Advertisement

ಡಾ.ಕಲಾಂ ಪ್ರಶಸ್ತಿ ಹೆಸರು ಬದಲು, YSR ಹೆಸರಿಗೆ ಆಕ್ರೋಶ; ಕೊನೆಗೂ ಮಣಿದ ಜಗನ್

09:24 AM Nov 06, 2019 | Nagendra Trasi |

ಅಮರಾವತಿ: ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರಶಸ್ತಿಯ ಹೆಸರನ್ನು “ವೈಎಸ್ ಆರ್ ವಿದ್ಯಾ ಪುರಸ್ಕಾರ್” ಎಂದು ಬದಲಾಯಿಸಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಜಗನ್ ಸರ್ಕಾರ ಮತ್ತೆ ಕಲಾಂ ಹೆಸರನ್ನು ಮುಂದುವರಿಸುವುದಾಗಿ ತಿಳಿಸಿದೆ.

Advertisement

ಎಪಿಜೆ ಅಬ್ದುಲ್ ಕಲಾಂ ಪ್ರತಿಭಾ ಪುರಸ್ಕಾರ್ ಹೆಸರನ್ನು ವೈಎಸ್ ಆರ್ ವಿದ್ಯಾ ಪುರಸ್ಕಾರ್ ಎಂದು ಬದಲಾಯಿಸಲಾಗಿದೆ ಎಂದು ಜಗನ್ ಸರ್ಕಾರ ಸೋಮವಾರ ಘೋಷಿಸಿತ್ತು. ನವೆಂಬರ್ 11ರ ರಾಷ್ಟ್ರೀಯ ಶೈಕ್ಷಣಿಕ ದಿನಾಚರಣೆ ಅಂಗವಾಗಿ ಈ ಪ್ರಶಸ್ತಿಯನ್ನು ವಿತರಿಸಲಾಗುತ್ತಿದೆ. ನವೆಂಬರ್ 11 ಸ್ವಾತಂತ್ರ್ಯ ಹೋರಾಟಗಾರ ಮೌಲಾನ ಅಬ್ದುಲ್ ಕಲಾಂ ಆಜಾದ್ ಅವರ ಜನ್ಮ ಜಯಂತಿಯಾಗಿದೆ.

ಸಿಎಂ ಜಗನ್ ನಿರ್ಧಾರಕ್ಕೆ ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ರಾಜ್ಯಾದ್ಯಂತ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ದಾಳಿ ನಡೆಸಿದ್ದರು. ಸಾರ್ವಜನಿಕರ ಟೀಕೆಗೆ ಮಣಿದ ಮುಖ್ಯಮಂತ್ರಿ ಜಗನ್ ರೆಡ್ಡಿ, ವೈಎಸ್ ಆರ್ ವಿದ್ಯಾ ಪುರಸ್ಕಾರ್ ಆದೇಶವನ್ನು ರದ್ದುಗೊಳಿಸಿದ್ದು, ಡಾ.ಕಲಾಂ, ಮಹಾತ್ಮ ಗಾಂಧಿ ಹಾಗೂ ಬಿಆರ್ ಅಂಬೇಡ್ಕರ್ ಹೆಸರಿನಲ್ಲಿ ಪ್ರಶಸ್ತಿ ನೀಡುವುದಾಗಿ ಎಚ್ಚರಿಕೆ ನೀಡಿರುವುದಾಗಿ ಮಂಗಳವಾರ ಬೆಳಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.

ವೈಎಸ್ ಆರ್(ವೈಎಸ್ ರಾಜಶೇಖರ್ ರೆಡ್ಡಿ ಜಗನ್ ಮೋಹನ್ ರೆಡ್ಡಿಯ ತಂದೆ. ಎರಡು ಬಾರಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ನ ಪ್ರಭಾವಿ ಮುಖಂಡರಲ್ಲಿ ವೈಎಸ್ ಆರ್ ಒಬ್ಬರಾಗಿದ್ದರು. 2009ರಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಪತನದಲ್ಲಿ ವೈಎಸ್ ಆರ್ ವಿಧಿವಶರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next