ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವಂತೆ ಆರೋಗ್ಯ ಕ್ಷೇತ್ರದಲ್ಲಿನ ಸಮಸ್ಯೆಗಳು ಬಹಿರಂಗಗೊಳುತ್ತಿವೆ. ಕೊರೊನಾ ಸೋಂಕಿತ ಪ್ರಕರಣಗಳು ಪ್ರತೀ ದಿನ ಹೆಚ್ಚಾಗುತ್ತಿರುವಂತೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಲ್ಲಿ ಕೊರತೆ ಎದ್ದು ಕಾಣುತ್ತಿದ್ದು, ಅದರ ಜತೆಗೆ ಕೊರೊನಾ ರೋಗಿಗಳಿಗೆ ಜೀವರಕ್ಷಕವಾಗಿ ಕಾರ್ಯ ನಿರ್ವಹಿಸುವ ರೆಮಿಡಿಸಿವಿರ್ ಚುಚ್ಚು ಮದ್ದಿನ ಅಭಾವ ಹೆಚ್ಚಾಗಿದೆ ಎಂಬ ಆರೋಪ ಬಹಿರಂಗವಾಗಿ ಕೇಳಿ ಬರುತ್ತಿದೆ.
ರೆಮಿಡಿಸಿವಿರ್ ಅಭಾವದ ಬಗ್ಗೆ ಕೇಂದ್ರ ಸರಕಾರ ಕೂಡ ಗಂಭೀರವಾಗಿ ಪರಿಗಣಿಸಿದ್ದು, ಕಾಳಸಂತೆ ಹಾಗೂ ಕೃತಕ ಅಭಾವ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಕೊರೊನಾ ಸೋಂಕಿತ ರೋಗಿಗಳಿಗೆ ರಿಮಿಡಿಸಿವಿರ್ ಸಿಗದೇ ಸಂಕಷ್ಟ ಅನುಭವಿಸುತ್ತಿರುವುದು ಬೆಳಕಿಗೆ ಬರುತ್ತಿದೆ. ರೆಮಿಡಿಸಿವಿರ್ ಔಷಧವನ್ನು ಸರಕಾರ ಮುಕ್ತ ಮಾರು ಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸದೇ ಕೊರೊನಾ ಸೋಂಕಿತ ರೋಗಿಗೆ ಅಗತ್ಯವಿದೆ ಎಂದು ಖಾಸಗಿ ಆಸ್ಪತ್ರೆಗಳು ಬೇಡಿಕೆ ಸಲ್ಲಿಸಿದರೆ ಮಾತ್ರ ಸರಕಾರ ಅಗತ್ಯವಿದ್ದಷ್ಟು ಔಷಧವನ್ನು ಸರಬರಾಜು ಮಾಡುವ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ.
ಆದರೆ ಇದರ ಮಧ್ಯದಲ್ಲಿಯೇ ರಿಮಿಡಿಸಿವಿರ್ ಔಷಧ ಅಕ್ರಮವಾಗಿ ಮಾರಾಟ ಮಾಡುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಕ್ರಮವಾಗಿ ರಿಮಿಡಿಸಿವಿರ್ ಮಾರಾಟ ಮಾಡುವವರ ವಿರುದ್ಧ ನೇರವಾಗಿ ಎಫ್ಐಆರ್ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸರಕಾರದ ಕಟ್ಟುನಿಟ್ಟಿನ ಸೂಚನೆಯ ನಡುವೆಯೂ ಬೆಂಗಳೂರು, ಮೈಸೂರು, ಹೊಸಕೋಟೆಗಳಲ್ಲಿ ಅಕ್ರಮವಾಗಿ ಖಾಸಗಿ ಮೆಡಿಕಲ್ ಶಾಪ್‌ಗ್ಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಪ್ರಕರಣ, ಖಾಲಿ ರೆಮಿಡಿ ಸಿವಿರ್ ಬಾಟಲಿಯಲ್ಲಿ ನಕಲಿ ಔಷಧ ಸೇರಿಸಿ ಮಾರಾಟ ಮಾಡಿರುವುದು, ನೀರು ಹಾಕಿ ಮಾರಾಟ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.
ಆರೋಗ್ಯ ಕ್ಷೇತ್ರ ಎಲ್ಲವನ್ನೂ ಮೀರಿ ನಿಲ್ಲುವಂಥದ್ದು, ಈ ಕ್ಷೇತ್ರದಲ್ಲಿ ವ್ಯಾಪಾರೀಕರಣಕ್ಕಿಂತ ಮಾನವೀಯತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದೇ ಕಾರಣಕ್ಕೆ ವೈದ್ಯೋ ನಾರಾಯಣ ಹರಿ ಎಂದು ಕರೆಯಲಾಗುತ್ತದೆ. ವಿಶ್ವವನ್ನೇ ಕಾಡುತ್ತಿರುವ ಕೊರೊನಾದಂತಹ ಮಹಾಮಾರಿಯನ್ನು ನಿಯಂ ತ್ರಿಸಲು ಸರಕಾರ ಶಕ್ತಿ ಮೀರಿ ಪ್ರಯತ್ನಿಸುವ ಸಂದಿಗª ಸಮಯ ವಿದು. ಈ ಸಂದರ್ಭದಲ್ಲಿ ಆರೋಗ್ಯ ಸಂಬಂಧಿ ವಸ್ತುಗಳ ಕೃತಕ ಅಭಾವ ಸೃಷ್ಠಿಸುವುದು, ಅದರಿಂದ ಲಾಭ ಮಾಡಿಕೊಳ್ಳುವ ಮನಃಸ್ಥಿತಿಗಳು ಮಾನ ವೀ ಯತೆ ಗಿಂತ ವ್ಯಾಪಾರಿ ಮನೋಭಾವ ಹೊಂದಿದಂತಾಗುತ್ತದೆ. ಸಾವಿನ ಸಂದರ್ಭದಲ್ಲೂ ಕೃತಕ ಅಭಾವ, ಅಕ್ರಮವಾಗಿ ಹೆಚ್ಚಿನ ದರಕ್ಕೆ ಮಾರು ವುದು ಪೈಶಾಚಿಕ ಮನೋಭಾವವನ್ನು ಎತ್ತಿ ತೋರಿಸುತ್ತದೆ.
ರಾಜ್ಯ ಸರಕಾರ ಇಂತಹ ಮನಃಸ್ಥಿತಿಗಳ ವಿರುದ್ಧ ಕೇವಲ ಹೇಳಿಕೆಗಳನ್ನು ನೀಡುವ ಹಾಗೂ ಎಚ್ಚರಿಕೆ ನೀಡುವ ಬದಲು ಕಠಿನ ಶಿಕ್ಷೆ ನೀಡಿ ಈ ರೀತಿಯ ಮನಃಸ್ಥಿತಿಯವರಿಗೆ ಮಹತ್ವದ ಸಂದೇಶ ರವಾನಿಸುವ ಕೆಲಸ ಮಾಡಬೇಕಿದೆ. ಜೀವನದ ಕೊನೆಯ ಗಳಿಗೆಯಲ್ಲಿ ಜೀವ ರಕ್ಷಕವಾಗುವ ಒಂದು ಔಷಧ ದೊರೆಯದೇ ಒಂದು ಜೀವ ಕಳೆದುಕೊಂಡರೆ, ಆ ಸಾವಿಗೆ ಅಕ್ರಮವಾಗಿ ರೆಮಿಡಿಸಿವಿರ್ ಸಂಗ್ರಹಿಸಿ ಮಾರಾಟ ಮಾಡುವವರಷ್ಟೇ ಅಲ್ಲ, ಅದನ್ನು ನಡೆಯಲು ಬಿಡುವ ಆಡಳಿತವೂ ಜವಾಬ್ದಾರಿಯಾಗುತ್ತದೆ.