Advertisement

ಕಾರ್ಯಪಡೆಯಿಂದ ಶಾಸಕರನ್ನು ತೆಗೆದುಹಾಕಿ: ಕೆ.ಎಸ್‌.ಈಶ್ವರಪ್ಪ

11:22 AM Jun 21, 2017 | |

ವಿಧಾನಪರಿಷತ್ತು: ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ನಿರ್ವಹಿಸಲು ಇರುವ ಕಾರ್ಯಪಡೆ (ಟಾಸ್ಕ್ಫೋರ್ಸ್‌)ಯ ನೇತೃತ್ವದಿಂದ ಶಾಸಕರನ್ನು ಕೈಬಿಡುವಂತೆ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಸರ್ಕಾರವನ್ನು ಆಗ್ರಹಿಸಿದ್ದಾರೆ.

Advertisement

ಬರದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಕಾರ್ಯಪಡೆಯಿಂದ ಶಾಸಕರನ್ನು ತೆಗೆದುಹಾಕಿ ಸ್ಥಳೀಯ
ಸಂಸ್ಥೆಗಳ ಚುನಾಯಿತ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಿ. ಬೇಕಿದ್ದರೆ ಅದಕ್ಕೆ ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರನ್ನು ಸೇರಿಸಿ ಎಂದು ಸಲಹೆ ನೀಡಿದರು.

ಬರಗಾಲದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗಿದೆ. ಆದರೆ, ಶಾಸಕರ ನೇತೃತ್ವದ ಕಾರ್ಯಪಡೆ ಸಭೆಗಳನ್ನು ಮಾಡುತ್ತಿಲ್ಲ. ಬಗರ್‌ ಹುಕುಂ ಸಾಗುವಳಿ ಮತ್ತು ಅಕ್ರಮ-ಸಕ್ರಮ ಅರ್ಜಿ ವಿಲೇವಾರಿ ಮಾಡಬೇಕಾದ ಶಾಸಕರ ನೇತೃತ್ವದ ಸಮಿತಿ ಸರಿಯಾಗಿ ಸಭೆ ನಡೆಸುತ್ತಿಲ್ಲವೆಂದು ಅನೇಕ ಬಾರಿ ಕಂದಾಯ ಸಚಿವರೇ ಅಳಲು ತೋಡಿಕೊಂಡಿದ್ದಾರೆ.

ಅದೇ ರೀತಿ ವಸತಿ ಯೋಜನೆಗಳ ಫ‌ಲಾನುಭವಿಗಳ ಆಯ್ಕೆಯ ಶಾಸಕರ ನೇತೃತ್ವದ ಸಮಿತಿ ಬಗ್ಗೆಯೂ ಅಪಸ್ವರಗಳು ಕೇಳಿ ಬರುತ್ತಿದೆ. ಈಗ ಕುಡಿಯುವ ನೀರಿನ ವ್ಯವಸ್ಥೆ ನಿರ್ವಹಿಸುವ ಶಾಸಕರ ನೇತೃತ್ವದ ಕಾರ್ಯಪಡೆಯ ಕತೆಯೂ ಅದೇ ಆಗಿದೆ. ಹಾಗಾಗಿ ಕಾರ್ಯಪಡೆಯಿಂದ ಶಾಸಕರನ್ನು ತೆಗೆದುಹಾಕಿ, ಸ್ಥಳೀಯ ಸಂಸ್ಥೆಗಳ ಚುನಾಯಿತ ಮುಖ್ಯಸ್ಥರಿಗೆ ಅದರ ಜವಾಬ್ದಾರಿ ಕೊಡಬೇಕು ಎಂದು ಈಶ್ವರಪ್ಪ ಸರ್ಕಾರಕ್ಕೆ ಸಲಹೆ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ವಿ.ಎಸ್‌.ಉಗ್ರಪ್ಪ, ಪಂಚಾಯತ್‌ರಾಜ್‌ ವ್ಯವಸ್ಥೆಯ ಅಧಿಕಾರ ವಿಕೇಂದ್ರೀಕರಣ ಆಡಳಿತ ಮಾದರಿಯಲ್ಲಿ ಶಾಸಕರ ನೇತೃತ್ವದ ಸಮಿತಿಗಳ ಬಗ್ಗೆ ನ್ಯಾಯಾಲಯ ಇತ್ತಿಚಿಗಷ್ಟೇ ನೀಡಿರುವ ತೀರ್ಪನ್ನೂ ಗಮನಿಸಬೇಕಾಗಿದೆ ಎಂದರು.

ಇದಕ್ಕೆ ಉತ್ತರಿಸಿದ ಈಶ್ವರಪ್ಪ, ನಾನು ಕಾನೂನು ಪಂಡಿತ ಅಲ್ಲ. ಆದರೆ, ಪ್ರಾಯೋಗಿಕ ಸಮಸ್ಯೆಗಳನ್ನು 
ಮುಂದಿಟ್ಟಿದ್ದೇನೆ.ಶಾಸಕರ ನೇತೃತ್ವದ ಕಾರ್ಯಪಡೆ ಸಂವಿಧಾನ ವಿರೋಧಿ. ಹಾಗಾಗಿ ಕಾನೂನು-ನಿಯಮಗಳಿಗೆ ತಕ್ಕಂತೆ ಕಾರ್ಯಪಡೆ ರಚನೆಯಾಗಬೇಕು ಅನ್ನುವುದು ನನ್ನ ಬೇಡಿಕೆ ಎಂದರು.

Advertisement

ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫ‌ಲವಾಗಿದೆ. ಬರಪರಿಹಾರ ಕಾಮಗಾರಿ ಪರಿಶೀಲನೆ
ಮುಖ್ಯಮಂತ್ರಿಯವರ ವಿಡಿಯೋ ಕಾನ್‌#ರೆನ್ಸ್‌ಗೆ ಮಾತ್ರ ಸಿಮೀತವಾಗಿದೆ. ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು,
ಶಾಸಕರು ಯಾರೂ ಸ್ಥಳಕ್ಕೆ ಭೇಟಿ ಕೊಡುತ್ತಿಲ್ಲ ಎಂದು ಈಶ್ವರಪ್ಪ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. 

ಅಧಿಕಾರಿಗಳು ಲಕ್ವಾ
ಹೊಡೆದು ಸಾಯಲಿ

ಗೋವುಗಳಿಗೆ ತಿನ್ನಿಸುವ ಮೇವಿನಲ್ಲೂ ದುಡ್ಡು ಹೊಡೆ ಯುವ ಅಧಿಕಾರಿಗಳು “ಲಕ್ವಾ’ ಹೊಡೆದು ಸಾಯಲಿ
ಎಂದು ಕೆ.ಎಸ್‌.ಈಶ್ವರಪ್ಪ ಶಾಪ ಹಾಕಿದ ಪ್ರಸಂಗ ಮಂಗಳವಾರ ಮೇಲ್ಮನೆಯಲ್ಲಿ ನಡೆಯಿತು. ಬರದ ಕುರಿತು ಮಾತನಾಡುತ್ತ, ಗೋವುಗಳಿಗೆ ತಿನ್ನಿಸುವ ಆಹಾರದಲ್ಲೂ ಅಧಿಕಾರಿಗಳು ದುಡ್ಡು ಹೊಡೆಯುತ್ತಾರೆ. ಇಂತಹವರಿಗೆ ಅಂತಿಂಥ ಸಾವು ಬರುವುದಿಲ್ಲ. ಅಂತಹ ಅಧಿಕಾರಿಗಳ ಮಕ್ಕಳು ಲಕ್ವಾ ಹೊಡೆದು ಸಾಯುತ್ತಾರೆ ಎಂದು ಮಾತಿನ ಭರಾಟೆಯಲ್ಲಿ ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ರಾಮಚಂದ್ರಗೌಡ, ಅಪ್ಪ ಮಾಡಿದ ತಪ್ಪಿಗೆ ಮಕ್ಕಳಿಗೆ ಶಾಪ ಹಾಕುವುದು ಸರಿಯಲ್ಲ, ತಾವು ಆಡಿದ ಮಾತು ವಾಪಸ್‌ ಪಡೆಯಿರಿ ಎಂದರು. ನಾನು ನೊಂದುಕೊಂಡು ಈ ಮಾತನ್ನು ಹೇಳುತ್ತಿದ್ದೇನೆ. ಜನ-ಜಾನುವಾರುಗಳು ಕಷ್ಟದಲ್ಲಿರುವಾಗ ಅದಕ್ಕೆ ಸ್ಪಂದಿಸದ ಅಧಿಕಾರಿಗಳು ಪ್ರತಿಯೊಂದರಲ್ಲೂ ದುಡ್ಡು ಹೊಡೆಯುತ್ತಾರೆ. ಗೋವು ಗಳಿಗೆ ಹಾಕುವ ಮೇವಿನಲ್ಲೂ ದುಡ್ಡು ಹೊಡೆಯುತ್ತಾರೆ ಎಂದರೆ, ಎಷ್ಟೊಂದು ನಾಚಿಕೆಗೇಡಿನ ಸಂಗತಿ. ಆಯಿತು ಮಕ್ಕಳಿಗೆ ಲಕ್ವಾ ಹೊಡೆಯಲಿ ಎಂದು ಹೇಳಿದ್ದನ್ನು ವಾಪಸ್‌ ಪಡೆಯುತ್ತೇನೆ. ಆದರೆ, ಅಧಿಕಾರಿಗಳಿಗೆ ಮಾತ್ರ ಅಂತಹ ಸಾವೇ ಬರಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next