Advertisement

ಎರಡು ಕಾರು, ನೂರು ಕನಸು

07:51 PM Aug 24, 2020 | Suhan S |

ಇನ್ನೂ ದಾರಿಗಿಳಿಯದ ಕಾರು… ಇನ್ನೊಂದು ಈಗಷ್ಟೇ ರೋಡಿನಲ್ಲಿ ಧೂಳೆಬ್ಬಿಸುತ್ತಿರುವ ಕಾರು… ಕಿಯಾ ಸೋನೆಟ್‌ ಮತ್ತು ರಿನಾಲ್ಟ್ ಡಸ್ಟರ್‌ ಟರ್ಬೋ ಇವೆರಡರ ವಿಶೇಷತೆಗಳೇನು?

Advertisement

1. ಸೋನೆಟ್‌ಗೆ ದಿನಗಣನೆ ಬಹು ನಿರೀಕ್ಷಿತ ಕಿಯಾ ಸೋನೆಟ್‌ ಕಾರು ಬಿಡುಗಡೆಗೆ ಸಿದ್ಧವಾಗಿದ್ದು, ಆಗಲೇ ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸುತ್ತಿದೆ. ಸೆಪ್ಟೆಂಬರ್‌ನಲ್ಲಿ ಈ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಈಗಾಗಲೇ ಕಾರಿನ ವಿಶೇಷಣಗಳು ಬಹಿರಂಗವಾಗಿದ್ದು, ಕಾರಿನ ಆನ್‌ ಲೈನ್‌ ಬುಕಿಂಗ್‌ ಕೂಡ ಆರಂಭವಾಗಿದೆ. 25 ಸಾವಿರ ರೂ. ಪಾವತಿಸಿ, ಈ ಕಾರನ್ನು ಆನ್‌ಲೈನ್‌ ನಲ್ಲೇ ಬುಕ್‌ ಮಾಡಬಹುದಾಗಿದೆ.

ಕಿಯಾ ಸೋನೆಟ್‌ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದ್ದು, ಹುಂಡೈ ವೆನ್ಯು, ವಿಟಾರಾ ಬ್ರೀಝಾ, ನೆಕ್ಸೋನ್‌, ಎಕೋನ್ಪೋರ್ಟ್‌ಗೆ ಸ್ಪರ್ಧೆ ನೀಡಬಲ್ಲದ್ದಾಗಿದೆ. ವಿಶೇಷವೆಂದರೆ, ಆಗಸ್ಟ್‌ 7ರಂದೇ ಈ ಕಾರು ಜಾಗತಿಕವಾಗಿ ಮಾರುಕಟ್ಟೆಗೆ ಪ್ರವೇಶ ಮಾಡಿಯಾಗಿದೆ. ಆದರೆ ಭಾರತದಲ್ಲಿ ಮಾತ್ರ ಸೆಪ್ಟೆಂಬರ್‌ ನಲ್ಲಿ ಬಿಡುಗಡೆಯಾಗಲಿದೆ. ಜಾಗತಿಕವಾಗಿ ಬಿಡುಗಡೆಯಾದರೂ, ಕಾರುಗಳು ಮೊದಲು ಸಿಗುವುದು ಭಾರತದ ಮಾರುಕಟ್ಟೆಗೇ. ಅಲ್ಲದೇ 70ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಈ ಕಾರು ಭಾರತದಿಂದಲೇ ರಫ್ತಾಗಲಿದೆ ಎಂಬುದು ವಿಶೇಷ. ದೆಹಲಿಯ ಎಕ್ಸ್‌ ಶೋ ರೂಂನಲ್ಲಿ ಈ ಕಾರಿನ ಬೆಲೆ 8 ಲಕ್ಷದಿಂದ ಆರಂಭವಾಗಿ 13 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.

ಈ ಕಾರು ಟೆಕ್‌ ಲೈನ್‌ ಮತ್ತು ಜಿಟಿ ಲೈನ್‌ ಎಂಬ ವೇರಿಯಂಟ್‌ನಲ್ಲಿ ಸಿಗಲಿದೆ. ಇದು ನೋಡಲು ಒಂದು ರೀತಿ ನ್ಪೋರ್ಟಿ ಲುಕ್‌ ನಂತೆ ಇದೆ. ಇದರ ಮುಂಭಾಗ ಹುಲಿಯ ಮುಖವನ್ನು ಹೋಲುವಂತಿದೆ. ಎಲ್‌ಇಡಿ ಹೆಡ್‌ಲ್ಯಾಂಪ್‌ಗ್ಳು ಮತ್ತು ಎಲ್‌ಇಡಿ ಡಿಆರ್‌ ಎಲ್‌ಗ‌ಳು ಈ ಕಾರ್‌ನ ಸೊಬಗನ್ನು ಇನ್ನಷ್ಟು ಹೆಚ್ಚಿಸಿವೆ. ಮತ್ತೂಂದು ವಿಶೇಷವೆಂದರೆ, ಇದರಲ್ಲಿ 10.25 ಇಂಚಿನ ಎಚ್‌ಡಿ ಟಚ್‌ ಸ್ಕ್ರೀನ್‌ ಸಿಸ್ಟಮ್‌ ಇದೆ. ಇದು ಆ್ಯಪಲ್‌ ಕಾರ್‌ ಪ್ಲೇ ಮತ್ತು ಆ್ಯಂಡ್ರಾಯ್ಡ ಆಟೋಗೆ ಸಪೋರ್ಟ್‌ ಮಾಡುತ್ತದೆ.

ಅಂದಹಾಗೆ, ಇದು ಮೂರು ರೀತಿ ಎಂಜಿನ್‌ ವೇರಿಯಂಟ್‌ನಲ್ಲಿ ಸಿಗಲಿದೆ. 1.2 ಲೀಟರ್‌ ಪೆಟ್ರೋಲ್, 1.0 ಲೀ. ಟಿ- ಜಿಡಿಐ ಪೆಟ್ರೋಲ್‌ ಮತ್ತು 1.5 ಲೀ. ಸಿಆರ್‌ಡಿಐ ಡೀಸೆಲ್‌ ಪವರ್‌ ಟ್ರೈನ್‌ ಎಂಜಿನ್‌ ಸಾಮರ್ಥ್ಯದ ಕಾರುಗಳು ಸಿಗಲಿವೆ.

Advertisement

 2 . ರಿನಾಲ್ಟ್ ಡಸ್ಟರ್‌ ಟರ್ಬೋ ಲಾಂಚ್‌ : ಫೇಸ್‌ ಲಿಫ್ಟ್ ಕಾರು ರಿನಾಲ್ಟ್ ಡಸ್ಟರ್‌ ಟರ್ಬೋ ಪೆಟ್ರೋಲ್‌ 1.3 ಲೀ. ಎಂಜಿನ್‌ ಸಾಮರ್ಥ್ಯದ ಕಾರು ಲಾಂಚ್‌ ಆಗಿದೆ. ಈಗಾಗಲೇ ಎಸ್‌ಯುವಿ ಮಾರುಕಟ್ಟೆಯಲ್ಲಿ ಹವಾ ಮೂಡಿಸಿರುವ ರಿನಾಲ್ಟ್ ಡಸ್ಟರ್‌, ಈಗ ಫೇಸ್‌ ಲಿಫ್ಟ್ ರೂಪದಲ್ಲಿ ಹೊರಬಂದಿದೆ. ಅಷ್ಟೇ ಅಲ್ಲ, 1.5 ಲೀ. ಎಂಜಿನ್‌ ಸಾಮರ್ಥ್ಯದ ಕಾರೂ ಬಿಡುಗಡೆಯಾಗಿದೆ. 1.3 ಲೀ. ವೇರಿಯಂಟ್‌ನಲ್ಲಿ 6 ಸ್ಪೀಡ್‌ ಮ್ಯಾನ್ಯುವಲ್‌ ಯೂನಿಟ್‌ ಇದ್ದರೆ, 1.5 ಲೀ. ಎಂಜಿನ್‌ ಸಾಮರ್ಥ್ಯದ ಕಾರಿನಲ್ಲಿ ಸಿವಿಟಿ ಯೂನಿಟ್‌ ಜತೆಗೆ ಸೆವೆನ್‌ ಸ್ಪೀಡ್‌ ಮ್ಯಾನ್ಯೂವಲ್‌ ಮೋಡ್‌ ಲಭ್ಯವಿದೆ. ಇದು ಕ್ರಮವಾಗಿ ಪ್ರತಿ ಲೀಟರ್‌ಗೆ 16.50 ಕಿ.ಮೀ. ಹಾಗೂ 16.42 ಕಿ.ಮೀ. ಮೈಲೇಜ್‌ ಕೊಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಕಾರು ಏಳು ಬಣ್ಣಗಳ ವೇರಿಯಂಟ್‌ ನಲ್ಲಿ ಸಿಗಲಿದೆ. ಅಂದರೆ, ಮಹೋಗನಿ ಬ್ರೌನ್‌, ಕಾಸ್ಪಿಯನ್‌ ಬ್ಲೂ, ಕಯನ್ನೆ ಆರೇಂ,ಜ್ ಮೂನ್‌ಲೈಟ್‌ ಸಿಲ್ವರ್‌, ಸ್ಲೇಟ್‌ ಗ್ರೇ, ಔಟ್‌ ಬ್ಯಾಕ್‌ ಬ್ರೌಂಜ್‌ ಮತ್ತು ಪರ್ಲ್ ವೈಟ್‌ ಬಣ್ಣಗಳಲ್ಲಿ ಲಭ್ಯವಿದೆ.

ಅಂದ ಹಾಗೆ, ಈ ಕಾರಿನ ವಿಶೇಷಗಳೆಂದರೆ, ಕೀಲೆಸ್‌ ಎಂಟ್ರಿ, ಸ್ಮಾರ್ಟ್‌ ಸ್ಟಾರ್ಟ್‌ ಸ್ಟಾಪ್‌, ಇಂಪ್ಯಾಕ್ಟ್ ಸೆನ್ಸಿಂಗ್‌ ಡೋರ್‌ ಲಾಕ್‌, ರಿವರ್ಸ್‌ ಪಾರ್ಕಿಂಗ್‌ ಸೆನ್ಸಾರ್‌, ಡ್ಯುಯಲ್‌ ಏರ್‌ ಬ್ಯಾಗ್‌. ಈ ಕಾರಿನ ಬೆಲೆ ದೆಹಲಿಯ ಎಕ್ಸ್‌ ಶೋರೂಂನಲ್ಲೇ 10.49 ಲಕ್ಷ ರೂ. ಗಳಾಗಲಿದೆ. ಇದು ಬಿಎಸ್‌ 6 ಎಂಜಿನ್‌ ಆಧಾರಿತವಾಗಿದೆ.

 

– ಸೋಮಶೇಖರ ಸಿ.ಜೆ.

Advertisement

Udayavani is now on Telegram. Click here to join our channel and stay updated with the latest news.

Next