Advertisement
ಮಾಟುಂಗದಲ್ಲಿ ಸಮಾರಂಭ. ಹದಿನಾಲ್ಕು ಮಂದಿಯ ತಂಡ ವಿಮಾನ ಇಳಿದಾಗ ಮಧ್ಯಾಹ್ನ ಮೀರಿತ್ತು. ಏಕಕಾಲಕ್ಕೆ ಮಳೆ, ಗಾಳಿ, ಮಿಂಚು, ಗುಡುಗುಗಳ ಆರ್ಭಟ. ಕೊರೆಯುವ ಚಳಿ. ಬಿಡಿಸಿದ ಕೊಡೆಗಳು ಬುಡಮೇಲಾಗುತ್ತಿದ್ದುವು.ವಿಮಾನ ನಿಲ್ದಾಣದೊಳಗಿನ ಬಾಡಿಗೆ ವಾಹನಗಳ ಕೌಂಟರ್ ಮುಚ್ಚಿದ್ದುವು. ಮಳೆ ಮತ್ತು ನೆರೆಯ ಅಂಜಿಕೆ. ನಮ್ಮ ತಂಡದ ಬಹುತೇಕರಿಗೆ ಮುಂಬಯಿ ಹೊಸತು. ವಿಮಾನ ಪ್ರಯಾಣದ ಖುಷಿಯನ್ನು ಮಳೆ ತೋಯ್ದಿತ್ತು.
ಬೆಳ್ಳಂಬೆಳಿಗ್ಗೆ ಹೊಟ್ಟೆಗಿಳಿಸಿದ ಆಹಾರ ಕರಗಿ ನೀರಾಗಿತ್ತು. ಒಂದಡೆ ಹಸಿವು. ಮತ್ತೂಂದೆಡೆ ಮಾರ್ಗದಲ್ಲಿ ಏರಿ ನಿಂತ ನೀರು. ಹೊಂತಕಾರಿಗಳು ಎದೆಮಟ್ಟದ ನೀರಿನಲ್ಲಿ ದಾಟುತ್ತಿದ್ದರು. ಕ್ಷಣಕ್ಷಣಕ್ಕೆ ನೀರಿನ ಮಟ್ಟ ಏರುತಿತ್ತು. ಮಾರ್ಗದ ಆಚೀಚೆ ಅಂದಿನ ಉತ್ಪನ್ನಗಳನ್ನು ಮುಗಿಸುವ ಭರದಲ್ಲಿದ್ದ ಅಂಗಡಿಗಳು ಮುಳುಗಿದ್ದುವು. ದೇವರೇ ಗತಿ. ಮೊಬೈಲ್ ಒ¨ªೆಯಾಗಿ ಮುಷ್ಕರ ಹೂಡಿದ್ದುವು. ಇನ್ನೊಂದೆರಡು ಒ¨ªೆಯಾಗಿ ಮಲಗಿದ್ದುವು. ಇತ್ತ ಊರಲ್ಲೂ ದುಗುಡ. ವಾಹಿನಿಗಳಲ್ಲಿ ಮುಂಬಯಿ ಪ್ರಳಯದ ಸುದ್ದಿ ಬಿತ್ತರವಾಗುತ್ತಿತ್ತು. ಜತೆಯಲ್ಲಿದ್ದವರು ಕಾಣದ ದೇವರಲ್ಲಿ ಮೊರೆಯಿಡುತ್ತಿರುವ ದೃಶ್ಯ ಮನಕಲಕಿತ್ತು. ಅಲ್ಲಿದ್ದ ಎಲ್ಲರ ಮುಖದಲ್ಲೂ ಅಸಹಾಯಕತೆ. ಮುಂದೇನು? ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕದ ಕ್ಷಣ.
Related Articles
Advertisement
ಫ್ಲೈಓವರಿನ ಎದುರು ಮಾನವ ಸೇವಾ ಸಂಘ ಎನ್ನುವ ಫಲಕ ದೇವಾಲಯವಾಗಿ ಕಂಡಿತು. ಅಲ್ಲಿ ಗಣೇಶೋತ್ಸವದ ಆಚರಣೆಯಿತ್ತು. ಮೊಣಕಾಲಿನ ತನಕದ ನೀರಿನಲ್ಲಿ ಅತ್ತಿತ್ತ ಓಡಾಡುತ್ತಾ ಗಣೇಶನ ಆರಾಧನೆ ನಡೆಯುತಿತ್ತು. ಭಾಷೆ ಗೊತ್ತಿಲ್ಲ, ಜನರ ಪರಿಚಯವಿಲ್ಲ. ಜತೆಗಿದ್ದ ಶ್ರೀರಾಮರಿಗೆ ಅಷ್ಟಿಷ್ಟು ಹಿಂದಿ ಭಾಷೆಯ ಜ್ಞಾನವಿತ್ತು. ಧೈರ್ಯ ಮಾಡಿ ಸಂಕಷ್ಟವನ್ನು ಹೇಳಿಕೊಂಡೆವು.
ಸೇವಾ ಸಂಘದ ನಾಲ್ಕೈದು ಮಂದಿ ನಮ್ಮನ್ನೆಲ್ಲ ಕಟ್ಟಡದೊಳಗೆ ಸುರಕ್ಷಿತವಾಗಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದರು. ಬಿಸಿ ಚಹಾ, ತಿಂಡಿ, ಕ್ಯಾಂಡಲಿನ ಬೆಳಕಿನ ವ್ಯವಸ್ಥೆ ಮಾಡಿದರು. ಇಂದು ಇಲ್ಲೇ ಉಳಿಯಿರಿ ಧೈರ್ಯ ತುಂಬಿದರು. ಊರಿಗೆ ಸಂಪರ್ಕ ಮಾಡಬೇಕೆ ಎನ್ನುವ ಉಪಚಾರ. ಮಾನವ ಸೇವಾ ಸಂಘ ಎನ್ನುವ ಅರ್ಥ ಅಲ್ಲಿ ಸಾಕಾರಗೊಂಡಿತು. ದೇಶ, ಭಾಷೆ, ಆಚಾರ, ಸಂಸ್ಕೃತಿ, ಎಡ, ಬಲ ಎನ್ನುತ್ತ ಕಿತ್ತು-ಕಚ್ಚಾಡುವ ಕಾಲಘಟ್ಟದಲ್ಲಿ ನಿಜವಾದ ಮಾನವೀಯ ಮನಸ್ಸುಗಳ ಪರಿಚಯವಾಯಿತು.
ಸಂಜೆ ಏಳರ ಬಳಿಕ ಏರಿ ನಿಂತ ನೀರು ಸೊಂಟ ಮಟ್ಟಕ್ಕೆ ಇಳಿದಿತ್ತು. ಅರ್ಧ, ಮುಕ್ಕಾಲು ಕಿ. ಮೀ. ದೂರದವರೆಗೂ ನೀರಿನಲ್ಲೇ ಕಾಲ್ನಡಿಗೆ. ಅನೇಕ ಸೇವಾ ಸಂಸ್ಥೆಗಳ ಮಂದಿ ಅಲ್ಲಲ್ಲಿ ಸಹಾಯ ಮಾಡುತ್ತ, ಎಚ್ಚರಿಕೆ ಕೊಡುತ್ತ ನಿರ್ದೇಶನ ಮಾಡುತ್ತಿದ್ದರು. ಬಸ್, ಬೈಕ್, ಕಾರುಗಳು ನೀರನ್ನು ದಾಟಲು ಹುಚ್ಚು ಸಾಹಸ ಮಾಡುತ್ತಿದ್ದುವು. ಇಷ್ಟೆಲ್ಲ ಸಂದಿಗ್ಧ ಸ್ಥಿತಿಯಿ¨ªಾಗಲೂ ಕಳ್ಳರ ಭಯವನ್ನು ಮರೆಯುವಂತಿಲ್ಲ. ಮಾತೆಯರಿಗೆ ಈ ವಿಚಾರದಲ್ಲಿ ಜಾಗ್ರತೆ ವಹಿಸುವಂತೆ ಎಚ್ಚರಿಗೆ ನೀಡುತ್ತಿದ್ದರು.
ಅಂತೂ ಗಮ್ಯ ಸ್ಥಳ ತಲಪುವಾಗ ರಾತ್ರಿ ಒಂಬತ್ತು ಮೀರಿತ್ತು. ಮೂರು ದಿವಸಕ್ಕಾಗಿ ತಂದಿದ್ದ ಎಲ್ಲರ ಉಡುಪುಗಳು ತೋಯ್ದಿದ್ದುವು. ಅದೃಷ್ಟವಶಾತ್ ನೆರೆಯು ಸೆಳೆಯದೆ ಇದ್ದುದು ಪುಣ್ಯ. ನಾಲ್ಕೆçದು ಮೊಬೈಲ್‌ಗಳು ಢಮಾರ್ ಆಗಿದ್ದುವು. ಕೊನೆಗೆ ಎಲ್ಲರ ದನಿ ಒಂದೇ ಅಬ್ಟಾ ಮುಂಬಯಿ ಸಾಕು, ಇಂತಹ ಸ್ಥಿತಿ ಯಾರಿಗೂ ಬಾರದಿರಲಿ.
ಖುಷಿಯನ್ನು ಕಸಿದ ಮೇಘನ್ಪೋಟನೆರೆ ಏರಿ ನಿಂತಾಗ ಮಾರ್ಗದಲ್ಲಿದ್ದ ಮ್ಯಾನ್‌ಹೋಲ್‌ಗಳು ತೆರೆದು ಆಗುವಂತಹ ಅಪಾಯವನ್ನು ವಾಹಿನಿಗಳಲ್ಲಿ ನೋಡಿ¨ªೆ. ನೀರಿನಲ್ಲಿ ನಡೆಯುತ್ತಿ¨ªಾಗ ಆ ದೃಶ್ಯ ನೆನಪಾಗಿ ಹೆಜ್ಜೆಗಳು ಚಿಕ್ಕದಾಗಿದ್ದುವು. ಮನೆಮಂದಿ, ಸಂಬಂಧಿಕರು, ಸ್ನೇಹಿತರು ಎÇÉಾ ನೆನಪಾಗಿದ್ದರು! ಮರುದಿವಸ ರಣಬಿಸಿಲು! ಹಿಂದಿನ ದಿವಸ ಏನೂ ಆಗಿಲ್ಲ ಎನ್ನುವಂತೆ ಮುಂಬಯಿ ನಗುತ್ತಿತ್ತು. ನಮ್ಮೆಲ್ಲರ ಖುಷಿಯನ್ನು ಮೇಘಸ್ಫೋಟ ಕಸಿದಿತ್ತು. ದಾದರ್, ಸಯನ್, ಕಿಂಗ್‌ಸರ್ಕಲ್.. ಇಂತಹ ಹತ್ತಾರು ಯಾಕೆ, ನೂರಾರು ತಗ್ಗುಪ್ರದೇಶಗಳು ನೀರಿನೊಳಗೆ ಅವಿತು ವಾಸ್ತವ ಚಿತ್ರವನ್ನು ಲೋಕಕ್ಕೆ ತೆರೆದಿಟ್ಟಿವೆ. ನಗರೀಕರಣವು ಮಣ್ಣನ್ನು ಕಾಂಕ್ರಿಟ್ ಒಳಗೆ ಬಂಧಿಯಾಗಿಸಿದೆ. ನೀರು ಇಂಗುವುದು ಬಿಡಿ, ಹರಿದುಹೋಗಲು ಆಗದಂತಹ ಸ್ಥಿತಿ. ಏರಿ ನಿಂತ ನೀರನ್ನು ನೂರಾರು ಪಂಪುಗಳಿಂದ ಆರಿಸುವ ಕೆಲಸಗಳೂ ಆಗುತ್ತಿದ್ದುವು. ಹುಚ್ಚು ನೆರೆಯು ಇಂತಹ ಪಂಪ್‌ಗ್ಳ ಹುಚ್ಚಾಟಕ್ಕೆ ಮರುಗಿದೆ. ಸ್ವಯಂಸೇವಾ ಸಂಘಗಳ, ಸ್ವಯಂಸೇವಕರ ಮತ್ತು ಸರಕಾರಿ ವ್ಯವಸ್ಥೆಗಳ ಸೇವೆಗಳು ಮರೆಯುವಂತಹುದಲ್ಲ. ಸಂತ್ರಸ್ತರಿಗೆ ವಸತಿ, ಆಶನ, ಸಾಂತ್ವನ ನೀಡಿ ರಕ್ಷಿಸುವ ಹೊಣೆಯನ್ನು ಹೊತ್ತಿವೆ. ಅನೇಕ ಮನೆಗಳಂದು ಆಶ್ರಯ ತಾಣಗಳಾಗಿದ್ದುವು. ಮಂದಿರ, ಮಸೀದಿ, ಚರ್ಚ್‌ಗಳಲ್ಲಿ ಮಾನವ ಮನಸ್ಸುಗಳ ಶ್ರೀಮಂತಿಕೆ ಎದ್ದು ತೋರುತ್ತಿದ್ದುವು. ಅಲ್ಲಿ ರಾಜಕೀಯದ ಗಬ್ಬುನಾತವಿಲ್ಲ. ಅಂತಸ್ತಿನ ಅಹಮಿಕೆಯಿಲ್ಲ. ಮತೀಯತೆಯ ಸೋಂಕಿಲ್ಲ. ಆ ದಿನಕ್ಕೆ ನಾವೆÇÉಾ ಮಾನವರು ಎನ್ನುವ ಭಾವ. ಮುಂಬಯಿಯಿಂದ ಮರಳುವಾಗ 1997 ಆಗಸ್ಟ್ 23ರಂದು 34.62 ಸೆ.ಮೀ. ಮಳೆ ಬಂದ ಆ ದಿವಸವನ್ನು ನೆನಪಿಸುವ ಒಂದಿಬ್ಬರು ಹಿರಿಯರು ಜತೆಯಾದರು. 2005 ಜುಲೈ 26ರಲ್ಲೂ ಇದೇ ರೀತಿ ರಾದ್ಧಾಂತವಾಗಿತ್ತು. ಅಸಮರ್ಪಕ ರೀತಿಯ ಅಭಿವೃದ್ಧಿ ವಿನ್ಯಾಸ ಮತ್ತು ಕಾಂಕ್ರಿಟ್‌ಮಯವಾಗುತ್ತಿರುವ ಮುಂಬಯಿಯು ಚಿಕ್ಕ ನೆರೆಯನ್ನು ತಾಳಿಕೊಳ್ಳಲಾಗದ ದಿವಸಗಳಿಗೆ ಜಾರಿದೆ ಎನ್ನುವ ವಿಷಾದ ಅವರಲ್ಲಿತ್ತು. ಸಾಮಾನ್ಯ ನಾಗರಿಕರ ಗೋಳಿನ ಕತೆ, ಶ್ರಮಿಕರು, ಪ್ರಾಮಾಣಿಕ ದುಡಿಮೆಯಿಂದಲೇ ಬದುಕನ್ನು ಕಟ್ಟಿಕೊಳ್ಳುವ ಮನಸ್ಸುಗಳ ನಾಳೆಯ ದಿನಗಳ ಕೂಗು ಆಡಳಿತಕ್ಕೆ ಕೇಳದು. ಸಮುದ್ರದ ಬೋರ್ಗರೆತದೊಳಗೆ ಆ ಕೂಗುಗಳು ಮಿಳಿತವಾಗುತ್ತವಷ್ಟೇ. ದೂರದ ಮುಂಬಯಿ ಯಾಕೆ, ಬೆಂಗಳೂರಿನಲ್ಲಿ ಅರ್ಧ ದಿವಸ ಮಳೆ ಬಂದರೆ ಸಾಕು, ಮುಳುಗು ಕಥೆಗಳು ಎಷ್ಟು ಬೇಕು? ನೆರೆ ಇಳಿದಾಗ ಮತ್ತದೇ ಜಾಣ ಮರೆವು. ಯಾಕೆ ಹೇಳಿ? ನಾಗರಿಕರ ರಕ್ಷಣೆ ಯಾರಿಗೂ ಬೇಕಾಗಿಲ್ಲ. ಮೋಡಬಿತ್ತನೆ, ನದಿ ನೀರಿನ ಸಂಪನ್ನತೆಯನ್ನು ಬತ್ತಿಸುವಲ್ಲಿ ಬ್ಯುಸಿ. ಸಯನ್ ಫ್ಲೈ ಓವರ್ ಕೆಳಗಡೆ ರಕ್ಷಣೆಗಾಗಿ ನಿಂತಿದ್ದೇವಷ್ಟೇ. ಏರಿದ ನೀರು ಇಳಿಯುವುದಕ್ಕಾಗಿ ಕಾಯುತ್ತಿ¨ªಾಗ ಮಳೆಯಾಗದ ಕನ್ನಾಡಿನ ಹಳ್ಳಿಗಳು ನೆನಪಾದುವು. ಕುಡಿಯುವ ನೀರಿಗೂ ತತ್ವಾರದ ಹಳ್ಳಿಗಳು ಎಷ್ಟು ಬೇಕು? ಉತ್ತರ ಕರ್ನಾಟಕವನ್ನು ಸುತ್ತಿ ಬಂದರೆ ನೀರಿನ ûಾಮದ ದರ್ಶನವಾಗುತ್ತದೆ. – ನಾ. ಕಾರಂತ ಪೆರಾಜೆ