Advertisement

‘ಪುಟ್ಟಬಸಪ್ಪ ಕಲ್ಯಾಣ ಸ್ವಾಮಿ ಕೊಡುಗೆ ನೆನಪಿಸಿಕೊಳ್ಳಿ’

11:53 PM Jun 24, 2019 | Sriram |

ಶನಿವಾರಸಂತೆ: ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ದ ಹೋರಾಟ ಮಾಡಿದ ಕೊಡಗನ್ನಾಳಿದ ಕೊನೆಯ ಅರಸ ಚಿಕ್ಕವೀರರಾಜೇಂದ್ರ ಒಡೆಯರ ಪರ ಹೋರಾಡಿದ ಪುಟ್ಟಬಸಪ್ಪಕಲ್ಯಾಣಸ್ವಾಮಿ ಅವರ ಕೊಡುಗೆ ಅಪಾರವಾಗಿರುವ ನಿಟ್ಟಿನಲ್ಲಿ ಕೊಡಗಿನಲ್ಲಿ ಅವರ ಬಲಿದಾನದ ಕೊಡುಗೆಯನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದು ಮಡಿಕೇರಿಯ ನ್ಯಾಯವಾದಿ ಮತ್ತು ಸಾಹಿತಿ ಕೆ.ಆರ್‌.ವಿದ್ಯಾದರ್‌ ಅವರು ಅಭಿಪ್ರಾಯ ಪಟ್ಟರು.

Advertisement

ಅವರು ಗುಡುಗಳಲೆ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ಸೋಮವಾರಪೇಟೆ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಮತ್ತು ಪುಟ್ಟಬಸಪ್ಪಕಲ್ಯಾಣಸ್ವಾಮಿ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಡಿದರು.

ಕೊಡಗನ್ನಾಳಿದ ವೀರಶೈವ ಸಮುದಾಯದ ಅರಸರ ಕೊಡುಗೆ ಅಪಾರವಾದದ್ದು ಇದರಲ್ಲಿ ಕೊನೆಯ ಅರಸ ಚಿಕ್ಕ ವೀರರಾಜೇಂದ್ರ ಒಡೆಯರು ಬ್ರಿಟಿಷರ ವಿರುದ್ದ ಸ್ವಾತಂತ್ರ್ಯ್ರಕ್ಕಾಗಿ ಹೋರಾಡಿದ ಮೂಲಕ ಕೊಡಗಿನಲ್ಲಿ ರಾಜ ಪರಂಪರೆ ಕೊನೆಗೊಂಡಿತು ಎಂದರು.

ಈಗಿನ ಮೈಸೂರು, ಹಾಸನ ದಕ್ಷಿಣಕನ್ನಡದ ವರೆಗೆ ವಿಸ್ತರಿಸಿದ ಕೊಡಗಿನ ರಾಜ್ಯ ವಿಸ್ತರಿಸಿತು ಒಡೆಯರ ಪರವಾಗಿ ಈಗಿನ ಮೈಸೂರು, ದಕ್ಷಿಣಕನ್ನಡದ ಸುಳ್ಯ ಮುಂತಾದ ಕಡೆಗಳಲಲ್ಲಿ ನಡೆದ ಮೈಸೂರು ಸಿಪಾಯಿ ದಂಗೆ ಹೋರಾಟದ ಅವಧಿಯಲ್ಲಿ ಬ್ರಿಟಿಷರ ವಿರುದ್ದ ಹೋರಾಟದಲ್ಲಿ ತಂಡದ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು, ಎಂದರು.

ಅವರ ಪ್ರತಿಮೆಯನ್ನು ನಿರ್ಮಾಣ ಮಾಡುವ ಮೂಲಕ ಗೌರವ ಕೊಡಬೇಕಾಗಿದೆ ಎಂದವರು ಹೇಳಿದರು.

Advertisement

ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಎಸ್‌.ಮಹೇಶ್‌ ‌ ಕಲ್ಲುಮಠದ ಮಹಂತಸ್ವಾಮೀಜಿ, ಕಿರಿಕೊಡ್ಲಿ ಶ್ರೀ ‌ಸದಾಶಿವ ಸ್ವಾಮೀಜಿ, ರಾಜೇಶ್ವರಿ ನಾಗರಾಜ್‌ ಕೆ.ಬಿ.ಹಾಲಪ್ಪ ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಶಿಡುಗಳಲೆ ಮಠದ ಶ್ರೀ ಇಮ್ಮುಡಿ ಶಿವಲಿಂಗಮಹಾ ಸ್ವಾಮೀಜಿ, ಡಿ.ಬಿ.ಧರ್ಮಪ್ಪ, ವೀರಾಜಪೇಟೆ ಸಂದೀಪ್‌, ಸಿ.ಎಂ.ಪುಟ್ಟಸ್ವಾಮಿ, ಜಿ.ಎಂ.ಕಾಂತರಾಜು ಮೊದಲಾದವರು ಉಪಸ್ಥಿತರಿದ್ದರು.

ತ್ಯಾಗ ದೊಡ್ಡದು
ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ-ಚಿಕ್ಕ ವೀರರಾಜೇಂದ್ರ ಒಡೆಯರು ದೇಶದ ಎಲ್ಲ ರಾಜ್ಯಗಳ ಜನರಿಗೆ ಆಶ್ರಯಕೊಟ್ಟ ಹೃದಯ ವಿಶಾಲತೆಗೆ ಹೆಸರಾದ ಅರಸರಾಗಿದ್ದರು. ಬ್ರಿಟಿಷರ ವಿರುದ್ದ ಹೋರಾಡಿದ ಕೆಚ್ಚೆದೆಯ ಅರಸ ಎನ್ನಿಸಿಕೊಂಡಿದ್ದರು ಎಂದು ಹೇಳಿದರು. ಚಿಕ್ಕ ವೀರರಾಜೇಂದ್ರ ಒಡೆಯರ ಪರಕಲ್ಯಾಣಸ್ವಾಮಿ ಅವರು ಬ್ರಿಟಿಷರ ವಿರುದ್ದ ಹೋರಾಡಿದ ಕಲಿಯಾಗಿ ಬ್ರಿಟಿಷ್‌ ಸರಕಾರ ಅವರನ್ನು ಗಲ್ಲಿಗೇರಿಸಿತ್ತು. ಅವರ ತ್ಯಾಗ ಇಷ್ಟುದೊಡ್ಡದಿದ್ದರೂ ಕೊಡಗಿನಲ್ಲಿ ಅವರನ್ನು ಸ್ಮರಿಸದಿರುವುದು ವಿಷಾಧಕರ, ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next