ನವದೆಹಲಿ: ಬೋರ್ನ್ ವಿಟಾ ಸೇರಿದಂತೆ ಎಲ್ಲಾ ಪಾನೀಯಗಳ ಪ್ಯಾಕೇಟ್ ಮೇಲೆ ನಮೂದಿಸಲಾದ “ಹೆಲ್ತ್ ಡ್ರಿಂಕ್ಸ್”(Health Drinks) ಎಂಬ ಪದವನ್ನು ತೆಗೆದುಹಾಕುವಂತೆ ವಾಣಿಜ್ಯ ಕಂಪನಿಗಳಿಗೆ ಕೇಂದ್ರ ಸರ್ಕಾರ ಆದೇಶ ನೀಡಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಸೋಲಿನಿಂದ ಕಂಗೆಟ್ಟಿರುವ ಆರ್ ಸಿಬಿಗೆ ಮತ್ತೊಂದು ಹೊಡೆತ; ಸ್ಟಾರ್ ಆಟಗಾರ ಟೂರ್ನಿಯಿಂದ ಔಟ್!
ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ, ಸಿಆರ್ ಪಿಸಿ ಕಾಯ್ದೆ 2005ರ ಸೆಕ್ಷನ್ 14ರ ಅಡಿಯಲ್ಲಿ ವಿಚಾರಣೆ ನಡೆಸಿದ್ದು, ಎಫ್ ಎಸ್ ಎಸ್ ಕಾಯ್ದೆ 2006ರ ಮತ್ತು ಸಿಆರ್ ಪಿಸಿ ಕಾಯ್ದೆ 2005ರ ಪ್ರಕಾರ ಹೆಲ್ತ್ ಡ್ರಿಂಕ್ಸ್ ಎಂದು ವ್ಯಾಖ್ಯಾನಿಸುವಂತಿಲ್ಲ ಎಂದು ಏಪ್ರಿಲ್ 10ರಂದು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.
ಬೋರ್ನ್ ವಿಟಾದಲ್ಲಿ ಸಕ್ಕರೆಯ ಅಂಶ ಮಿತಿಗಿಂತ ಹೆಚ್ಚಾಗಿರುವುದನ್ನು ಎನ್ ಸಿಪಿಸಿಆರ್ ತನಿಖೆಯಲ್ಲಿ ಪತ್ತೆಹಚ್ಚಿದೆ. ಇದಕ್ಕೂ ಮೊದಲು ಸುರಕ್ಷತಾ ಮಾನದಂಡ ಮತ್ತು ಮಾರ್ಗಸೂಚಿಯನ್ನು ಅನುಸರಿಸಲು ವಿಫಲವಾದ ಹಾಗೂ ಆರೋಗ್ಯ ಪಾನೀಯ ಎಂದು ಬಿಂಬಿಸುತ್ತಿರುವ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎನ್ ಸಿಪಿಸಿಆರ್ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಸೂಚಿಸಿತ್ತು.
ಪ್ರಾಧಿಕಾರದ ಪ್ರಕಾರ, ದೇಶದ ಆಹಾರ ಕಾನೂನು ಅನ್ವಯ ಹೆಲ್ತ್ ಡ್ರಿಂಕ್ಸ್ ಎಂದು ನಮೂದಿಸುವುದು ಕಾಯ್ದೆಯ ಉಲ್ಲಂಘನೆಯಾಗಿದೆ. ಆ ಪ್ರಕಾರ ವಾಣಿಜ್ಯ ಕಂಪನಿಗಳು ಡೈರಿ ಆಧಾರಿತ ಪಾನೀಯಗಳ ಪ್ಯಾಕೇಟ್ ಮೇಲೆ ಹೆಲ್ತ್ ಡ್ರಿಂಕ್ಸ್ ಎಂದು ನಮೂದಿಸುವಂತಿಲ್ಲ ಎಂದು ಸ್ಪಷ್ಪಪಡಿಸಿದೆ.