Advertisement

ಕರ್ಫ್ಯೂ ಮಾಡಿ ಜನರ ಜೀವನಕ್ಕೆ ತೊಂದರೆ ಮಾಡುವುದು ಸರಿಯಲ್ಲ: ಶೋಭಾ ಕರಂದ್ಲಾಜೆ

02:17 PM Jan 21, 2022 | Team Udayavani |

ಚಿಕ್ಕಮಗಳೂರು: ಕೋವಿಡ್ ಮಧ್ಯೆಯೇ ಕೆಲವು ತಿಂಗಳು ಬದುಕಬೇಕಿದೆ. ಕರ್ಫ್ಯೂ ಮಾಡಿ ಜನರ ಜೀವನಕ್ಕೆ ತೊಂದರೆ ಮಾಡುವುದು ಸರಿಯಲ್ಲ. ಜನ ಶಿಸ್ತು ಪಾಲಿಸಿದರೆ ಲಾಕ್‍ಡೌನ್, ಕರ್ಫ್ಯೂ ಅಗತ್ಯವಿಲ್ಲ. ಆದರೆ, ಜನ ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ, ಆರೋಗ್ಯ ಇಲಾಖೆ ತಜ್ಞರ ಅಭಿಪ್ರಾಯ ಪಡೆದು ಯೋಚನೆ ಮಾಡಬೇಕು. ಲಾಕ್‍ಡೌನ್‍ನಿಂದ ಆರ್ಥಿಕವಾಗಿ ಹಿನ್ನೆಡೆಯಾಗುತ್ತಿದೆ ಎನ್ನುವುದು ಜನರ ಭಾವನೆ ಎಂದರು.

ಇದನ್ನೂ ಓದಿ:ಸ್ವಾತಂತ್ರ್ಯ ಹೋರಾಟಕ್ಕೆ ರಾಜ್ಯದ ಕೊಡುಗೆ:’ಅಮೃತ ಭಾರತಿಗೆ ಕನ್ನಡದ ಆರತಿ’ ಕಾರ್ಯಕ್ರಮ

ಸರ್ಕಾರ ಕರ್ಫ್ಯೂ ಹಿಂಪಡೆಯಬೇಕು, ಮಾಸ್ಕ್, ಸಾಮಾಜಿಕ ಅಂತರವನ್ನು ಕಡ್ಡಾಯಕ್ಕೆ ಕ್ರಮಕೈಗೊಳ್ಳಲಿ. ವೈಯಕ್ತಿಕ ಅಭಿಪ್ರಾಯಕ್ಕಿಂತ ತಜ್ಞರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಎರಡು ವರ್ಷದಿಂದ ಕೋವಿಡ್ ನಮ್ಮ ಜೊತೆಯೇ ಇದೆ, ಅನುಭವಿಸಿದ್ದೇವೆ. ಕರ್ಫ್ಯೂ ನಿಂದ ಆಟೋ, ಟ್ಯಾಕ್ಸಿ, ಹೊಟೇಲ್ ಉದ್ಯಮಕ್ಕೆ ಸಮಸ್ಯೆಯಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next