Advertisement

ಪುತ್ತೂರು ನಗರ ಸಭೆಯಿಂದ ಅಕ್ರಮ ಮನೆ ತೆರವು

02:33 PM Jul 04, 2018 | Team Udayavani |

ಬಲ್ನಾಡು : ಸುಂಕದಮೂಲೆ ಎಂಬಲ್ಲಿ ನಗರಸಭೆ ನಿವೇಶನಕ್ಕೆ ಮಂಜೂರಾದ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆಯನ್ನು ಪೊಲೀಸರ ಸಹಕಾರದಿಂದ ಅಧಿಕಾರಿಗಳು ತೆರವುಗೊಳಿಸಿದರು. ಕಾರ್ಯಾಚರಣೆಗೆ ಮನೆಯವರು ಅಡ್ಡಿಪಡಿಸಿದರು. ಒಂದು ದಿನ ಸಮಯಾವಕಾಶ ನೀಡುವಂತೆ ಗೋಗರೆದರು. ಮೇಲಧಿಕಾರಿಗಳ ಆದೇಶದಂತೆ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಸೋಮವಾರವೇ ಎಚ್ಚರಿಕೆ ನೀಡಿದರೂ ತೆರವು ಮಾಡಿಲ್ಲ ಎಂದು ಅಧಿಕಾರಿಗಳು ಉತ್ತರಿಸಿದರು. ಪ್ರತಿರೋಧದ ನಡುವೆಯೇ ಅಕ್ರಮ ಮನೆ ತೆರವು ಮಾಡಲಾಯಿತು.

Advertisement

ಸುಂಕದಮೂಲೆಯ ನಗರಸಭೆಯ 2.5 ಎಕರೆ ಜಾಗದಲ್ಲಿ ಅಕ್ರಮ ಮನೆ ಕಟ್ಟುತ್ತಿದ್ದಾರೆ ಎಂದು ಸೋಮವಾರ ನಗರಸಭೆಗೆ ಮಾಹಿತಿ ನೀಡಲಾಗಿತ್ತು. ತಕ್ಷಣ ತೆರಳಿದ ಅಧಿಕಾರಿಗಳು, ತೆರವು ಮಾಡುವಂತೆ ಸೂಚಿಸಿದರು. ಆದರೆ ಸೋಮವಾರ ರಾತ್ರಿಯೇ ಮನೆಗೆ ಸಿಮೆಂಟ್‌ ಶೀಟ್‌ ಹಾಕಿ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಿದ್ದರು. ಈ ಬಗ್ಗೆ ನಗರಸಭೆಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಮನೆಯ ವಸ್ತುಗಳಿಗೆ ಹಾನಿಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿದರು. ಮನೆಯೊಳಗಿದ್ದ ಸಾಮಗ್ರಿ ಹೊರಗಿಟ್ಟು, ಸಿಮೆಂಟ್‌ ಶೀಟ್‌ಗಳನ್ನು ತೆರವು ಮಾಡಿದರು. ದಾರಂದ, ಕಲ್ಲುಗಳನ್ನು ತೆಗೆದರು.

Advertisement

Udayavani is now on Telegram. Click here to join our channel and stay updated with the latest news.

Next