Advertisement
ಕಾರಣ, ಮಹಾನಗರ ಪಾಲಿಕೆಯ ಮೇಯರ್ ಭಾಸ್ಕರ್ ಕೆ. ನಿರ್ದೇಶನದಲ್ಲಿ ಸಂಬಂಧಪಟ್ಟ ಅಧಿಕಾರಿಗಳೂ ಸೇರಿದಂತೆ ಸುಮರು 40 ಜನರ ತಂಡವೊಂದು ಅಪಾಯಕಾರಿ ಮರದ ರೆಂಬೆಗಳನ್ನು ಕಡಿದು ಅನಾಹುತವಾಗದಂತೆ ಶುಕ್ರವಾರ ಕ್ರಮ ಕೈಗೊಂಡಿದ್ದಾರೆ. ನಗರದ ಜೈಲ್‌ರೋಡ್‌ನ ಸುಬ್ರಹ್ಮಣ್ಯ ಸಭಾದ ಬಳಿ ಬೃಹತ್ ಗಾತ್ರದ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿದ್ದು, ಅದರ ರೆಂಬೆಗಳನ್ನು ತೆರವುಗೊಳಿಸುವಂತೆ ಮೂರುವರ್ಷ ಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರಿತ್ತ ಬಗ್ಗೆ ಹಾಗೂ ಕ್ರಮ ಕೈಗೊಳ್ಳದಿರುವ ಕುರಿತಾಗಿ ಸ್ಥಳೀಯ ನಿವಾಸಿ ಹರಿರಾಮ ಶೆಣೈ ಸುದಿನಕ್ಕೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮೇ 24ರ ಸುದಿನದಲ್ಲಿ ಅಪಾಯಕಾರಿ ಮರದ ಸಚಿತ್ರ ವರದಿ ಪ್ರಕಟಗೊಂಡಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಮಹಾನಗರ ಪಾಲಿಕೆ ಶುಕ್ರವಾರ ಅರಣ್ಯ ಇಲಾಖೆ, ಮೆಸ್ಕಾಂ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಬೃಹತ್ ಗಾತ್ರದ ಮರದ ರೆಂಬೆಗಳನ್ನು ಕಡಿಯುವ
ಕೆಲಸ ಕೈಗೊಂಡರು. ಅದಕ್ಕೂ ಮೊದಲು ಮೆಸ್ಕಾಂ ಇಲಾಖೆ ವಿದ್ಯುತ್‌ತಂತಿಯನ್ನು ತೆರವುಗೊಳಿಸಿ ಸಹಕರಿಸಿದರು.
ಈ ಬಗ್ಗೆ ಸುದಿನದೊಂದಿಗೆ ಸಂತಸ ಹಂಚಿಕೊಂಡ ದೂರುದಾರರಾದ ಹರಿರಾಮ ಶೆಣೈ, ಈ ಮರ ಸುಮಾರು 80 ವರ್ಷಕ್ಕಿಂತಲೂ ಹಳೆ ಯ ದಾಗಿದ್ದು, ಗಾಳಿ ಮಳೆ ಬರುವಾಗ ಸಹಜವಾಗಿಯೇ ಆತಂಕಗೊಳ್ಳುತ್ತಿದ್ದೆವು. 2015 ರಿಂದಲೇ ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರಿತ್ತಿದ್ದೆ. ಹಿಂದಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಕೊಂಬೆಗಳನ್ನು ಕತ್ತರಿಸಲು ಕ್ರಮಕೈಗೊಳ್ಳಬೇಕೆಂದು ಹಿಂಬರಹ ನೀಡಿದ್ದರೂ ಪ್ರಯೋಜನವಾಗಿಲ್ಲ. ಇದೀಗ
ಸುದಿನದಲ್ಲಿ ಸುದ್ದಿ ಪ್ರಕಟವಾದ ಬಳಿಕ ಮೇಯರ್ ಭಾಸ್ಕರ್ ಕೆ. ಅವರು ಸೂಕ್ತ ಕ್ರಮಕೈಗೊಂಡಿದ್ದು, ಸಮಸ್ಯೆ ಬಹೆಹರಿದಿರುವುದು ಸಂತಸ ತಂದಿದೆ. ಅದಕ್ಕಾಗಿ ಪತ್ರಿಕೆ ಮತ್ತು ಮೇಯರ್ ಅವರನ್ನು ಅಭಿನಂದಿಸುತ್ತೇನೆ ಎಂದರು.