Advertisement
ನಗರದ ಸ್ವಾಭಿಮಾನ ಭವನದಲ್ಲಿ ನವ-ಭಾರತ ಸೇವಾ ಕನ್ನಡಿ ಚಾರಿಟಬಲ್ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ಅಕ್ಷರ ದಾತೆ ಸಾವಿತ್ರಿಬಾಯಿ ಫುಲೆ ಅವರ 190ನೇ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣುಮಕ್ಕಳಿಗೆ ಇಂದು ಶಿಕ್ಷಣ ದೊರಕುತ್ತಿರುವುದು ಸಾವಿತ್ರಿಬಾಯಿಫುಲೆ ಅವರ ಹೋರಾಟದ ಫಲ ಎಂದು ಹೇಳಿದರು.1831 ಜನವರಿ 3ರಂದು ಮಹಾರಾಷ್ಟ್ರದಲ್ಲಿ ಜನಿಸಿದ ಸಾವಿತ್ರಿಬಾಯಿ ಫುಲೆ ಅವರು ಸಮಾಜ ಸುಧಾರಣೆಗೆ ಮಹಿಳೆಯರಿಗೆ ಉತ್ತಮ ಶಿಕ್ಷಣ ಸಿಗುವಂತಾಗಬೇಕು ಎಂಬ ಪ್ರತಿಪಾದನೆಯೊಂದಿಗೆ ಹೋರಾಟ ಆರಂಭಿಸಿದರು. ಆಸಂದರ್ಭದಲ್ಲಿ ಎದುರಾದ ಪ್ರತಿರೋಧವನ್ನು ಲೆಕ್ಕಿಸದೆ ಹೋರಾಟ ಮಾಡಿದರು ಎಂದು ತಿಳಿಸಿದರು.
Related Articles
Advertisement
ಭಾರತದ ಶಿಕ್ಷಣ ವ್ಯವಸ್ಥೆಗೆ ಫುಲೆ ದಂಪತಿಗಳ ಕೊಡುಗೆಅಪಾರ. ದಾಸ್ಯ ವಿಮೋಚನೆಗೆ ಭಾರತದ ಸ್ವಾತಂತ್ರ ಸಂಗ್ರಾಮಕ್ಕೂ ಮೊದಲೇ ಇವರು ಅಜ್ಞಾನ ವಿಮೋಚನೆಗೆ ಅಕ್ಷರ ಕ್ರಾಂತಿ ಆರಂಭಿಸಿದ್ದರು. 1848ರಲ್ಲಿ ತಮ್ಮ ಮನೆಯಲ್ಲಿಯೇ ಶಾಲೆಯನ್ನು ಆರಂಭಿಸುವ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ಶೂದ್ರರು-ಅತಿ ಶೂದ್ರರು ಮತ್ತು ಮಹಿಳೆಯರಿಗೆ ವಿದ್ಯಾದಾನ ಮಾಡುವ ಮೂಲಕ ಹೊಸ ಮನ್ವಂತರವೊಂದಕ್ಕೆ ನಾಂದಿ ಹಾಡಿದರು ಎಂದು ಹೇಳಿದರು.
ಸಾಹಿತಿ ರೂಪ ಹಾಸನ್, ಪ್ರಾಧ್ಯಾಪಕಿ ಪಿ.ಭಾರತಿದೇವಿ, ನವ ಭಾರತ ಸೇವಾ ಕನ್ನಡಿ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಕುಮಾರ್‌ಗೌರವ್ ಹೆತ್ತೂರ್, ಲೇಖಕಿ ಶಾಂತ ಅತ್ನಿ, ರಜಪೂತ ಸಂಸ್ಕಾರ ಸಮಿತಿ ಜಿಲ್ಲಾಧ್ಯಕ್ಷೆ ವೇದಾವತಿ, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎಚ್.ಎಂ.ಕಾವ್ಯಶ್ರೀ, ವೈದ್ಯಾಧಿಕಾರಿ ಡಾ.ಪುಷ್ಪಲತಾ, ಇಂಸಿಇ ಕಾಲೇಜು ಪ್ರಾಧ್ಯಾಪಕ ಡಾ.ಅತ್ನಿಕೃಷ್ಣ, ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಜನಾರ್ದನ್, ದಲಿತಮುಖಂಡ ಎಚ್.ಕೆ.ಸಂದೇಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಲೋಕೇಶ್, ಕ್ರಾಂತಿಸೇನೆ ಸಂಸ್ಥಾಪಕ ಡಾ.ಅಣ್ಣಾ ಪರಮೇಶ್, ಸೀರಾರಾಮು, ರಂಗಸ್ವಾಮಿ ಪಾಲ್ಗೊಂಡಿದ್ದರು.