Advertisement

ಸಚಿವ ಸ್ಥಾನದಿಂದ ಹೆಗಡೆ ವಜಾಮಾಡಿ

11:56 AM Dec 31, 2017 | Team Udayavani |

ಬೀದರ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ವಿಜಯಪುರದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿಗಳಿಗೆ ಗಲ್ಲುಶಿಕ್ಷೆಗೆ ಗುರಿ ಪಡಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Advertisement

ಡಿಎಸ್‌ಎಸ್‌ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಜಿಲ್ಲಾ ಸಂಘಟನಾ ಸಂಚಾಲಕರಾದ ಅರುಣ ಪಟೇಲ್‌ ಮತ್ತು ಮನೋಹರ ಹೊಸಮನಿ ನೇತೃತ್ವದಲ್ಲಿ ನಗರದ ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಮಾನವ ಸರಪಳಿ ಮೂಲಕ ರಸ್ತೆ ತಡೆ ನಡೆಸಿದರು.

ಈ ವೇಳೆ ಮಹಿಳೆಯರು ಕೈಯಲ್ಲಿ ಪೊರಕೆ ಹಿಡಿದರೆ, ಕಾರ್ಯಕರ್ತರು ಸಚಿವ ಹೆಗಡೆ ಅವರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರಧಾನಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.

ಬಿಜೆಪಿ ಮುಂಚೂಣಿ ರಾಜಕಾರಣಿಗಳು ಮೀಸಲಾತಿ ತೆಗೆದು ಹಾಕಬೇಕು ಎಂದು ಒಬ್ಬರು ಹೇಳಿದರೆ ಮತ್ತೂಬ್ಬರು ಹೆಣ್ಣು ಮಕ್ಕಳ ಉಡಿಗೆ ತೊಡಿಗೆ ಬಗ್ಗೆ ಮಾತನಾಡುತ್ತಾರೆ. ಇನ್ನೊಬ್ಬರು ಸಂವಿಧಾನ ಬದಲಾಯಿಸಬೇಕು ಎಂದು
ಹೇಳುತ್ತಾರೆ. ಬಿಜೆಪಿ ಮತ್ತು ಸಂಘ ಪರಿವಾರದ ಸದಸ್ಯರಿಂದ ಪದೇ ಪದೇ ದೀನ ದಲಿತರ, ಅಸ್ಪೃಶ್ಯರ ಮೇಲೆ ಶಾರೀರಿಕ, ಮಾನಸಿಕ ಮತ್ತು ಭಾವನಾತ್ಮಕ ಹಿಂಸೆಗೆ ಒಳಪಡುವ ಶೈಲಿಯ ಹೇಳಿಕೆಗಳು ನಿರಂತರವಾಗಿ ಹೊರ ಹೊಮ್ಮುತ್ತಿವೆ ಎಂದು ದೂರಲಾಗಿದೆ. 

ವಿಜಯಪುರದಲ್ಲಿ ವಿದ್ಯಾರ್ಥಿನಿ ಬಲತ್ಕಾರ ಮಾಡಿ ಕೊಲೆಗೈದ ಬಲತ್ಕಾರಿಗಳನ್ನು ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕು.
ಈ ಕೃತ್ಯದ ಹಿಂದಿರುವ ಎಲ್ಲ ಪಾತಕಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮಹಿಳೆಯರ ರಕ್ಷಣೆಗೆ ವಿಶೇಷ ಪಡೆ ರಚಿಸಬೇಕು ಎಂದು ಒತ್ತಾಯಿಸಲಾಗಿದೆ.

Advertisement

ಫರ್ನಾಂಡಿಸ್‌ ಹಿಪ್ಪಳಗಾಂವ, ಪ್ರಮುಖರಾದ ವಾಮನ ಮೈಸಲಗೆ, ದಯಾಸಾಗರ ಭೆಂಡೆ, ದಿಲೀಪ ಮರಪಳ್ಳಿ, ರಾಜಕುಮಾರ ಬನ್ನೇರ್‌, ಅಂಬಾದಾಸ ಗಾಯಕವಾಡ, ಜಗನ್ನಾಥ ಬಡಿಗೇರ, ರಾಜಕುಮಾರ ಮೊರೆ, ಮಹೇಶ ಗೊರನಳ್ಳಿ, ಪ್ರಭು ಬಸಂತಪುರ, ರಾಜಕುಮಾರ ವಾಘಮಾರೆ, ಶಿವರಾಜ ತಡಪಳ್ಳಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next