Advertisement

ಕೊಪ್ಪಳ: ಅಪ್ಪು ಬ್ಯಾನರ್ ಕಿತ್ತು ಹಾಕಿಸಿದ್ದಕ್ಕೆ ಜಿಲ್ಲಾಧಿಕಾರಿ ಎದುರು ಆಕ್ರೋಶ

01:15 PM Mar 19, 2022 | Team Udayavani |

ಕೊಪ್ಪಳ : ತಾಲೂಕಿನ ಹೂವಿನಹಾಳ ಗ್ರಾಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಮತ್ತು ಕನ್ನಡ ಬಾವುಟ ಕಿತ್ತು ಹಾಕಿಸಿದ್ದಕ್ಕೆ ಅಭಿಮಾನಿಗಳು ಗ್ರಾಪಂ ಸದಸ್ಯನ ವಿರುದ್ದ ಅಪ್ಪು ಅಭಿಮಾನಿಗಳು ತೀರ್ವ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಆಕ್ರೋಶದ ಬೆನ್ನಲ್ಲೇ ಬ್ಯಾನರ್ ಕಿತ್ತು ಹಾಕಿಸಿದ್ದ ಗ್ರಾಪಂ ಸದಸ್ಯ ಪತ್ರಯ್ಯ ಹಾಗೂ ಶಾಂತಯ್ಯನನ್ನು ಎಸಿ ಸೂಚನೆ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ನಡೆದ ಕಾರ್ಯಕ್ರಮಕ್ಕೆ ಅಧಿಕಾರಿಗಳು ಆಗಮಿಸಿದ ವೇಳೆ ಅಪ್ಪು ಅಭಿಮಾನಿಗಳು ಆಕ್ರೋಶ ಹೋರ ಹಾಕಿದ್ದಾರೆ. ನಾಮ ಫಲಕ, ಕನ್ನಡ ಬಾವುಟ ಕಿತ್ತು ಹಾಕಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅಪ್ಪು ಅಭಿಮಾನಿಗಳು ಗ್ರಾಮದಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ. ಎಸಿ ಹಾಗೂ ಪೊಲೀಸ್ ಅಧಿಕಾರಿಗಳ ಮುಂದೆ ಯುವಕರು ಪ್ರತಿಭಟನೆ ನಡೆಸಿದ್ದು, ಈ ವೇಳೆ ಅಪ್ಪು ಫಲಕ ಮತ್ತೆ ಸ್ಥಾಪನೆ ಮಾಡುವ ಭರವಸೆಯನ್ನು ಎಸಿ ನೀಡಿದ್ದಾರೆ.

Advertisement

ಆರೋಪಿಗಳನ್ನು ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next