ಪ್ರಕಟಿಸಿದೆ. ಗಮನಾರ್ಹ ಸಂಗತಿಯೆಂದರೇ ಈ ಕಾರು ಜನವರಿ 28ರಂದು ಭಾರತದಲ್ಲೇ  ಅನಾವರಣಗೊಳ್ಳುವ ಮೂಲಕ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

Advertisement

ರೆನಾಲ್ಟ್ ಸಂಸ್ಥೆಯೂ ತನ್ನ CMFA+  (Common Module Family ) ಫ್ಲ್ಯಾಟ್ ಫಾರ್ಮ್ ಮೂಲಕ ಈ ಕಾರನ್ನು ಅಭಿವೃದ್ಧಿಪಡಿಸಿದ್ದು, ಇದು ಇತರ ಎಸ್ ಯುವಿ ಗಳಾದ ಹೂಂಡೈ ವೆನ್ಯೂ, ಕಿಯಾ ಸೊನೆಟ್, ಮಾರುತಿ ಸುಜುಕಿ ವಿಟಾರಾ ಬ್ರೇಜಾ ಮುಂತಾದ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.

Renault Kiger ಈಗಾಗಲೇ ತನ್ನ ವಿಶಿಷ್ಟ ವಿನ್ಯಾಸದಿಂದ ಗಮನಸೆಳೆದಿದೆ. ಮಾತ್ರವಲ್ಲದೆ ಅತ್ಯಾಧುನಿಕವಾಗಿದ್ದು ಹಲವಾರು ವಿಶೇಷ ಗುಣಲಕ್ಷಣಗಳನ್ನು ಮತ್ತು ಫೀಚರ್ ಗಳನ್ನು ಒಳಗೊಂಡಿದೆ. ಇದರಲ್ಲಿ ಕಾರಿನ ವಿನ್ಯಾಸ ಹಾಗೂ ಶೈಲಿಗೆ ಪೂರಕವಾಗಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಲಾಗಿದೆ. Renault Kiger ಹೊಸ ಟರ್ಬೊ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಅತ್ಯಾಕರ್ಷಕ ಡ್ರೈವ್ ಅನುಭವವನ್ನು ನೀಡುತ್ತದೆ ಎಂದು ಕಂಪನಿಯು ಇತ್ತೀಚಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲಿದೆ ಮಾರುತಿ ಸುಜುಕಿ 800 ಸಿಸಿ ಕಾರು

Advertisement

ಕಿಯಾ ಸೊನೆಟ್ ನ ಪ್ರಮುಖ ಪ್ರತಿಸ್ಪರ್ಧಿಯಾಗಿರುವ Renault Kiger  HRAO 1.0 ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಹೊಂದಿದ್ದು, ಹೊಸ ನಿಸ್ಸಾನ್ ಮ್ಯಾಗ್ ನೈಟ್ ನಲ್ಲೂ ಇದೇ ಮಾದರಿಯ ಫೀಚರ್ ಕಾಣಬಹುದು. ಈ ಇಂಜಿನ್ 99 ಬಿಎಚ್ ಪಿ ಮತ್ತು 160 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಜೊತೆಗೆ ಮ್ಯಾನುವಲ್ ಗೇರ್ ಬಾಕ್ಸ್ ಅಳವಡಿಸಲಾಗಿದ್ದು, ಸಿವಿಟಿ ಆಟೋ ಆಯ್ಕೆಯನ್ನು ಕೂಡ ನೀಡಲಾಗಿದೆ.

ರೆನಾಲ್ಟ್ ಸಂಸ್ಥೆಯೂ ಮುಂದಿನ  Kiger SUV  ಸಹಾಯದಿಂದ ಭಾರತದಲ್ಲಿ ಒಂದು ಮಿಲಿಯನ್ ಕಾರು ಮಾರಾಟ ಮಾಡುವ ಯೋಜನೆ ರೂಪಿಸಿದೆ. ಭಾರತದಲ್ಲಿ ರೆನಾಲ್ಟ್ ಸಂಸ್ಥೆಗೆ ಪ್ರಸ್ತುತ 6.5 ಲಕ್ಷ ಗ್ರಾಹಕರಿದ್ದಾರೆ. ಈಗಾಗಲೇ ರೆನಾಲ್ಟ್ ಸಂಸ್ಥೆಯೂ ತನ್ನ ಕ್ವಿಡ್, ಟ್ರೈಬರ್, ಡಸ್ಟರ್ ಕಾರುಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

ಇದನ್ನೂ ಓದಿ:  ಟೆಸ್ಲಾ ಕುತೂಹಲ : ಈ ಕಾರ್‌ನ ಬೆಲೆ 60 ಲಕ್ಷ

Advertisement

Udayavani is now on Telegram. Click here to join our channel and stay updated with the latest news.

Next